Info News
Trending

ಶುಂಠಿ ಅತ್ಯುತ್ತಮ ಮನೆಮದ್ದು

ಸಾಮಾನ್ಯವಾಗಿ ಶುಂಠಿ ಎಲ್ಲರ ಮನೆಯಲ್ಲಿ ಇರುತ್ತದೆ. ಅಡುಗೆಯಲ್ಲಿ ಶುಂಠಿಯನ್ನು ಭಾರತೀಯರು ಒಂದಲ್ಲ ಒಂದು ರೀತಿಯಲ್ಲಿ ಬಳಸುತ್ತಾರೆ. ಶುಂಠಿಯಿಂದ ಏನೆಲ್ಲ ಪ್ರಯೋಜನ ಇದೆ ನೋಡಿ,
ಊಟಕ್ಕಿಂದ ಸ್ವಲ್ಪ ಮೊದಲು ಸ್ವಲ್ಪ ಹಸಿ ಶುಂಠಿಯನ್ನು ಉಪ್ಪಿನ ಜೊತೆಗೆ ಸೇರಿಸಿ ಅಗಿದು ತಿಂದರೆ ಅಜೀರ್ಣ ಸಮಸ್ಯೆ ಮಾಯವಾಗುತ್ತದೆ.
ಅರ್ಧ ಬೆರಳಿನಷ್ಟು ಉದ್ದದ ಹಸಿಶುಂಠಿಯನ್ನು ಚೆನ್ನಾಗಿ ಅರೆದು ನೀರಿಗೆ ಕದಡಿ ನಂತರ ಶೋಧಿಸಿ. ಜೇನು ತುಪ್ಪ ಮತ್ತು ನಿಂಬೆರಸವನ್ನು ಅದಕ್ಕೆ ಬೆರೆಸಿ ಸೇವಿಸುವುದರಿಂದ ಅಜೀರ್ಣ ಮತ್ತು ಹೊಟ್ಟೆ ಉಬ್ಬರದ ನಿವಾರಣೆಯಾಗುತ್ತದೆ.
ತಲೆನೋವಿಗೆ ಹಸಿಶುಂಠಿಯನ್ನು ನೀರಿನಲ್ಲಿ ತೇದು ಆ ಗಂಧವನ್ನು ಹಣೆಗೆ ಹಚ್ಚಿ ಬೆಚ್ಚಗೆ ಹೊದ್ದು ಮಲಗಿಕೊಂಡರೆ ಸ್ವಲ್ಪ ಸಮಯದ ನಂತರ ಬೆವರು ಸುರಿದು ಹೋಗಿ ನೋವು ಮಾಯವಾಗಿ ಹೋಗುತ್ತದೆ.
ಹಸಿಶುಂಠಿಯ ಕμÁಯಕ್ಕೆ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಅಜೀರ್ಣ ಮತ್ತು ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ.
ಪ್ರತಿ ಊಟದ ನಂತರ ಒಂದು ಶುಂಠಿ ಅಗಿದು ಚಪ್ಪರಿಸುವ ಅಭ್ಯಾಸ ಮಾಡಿಕೊಂಡರೆ ಹೊಟ್ಟೆ ಮತ್ತು ಅಜೀರ್ಣ ಹಾಗೂ ಪಿತ್ತದ ನಿವಾರಣೆಯಾಗುತ್ತದೆ.
ನಾಲಿಗೆಗೆ ರುಚಿ ಇಲ್ಲದಂತಾಗಿರುವಾಗ ಒಂದು ಚೂರು ಹಸಿಶುಂಠಿ ಸ್ವಲ್ಪ ಕಾಳು ಜೀರಿಗೆ ಮತ್ತು ಕಲ್ಲುಸಕ್ಕರೆಯನ್ನು ಚೆನ್ನಾಗಿ ಅಗಿದು ಚಪ್ಪರಿಸುವುದರಿಂದ ರುಚಿ ಗ್ರಹಣ ಶಕ್ತಿ ಅಧಿಕಗೊಳ್ಳವುದು.

Back to top button