Follow Us On

Google News
Uttara Kannada
Trending

ಜಿಲ್ಲೆಯಲ್ಲಿಂದು ಮೂರು ಕರೊನಾ ಕೇಸ್: ಮುರ್ಡೇಶ್ವರದಲ್ಲಿ ಹೆಚ್ಚಿದ ಆತಂಕ

ಭಟ್ಕಳ ತಾಲೂಕಿನಲ್ಲಿಂದು ಎರಡು ಕರೊನಾ ದೃಢಪಟ್ಟಿದೆ. ಸೋಂಕಿತರಿಬ್ಬರು ಮುರುಡೇಶ್ವರ ನ್ಯಾಷಲ್ ಕಾಲೋನಿ 4ನೇ ಕ್ರಾಸ್ ನಿವಾಸಿ 45 ವರ್ಷದ ಪುರುಷ ಮತ್ತು 5 ನೇ ಕ್ರಾಸಿನ 18 ವರ್ಷದ ಯುವಕ ಎಂದು ತಿಳಿದು ಬಂದಿದೆ. ಈ ಇಬ್ಬರು ಜೂನ್ 11 ರಂದು ಮಹಾರಾಷ್ಟ್ರ ರೈಲಿನ ಮೂಲಕ ಭಟ್ಕಳಕ್ಕೆ ಬಂದಿದ್ದು ಗಂಟಲು ದ್ರವ ಪರೀಕ್ಷೆ ನಡೆಸಿ ಮುರುಡೇಶ್ವದ ಮೊರಾರ್ಜಿ ದೇಸಾಯಿ ಹಾಸ್ಟೇಲ್‌ನಲ್ಲಿ ಏಳು ದಿನದ ಸರ್ಕಾರಿ ಕ್ವಾರಂಟೈನ್ ಮುಗಿಸಿದ್ದರು. ಬಳಿಕ ಜೂನ್ 18ಕ್ಕೆ ಎರಡನೇ ಬಾರಿ ಗಂಟಲು ದ್ರವ ಪರೀಕ್ಷೆ ನೀಡಿ ಹೋಮ್ ಕ್ವಾರಂಟೈನ ತೆರಳಿದ್ದು, ಇಂದು ಕರೋನ ಸೋಂಕು ಪತ್ತೆಯಾಗಿದೆ. ಇದ ಬೆನ್ನಲ್ಲೆ, ಹಳಿಯಾಳ ಮೂಲದ ಒಬ್ಬನಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇಂದು ಒಟ್ಟು ಜಿಲ್ಲೆಯಲ್ಲಿ ಮೂರು ಕರೊನಾ ಪ್ರಕರಣ ದೃಢಪಟ್ಟಂತಾಗಿದ್ದು, ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾದಂತಾಗಿದೆ.

-ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

[sliders_pack id=”1487″]

Back to top button