ಯಡಿಯೂರಪ್ಪ ಕಾರವಾರ ಭೇಟಿ ದಿಢೀರ್ ರದ್ದು: ಯಾಕೆ ಅಂತ ನೋಡಿ

ಮತ್ತೆ ಜಿಲ್ಲೆಗೆ ಯಾವಾಗ ಭೇಟಿ?

ಕಾರವಾರ :ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜುಲೈ 16ರಂದು ಜಿಲ್ಲೆಗೆ ಆಗಮಿಸಿ,ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವವರಿದ್ದರು.           ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ,ನಾಡದೊರೆಯ ಕೈಯಿಂದಲೇ ರೂ 150 ಕೋಟಿ ಅಂದಾಜು ವೆಚ್ಚದ ಆಸ್ಪತ್ರೆ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲು ವಿಶೇಷ ಪ್ರಯತ್ನ ನಡೆಸಿದ್ದರು. ಜಿಲ್ಲಾಡಳಿತ ಸಹ ಸಿಎಂ ಸ್ವಾಗತಕ್ಕೆ ನಗರವನ್ನು ಸಜ್ಜುಗೊಳಿಸುತಿತ್ತು. 

ಪೂರ್ವನಿಗದಿಯಂತೆ ಜುಲೈ 16 ರಂದು ಮುಹೂರ್ತ ಪಿಕ್ಸ ಮಾಡಲಾಗಿತ್ತಾದರೂ,ಧಾರಾಕಾರವಾಗಿ ಸುರಿಯುತ್ತಿರುವ ಮಳೆ,ಪ್ರತಿಕೂಲ ಹವಾಮಾನ , ಕರೊನಾ ವೈರಸ್‌ ಸಂಬಂಧಿತವಾಗಿ ಪ್ರಧಾನ ಮಂತ್ರಿಗಳು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಜುಲೈ 16 ರಂದೇ ವಿಡಿಯೋ ಸಂವಾದ ನಡೆಸಲಿರುವುದು, ಮತ್ತಿತರ ಕಾರಣಗಳಿಂದ ಸಿಎಂ ಭೇಟಿ ಮುಂದೂಡಲಾಗಿದೆ ಎಂದು ತಿಳಿದುಬಂದಿದ್ದು,ಜುಲೈ23 ಇಲ್ಲವೇ ಬೇರೆ ದಿನಗಳಲ್ಲಿ ಸಿಎಂ ಕಾರವಾರಕ್ಕೆ ಬರಲಿದ್ದಾರೆ ಎನ್ನಲಾಗಿದೆ.

ಸಿಎಂ ಬರುವಿಕೆಗಾಗಿ ಕಾದಿದ್ದ ಹಲವು ಜನಪ್ರತಿನಿಧಿಗಳು,ಪಕ್ಷದ ಮುಖಂಡರು,ಕಾರ್ಯಕರ್ತರಿಗೆ ಕೊಂಚ ಬೇಸರವಾಗಿದ್ದರೆ, ಸಿ. ಎಂ ಆಗಮನಕ್ಕೂ ಮುನ್ನ  ನಗರವನ್ನು ಮತ್ತಷ್ಟು ಸಜ್ಜುಗೊಳಿಸಲು ಆಡಳಿತ ವ್ಯವಸ್ಥೆಗೆ ಸಮಯವಕಾಶ ಲಭಿಸಿದಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲ

Exit mobile version