Important
Trending

ಕುಮಟಾದಲ್ಲಿ ಮತ್ತೆ ಮೂವರಿಗೆ ಕರೊನಾ

ಕುಮಟಾ ತಾಲೂಕಿನಲ್ಲಿ ಇಂದು 3 ಕರೋನಾ ಪ್ರಕರಣ ದೃಢಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಮೂವರು ಸಹ ಮಹರಾಷ್ಟ್ರದಿಂದ ಇದೇ ಜೂನ್ 19 ರಂದು ಕುಮಟಾಕ್ಕೆ ಬಂದವರಾಗಿದ್ದು, ಕುಮಟಾಕ್ಕೆ ಬಂದ ತಕ್ಷಣ ಇವರನ್ನು ಸರಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅದೇ ದಿನದಂದು ಅವರ ಗಂಟಲುದ್ರವದ ಮಾದರಿಯನ್ನ ಸಹ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಈದೀಗ ಇವರ ವರದಿ ಪಾಸಿಟಿವ್ ಎಂದು ಬಂದಿದೆ. ಈ ಮೂವರು ನೇರವಾಗಿ ಕ್ವಾರೈಂಟೈನ್‌ಗೆ ಒಳಪಟ್ಟಿದ್ದು, ಕುಟುಂಬದ ಹಾಗೂ ಯಾವುದೇ ಸಾರ್ವಜನಿಕರ ಸಂಪರ್ಕಕ್ಕೆ ಬಂದಿಲ್ಲ. ಕರೋನಾ ಚಿಕಿತ್ಸೆಗಾಗಿ ನಾಳೆ ಇವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗುವುದು ಎಂದು ತಿಳಿದುಬಂದಿದೆ. (ಒಬ್ಬ ಯುವಕ ಹಾಗೂ ಇಬ್ಬರು ಯುವತಿ)

[sliders_pack id=”1487″]

Back to top button