ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 42 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ವೇಳೆ, ಹೊನ್ನಾವರದಲ್ಲಿ ಒಂದು ಸಾವು ಸಂಭವಿಸಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 717ಕ್ಕೆ ಏರಿಕೆಯಾಗಿದೆ. ಕುಮಟಾದಲ್ಲಿ 6, ಹೊನ್ನಾವರ 4, ಭಟ್ಕಳದಲ್ಲಿ 7, ಕಾರವಾರದಲ್ಲಿ 9, ಅಂಕೋಲಾದಲ್ಲಿ 8, ಶಿರಸಿಯಲ್ಲಿ 3, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 3, ಮುಂಡಗೋಡದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಇದೇ ವೇಳೆ ಒಟ್ಟು 52 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಕುಮಟಾ 5, ಹೊನ್ನಾವರ 12, ಕಾರವಾರ 5, ಅಂಕೋಲಾ 2, ಭಟ್ಕಳ 1, ಶಿರಸಿ 5, ಯಲ್ಲಾಪುರ 18, ಮುಂಡಗೋಡದ ನಾಲ್ವರು ಕೋವಿಡ್ ಗೆದ್ದು ಮನೆಗೆ ಮರಳಿದ್ದಾರೆ.
ಅಂಕೋಲಾದಲ್ಲಿ ಹೊಸ ಕೊವಿಡ್ ಕೇಸ್:
ಅಂಕೋಲಾ ಜುಲೈ 19: ತಾಲೂಕಿನಲ್ಲಿ ಸೋಮವಾರ 5ಹೊಸ ಕೊವಿಡ್ ಕೇಸಗಳು ದಾಖಲಾಗಿದೆ. ಈ ಮೂಲಕ ಒಟ್ಟೂ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 69 ಕೆ ಏರಿಕೆಯಾಗಿದೆ. ತಾಲೂಕಿನ ಒಟ್ಟೂ 8 ಸೊಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸೋಂಕು ಲಕ್ಷಣಗಳುಳ್ಳ ಇತರೆ 61 ಜನರು ಹೋಂ ಐಸೋಲೇಶನ್ ನಲ್ಲಿ ಇದ್ದಾರೆ.
ಈ ವರೆಗೆ ತಾಲೂಕಿನಲ್ಲಿ 63 ಕೊವಿಡ್ ಸಾವಿನ ಪ್ರಕರಣ ದಾಖಲಾಗಿದೆ. ವ್ಯಾಕ್ಸಿನ್ ಪೂರೈಕೆ ವ್ಯತ್ಯಯದಿಂದ ಜುಲೈ 20 ರ ಮಂಗಳ ವಾರವೂ ತಾಲೂಕಿನಲ್ಲಿ ಎಲ್ಲಿಯೂ ವ್ಯಾಕ್ಸಿನೇಷನ್ ನಡೆಸಲಾಗುತ್ತಿಲ್ಲ.ಸಾರ್ವಜನಿಕರು ಸಹಕರಿಸುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ