Info News
Trending

ಕೆಮ್ಮು-ನೆಗಡಿಗೆ ರಾಮಬಾಣ

ಹಿಂದೆಲ್ಲಾ ನಮ್ಮ ಪೂರ್ವಜನರು ಕೆಮ್ಮು, ಶೀತ ಬಂದರೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಯಾವಾಗಿನಿಂದ ಕೊರೊನಾ ವೈರಸ್ ಕಾಟ ಶುರುವಾಯ್ತೋ ಆಗಿನಿಂದ ಸಣ್ಣದಾಗಿ ಕೆಮ್ಮು ಬಂದರೂ ಭಯ ಆಗುತ್ತಿದೆ. ಏಕೆಂದರೆ ಕೆಮ್ಮು, ನೆಗಡಿ, ಜ್ವರ ಕೊರೊನಾ ವೈರಸ್ ಲಕ್ಷಣವಾಗಿದ್ದು, ಕೆಮ್ಮು ಬಂದಾಗ ಸೋಂಕಿಗೆ ತುತ್ತಾಗಿ ಬಿಟ್ವಾ? ಇದು ಸಾಧಾರಣ ಕೆಮ್ಮಾ? ಅಥವಾ ಕೊರೊನಾ ವೈರಸ್ ಲಕ್ಷಣವಾ ಎಂಬ ಪ್ರಶ್ನೆ ಕಾಡಲು ಆರಂಭವಾಗುತ್ತದೆ. ಮೇ ತಿಂಗಳು ಶುರುವಾಗುತ್ತಿದ್ದಂತೆ ಒಂದೆರಡು ಮಳೆ ಬಿದ್ದ ಮೇಲೆ ವಾತಾವರಣ ಬದಲಾವಣೆಯಿಂದ ಕೆಮ್ಮು, ನೆಗಡಿ ಆಗುವುದು ಸಹಜ. ಸಾಧಾರಣ ಕೆಮ್ಮು, ನೆಗಡಿಯನ್ನು ಮನೆಮದ್ದಿನಿಂದಲೇ ಗುಣಪಡಿಸಿಕೊಳ್ಳಬಹುದು. ಕೆಮ್ಮು, ನೆಗಡಿಗೆ ಸಾಕಷ್ಟು ಮನೆಮದ್ದುಗಳಿವೆ. ಅದರಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಈರುಳ್ಳಿ ಸಿರಪ್. ಹೌದು. ಈರುಳ್ಳಿ ಸಿರಪ್ ಕೆಮ್ಮು, ನೆಗಡಿಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದ್ದು, ಇದನ್ನು ತಯಾರಿಸುವುದು ಕೂಡ ಸುಲಭವಾಗಿದೆ. ಮನೆಯಲ್ಲಿ ಈರುಳ್ಳಿ ಸಿರಪ್ ಮಾಡಿ ಒಂದು ಡಬ್ಬದಲ್ಲಿ ತುಂಬಿಟ್ಟರೆ ಕೆಮ್ಮು ಬಂದಾಗ ಅದನ್ನು ಹೋಗಲಾಡಿಸಲು ಮದ್ದಾಗಿ ಬಳಸಬಹುದಾಗಿದೆ.
ಈರುಳ್ಳಿ ಸಿರಪ್ ತಯಾರಿಸುವುದು ಹೀಗೆ
ಈರುಳ್ಳಿಯ ಸಿಪ್ಪೆ ಸುಲಿದು ಅದನ್ನು ಚಿಕ್ಕದಾಗಿ ಕತ್ತರಿಸಿ ಗಾಜಿನ ಜಾರ್ ನಲ್ಲಿ ಹಾಕಿಡಿ. ನಂತರ ಅದರ ಮೇಲೆ 2 ಚಮಚ ಜೇನು ತುಪ್ಪ ಹಾಕಿ. ರಾತ್ರಿ ಈ ಮಿಶ್ರಣ ಮಾಡಿ ಜಾರ್ ನ ಮುಚ್ಚಳ ಹಾಕಿಡಿ. ಸುಮಾರು 6-10 ಗಂಟೆಗಳ ಕಾಲ ಈ ಮಿಶ್ರಣವನ್ನು ಹಾಗೆಯೇ ಬಿಡಿ. ನಂತರ ಜಾರ್ ತಳದಲ್ಲಿ ಸಂಗ್ರಹವಾದ ಮಿಶ್ರಣವನ್ನು ಬೇರೆ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ. ಕೆಮ್ಮು ಇದ್ದವರು ಈ ರಸವನ್ನು 1 ಚಮಚದಂತೆ ದಿನಕ್ಕೆ 2-3 ಬಾರಿ ತೆಗೆದುಕೊಂಡರೆ ಕೆಮ್ಮು ಕಡಿಮೆಯಾಗುತ್ತದೆ.

Back to top button