ರಸ್ತೆ ಮೇಲೆ ಬಿದ್ದ ಬೃಹತ್ ಮರ: ಬಸ್ ಬರದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗಳು ಪರದಾಟ

ಹೊನ್ನಾವರ: ಬೃಹತ್ ಗಾತ್ರದ ಮರವೊ0ದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಚಿತ್ತಾರ ರಸ್ತೆ ಇಂದು ಬೆಳಿಗ್ಗೆ ಸಂಪೂರ್ಣವಾಗಿ ಬಂದಾಗಿತ್ತು. ಮರ ಬಿದ್ದಿರುವ ಮಾಹಿತಿ ತಿಳಿದು ಬಂದ ತಕ್ಷಣ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾದ ಮಕ್ಕಳಿಗೆ ವಾಟ್ಸಪ್ ಸಂದೇಶವನ್ನು ರವಾನಿಸಲಾಯಿತು. ಕರೆಂಟ್ ಮತ್ತು ನೆಟ್ವರ್ಕ್ ಎರಡು ಇಲ್ಲದ ಕಾರಣ ಹಲವಾರು ವಿದ್ಯಾರ್ಥಿಗಳಿಗೆ ಈ ಸಂದೇಶವು ಕೂಡ ತಲುಪಲಿಲ್ಲ .

ತಕ್ಷಣ ಸ್ಥಳೀಯ ಕೆಲವು ಯುವಕರನ್ನು ವಾಟ್ಸಪ್ ಕರೆ ಮೂಲಕ ಸಂಪರ್ಕಿಸಿದಾಗ ಅವರು ವಿದ್ಯಾರ್ಥಿಗಳ ಸಹಾಯಕ್ಕೆ ಬಂದು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಬೈಕ್ ಮತ್ತು ಕಾರು, ರಿಕ್ಷಾ ಚಾಲಕರು ತಮ್ಮ ರಿಕ್ಷಾದ ಮೂಲಕ ಬಸ್ ನಿಂತಿದ್ದ ಸ್ಥಳದಿಂದ ಚಿತ್ತಾರದ ವರೆಗೆ ಅವರನ್ನು ತಲುಪಿಸಿದರು.

ಇದರಿಂದಾಗಿ ಸುತ್ತ ಮುತ್ತಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.ರಸ್ತೆ ಬಂದ್ ಆದ ಕಾರಣ ಚಿತ್ತಾರದಿಂದ 9 ಕಿಲೋಮೀಟರ್ ದೂರದ ಪರೀಕ್ಷಾ ಕೇಂದ್ರಕ್ಕೆ ಸುಮಾರು ಹದಿನಾಲ್ಕು ಕಿಲೋಮೀಟರ್ ದೂರದ ಅಡಿಕೆಕುಳಿ, ಹಾಲಳ್ಳಿ, ಸಂಪೊಳ್ಳಿ, ಹಡಿಕಲ್ ಮುಂಡಾರ ಭಾಗದಿಂದ ಮಂಕಿ ಪರೀಕ್ಷಾ ಕೇಂದ್ರಕ್ಕೆ ಬರಬೇಕಾದ 36 ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದರು. ಅಂತೂ ಇಂತೂ ಸ್ಥಳೀಯ ರಿಕ್ಷಾ ಚಾಲಕರು ಮತ್ತು ಗ್ರಾಮಸ್ಥರ ಸಹಾಯದಿಂದ ನಿಗದಿತ ಸಮಯಕ್ಕೆ ಹಾಜರಾಗಿ 36 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version