ಸೋಮವಾರ ಶ್ರೀ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಪರೀಕ್ಷಾ ಕೇಂದ್ರ ದಲ್ಲಿ ನಡೆದ ಹತ್ತನೆಯ ತರಗತಿಯ ವಾರ್ಷಿಕ ಪರೀಕ್ಷೆಗೆ ಕೇಂದ್ರಕ್ಕೆ ಒಳಪಡುವ 5 ಶಾಲೆಗಳಿಂದ ಒಟ್ಟು 299 ಮಕ್ಕಳಲ್ಲಿ ಈ ದಿವಸ ವಿಷಯ ಕ್ಕೆ ಅನುಗುಣವಾಗಿ ಹಾಜರಾಗಬೇಕಿದ್ದ ಒಟ್ಟು 291 ಮಕ್ಕಳು ಹಾಜರಾಗಬೇಕಿ ದ್ದು ಎಲ್ಲಾ ಮಕ್ಕಳು ಹಾಜರಿರುವದರೊಂದಿಗೆ ಆಯಾ ಶಾಲೆಗಳ ಮುಖ್ಯ ಅಧ್ಯಾಪಕರ , ಶಿಕ್ಷಕರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಘನತೆಯನ್ನು ಹೆಚ್ಚಿಸಿ ದಾಖಲೆ ಯನ್ನು ನಿರ್ಮಿಸಿದ್ದಾರೆ.
ಕೋವಿಡ 19 ರೋಗವು ಹರಡದಂತೆ ಪಂಚಾಯತ್ ಗೋಕರ್ಣದವರು ಸಾನಿಟಾಯಜರ್ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳಿಗೆ ಸಿಂಪಡಿಸಿ ದ್ದರು.ಗೋಕರ್ಣದ ಆರೋಗ್ಯ ಇಲಾಖೆಯ ಸಿಬ್ಬಂದಿ ಬೆಳಿಗ್ಗೆ ಸಕಾಲ ಕ್ಕೆ ಹಾಜರಿರುವದರೊಂದಿಗೆ ಎಲ್ಲಾ ವಿದ್ಯಾರ್ಥಿಗಳಿಗೆ,ಹಾಗೂ ಪರೀಕ್ಷಾ ಕಾರ್ಯ ದಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿ ಗಳಿಗೆ scanner ಮುಖಾಂತರ ಪರೀಕ್ಷಿಸಿದರು.
ಯಾರಿಗೂ ಕೋವಿಡ ರೋಗ ಕಂಡುಬಂದಿಲ್ಲ. ಗೋಕರ್ಣದ ಪೋಲೀಸ್ ಇಲಾಖೆಯವರು ಸಹ ಕೋವಿಡ ನಿಯಮಾವಳಿಗೆ ಅನುಗುಣವಾಗಿ ಸಾಮಾಜಿಕ ಅಂತರ ಕಾಪಾಡಿ ವಿದ್ಯಾರ್ಥಿಗಳ ನ್ನು,ಸಿಬ್ಬಂದಿಗಳನ್ನು ಸರದಿ ಯಲ್ಲಿ ಅತ್ಯಂತ ಶಿಸ್ತಿನಿಂದ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಅನೇಕ ದಿನಗಳಿಂದ ಮಾನ್ಯ ಶ್ರೀ ರಾಜೇಂದ್ರ. ಎಲ್.ಭಟ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಮಟಾ ಹಾಗೂ ಶ್ರೀ ಹರೀಶ್ ಗಾಂವಕರ್ ಮಾನ್ಯ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ ಇವರ ಮತ್ತು ಇಲಾಖೆಯ ಸರ್ವರ ಮಾರ್ಗದರ್ಶನದಂತೆ ಶಾಲೆಯ ಮುಖ್ಯಶಿಕ್ಷಕರು ಆದ ಸಿ.ಜಿ.ನಾಯಕ ದೊರೆ ಹಾಗೂ ಸರ್ವ ಶಿಕ್ಷಕರು ಅತ್ಯಂತ ಉತ್ತಮವಾದ ಪೂರ್ವ ಸಿದ್ಧತೆ ಮಾಡಿದ್ದಾರೆ.
ಮುಖ್ಯ ಅಧೀಕ್ಷರಾಗಿ ಭದ್ರಕಾಳಿ ಪ್ರೌಢಶಾಲಾ ಶಿಕ್ಷಕರು ಆದ ಶ್ರೀ ವಿವೇಕ್ ಪಟಗಾರ ಅತ್ಯಂತ ಉತ್ತಮವಾಗಿ ಕಾರ್ಯ l ಮಾಡಿದ್ದಾರೆ. ಕಸ್ಟೋಡಿಯನ್ ಆಗಿ ಶಿವಾನಂದ ಪೈ. ಮೊಬೈಲ್ ರಕ್ಷಣಾಧಿಕಾರಿ ಆಗಿ ಸಿ.ಆರ್.ಪಿ.ಕಿಶೋರ್ ಬೋಮಕರ್, ಹಾಗೂ ಭದ್ರಕಾಳಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸಂತೋಷ. ಕೆ.ನಾಯಕ ಶಿಸ್ತು ಮತ್ತು ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿದರು.ಇನ್ನಿತರ ಇಲಾಖೆಯ ಅಧಿಕಾರಿಗಳು ಕೇಂದ್ರ ದಲ್ಲಿ ಇದ್ದು ಪರೀಕ್ಷೆ ಯನ್ನು ಇಲಾಖೆಯ ನಿಯಮಗಳನ್ನು ಪರಿಪಾಲಿಸುವದರೊಂದಿಗೆ ಯಶಸ್ಸಿಗೊಳಿಸಿದ್ದಾರೆ.
ವಿಸ್ಮಯ ನ್ಯೂಸ್ ಕುಮಟಾ