Join Our

WhatsApp Group
Info
Trending

ಅಂಕೋಲಾದಲ್ಲಿ 6 ಹೊಸ ಕೊವಿಡ್ ಕೇಸ್ : ಜುಲೈ 14 ರಂದು ಗ್ರಾಮೀಣ ವ್ಯಾಪ್ತಿಯ ಕೆಲವೆಡೆ ಮಾತ್ರ 300 ಜನರಿಗೆ ಎರಡನೇ ಡೋಸ್ ಲಸಿಕೆ

ಅಂಕೋಲಾ ಜುಲೈ 13: ತಾಲೂಕಿನಲ್ಲಿ ಮಂಗಳವಾರ 6 ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 40 ಕ್ಕೆ ಏರಿಕೆಯಾಗಿದೆ.

ತಾಲೂಕಿನ 10 ಸೊಂಕಿತರು ತಾಲೂಕ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಲಕ್ಷಣಗಳುಳ್ಳ ಇತರೆ 30 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಿನ್ನೆ ಸಾವನಪ್ಪಿದ ವ್ಯಕ್ತಿ ಸಹಿತ ಈ ವರೆಗೆ ತಾಲೂಕಿನಲ್ಲಿ 63 ಕೋವಿಡ್ ಸಾವಿನ ಪ್ರಕರಣ ದಾಖಲಾಗಿದೆ.

ಜುಲೈ 14 ರಂದು ರಾಮನಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಗಸೂರು ಮತ್ತು ಸುಂಕಸಾಳ, ಹಿಲ್ಲೂರು ಪ್ರಾ. ಆ ಕೇಂದ್ರ ವ್ಯಾಪ್ತಿಯ ಅಚವೆ, ಹಟ್ಟಿಕೇರಿ ಪ್ರಾ. ಆ. ಕೇಂದ್ರ ವ್ಯಾಪ್ತಿಯ ಬೆಲೇಕೇರಿ ಸೇರಿ ಒಟ್ಟೂ 300 ಡೋಸ್ ಮಾತ್ರ ಲಸಿಕೆ ನೀಡಲಾಗುತ್ತದೆಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Check Also
Close
Back to top button