ಕುಮಟಾ: ಸಹಾಯ ಮಾಡುವ ನೆಪ ಮಾಡಿಕೊಂಡು ಎಟಿಎಮ್ ಕಾರ್ಡ್ ಅದಲು ಬದಲು ಮಾಡಿ ಹಣ ವಂಚಿಸುತ್ತಿದ್ದ ಆರೋಪಿಯನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.
ಕಿರಣ ಕುಮಾರ ಚಿ.ಕೆ.(29) ಬಂಧಿತ ಆರೋಪಿ. ಈತ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಬೆಲಸಿಂದ,ಸದ್ಯ ಮೈಸೂರು ಜಿಲ್ಲೆಯ ಗೀರಿದರ್ಶಿನಿ ಲೇಔಟ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಪಟ್ಟಣದ ಹೊಸನಿಲ್ದಾಣ ಬಳಿ ಇರುವ ಎಸ್.ಬಿ.ಐ ಎಟಿಎಂ ನಲ್ಲಿ ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಈತ ಮೋಸ ಮಾಡಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖಾ ತಂಡವನ್ನು ರಚಿಸಿ ಸಿ.ಸಿ.ಕ್ಯಾಮರಾ ಸಹಾಯದಿಂದ ಆರೋಪಿಯನ್ನು ಮೈಸೂರಿನಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಅಲ್ಲದೆ, ಡೆಬಿಟ್ ಕಾರ್ಡನಿಂದ ಸ್ವೈಪ್ ಮಾಡಿ ತೆಗೆದ ಹಣ ಮತ್ತು ಹಣದಿಂದ ಖರೀದಿ ಮಾಡಿದ ಆಭರಣಗಳು ಹಾಗೂ ಇದೇ ರೀತಿ ವಂಚಿಸಲು ಇಟ್ಟುಕೊಂಡಿರುವ ಬೇರೆ ಬ್ಯಾಂಕ್ ಡೆಬಿಟ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಪ್ರಕಾಶ ನಾಯ್ಕ ಸಿ.ಪಿ.ಐ ಕುಮಟಾ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಆನಂದಮೂರ್ತಿ,ರವಿ ಗುಡ್ಡಿ,ಸುಧಾ ಅಘನಾಶಿನಿ, ಚಂದ್ರಮತಿ ಪಟಗಾರ ಇವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.
ವಿಸ್ಮಯ ನ್ಯೂಸ್ ಕುಮಟಾ