ಕಾರವಾರ: ಅಂಕೋಲಾ ಸತತವಾಗಿ ಸುರಿಯುತ್ತಿರುವ ಮಳೆ,ಘಟ್ಟದ ಮೇಲಿನ ಭಾಗದಿಂದ ಹರಿದುಬಂದು ಸೇರುತ್ತಿರುವ ಹೆಚ್ಚಿನ ಪ್ರಮಾಣದ ನೀರಿನಿಂದ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು,ನದಿಯಂಚಿನ ಹತ್ತಾರು ಗ್ರಾಮಗಳು ಜಲಾವೃತವಾಗಿವೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಎರಡು ಬಾರಿ ಗಂಗಾವಳಿ ನದಿ ಪ್ರವಾಹದಿಂದ ಜನಜೀವನ ತತ್ತರ ವಾಗಿತ್ತು.ಆದರೆ ಈ ಬಾರಿ ಬಂದ ಪ್ರವಾಹ ಕಳೆದ ಐದಾರು ದಶಕಗಳ (1963ರಿಂದ 1965ರ ಅವಧಿ) ಹಿಂದೆ ಬಂದಿದ್ದ ಪ್ರವಾಹ ಕ್ಕಿಂತ ದೊಡ್ಡದು ಎನ್ನುತ್ತಾರೆ ಸ್ಥಳೀಯ ಕೆಲ ಹಿರಿಯರು.
ಡೋಂಗ್ರಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು,ರಸ್ತೆ ಸಂಪರ್ಕ ಕಡಿದು ಹೋಗಿದೆ. ಸೇತುವೆಯ ವ್ಯವಸ್ಥೆಯು ಇರದಿರುವುದರಿಂದ ಜನರ ಜೀವ ರಕ್ಷಣೆಗೆ ತಾಲೂಕು ಆಡಳಿತ ಮತ್ತು ಸಂಬಂಧಿಸಿದ ಎಲ್ಲ ಇಲಾಖೆಗಳು,ಶಕ್ತಿಮೀರಿ ಪ್ರಯತ್ನಿಸುತ್ತೇವೆ. ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಕಲ್ಲೇಶ್ವರ ಮತ್ತಿತರ ಭಾಗದ ನೆರೆ ಪೀಡಿತ ಪ್ರದೇಶದಲ್ಲಿ ಸಿಲುಕಿದವರ ಜೀವ ರಕ್ಷಣೆಗೆ ಹೆಲಿಕಾಫ್ಟರ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ . ಸುಂಕಸಾಳ ವ್ಯಾಪ್ತಿಯಲ್ಲಿ ರಾತ್ರಿ ಹೆದ್ದಾರಿಗೆ ನೀರು ನುಗ್ಗಿರುವುದರಿಂದ ಅಂಕೋಲಾ ಹುಬ್ಬಳ್ಳಿ ಸಂಚಾರ ಮಾರ್ಗ ಸಂಪೂರ್ಣ ಬಂದ್ ಆಗಿದ್ದು,ಬಾಳೆಗುಳಿ ಬಳಿ ಕಿಲೋಮೀಟರ್ಗೆ ಹೆಚ್ಚು ಉದ್ದದ ವಾಹನಗಳ ಸಾಲು ಕಂಡು ಬರುತ್ತಿದೆ.
ಶಿರೂರು ವ್ಯಾಪ್ತಿಯಲ್ಲಿ ಜನರ ರಕ್ಷಣಾ ಕಾರ್ಯ ನಡೆಯುತ್ತಿರುವ ನಡುವೆಯೇ ನೀರಿನ ರಭಸಕ್ಕೆ ಇಬ್ಬರು ಕೊಚ್ಚಿಹೋಗಿದ್ದಾರೆ ಎನ್ನಲಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.ದೋಣಿ ಮಗುಚಿ ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿದೆ. ವಾಸ್ರೆ – ಶಿರಗುಂಜಿ, ಕೂರ್ವೆ, ಬಿಳಿ ಹೊ೦ಯ್ಗೆ, ಸಗಡಗೇರಿ ಯ ಬಹುತೇಕ ಭೂಪ್ರದೇಶ ಜಲಾವೃತವಾಗಿವೆ. ತಾಲೂಕಿನ ಎಂಟತ್ತು ಗ್ರಾಮಪಂಚಾಯತಿಗಳಲ್ಲಿ ಜನಜೀವನ ಅತಂತ್ರವಾಗಿದ್ದು, ಹಲವೆಡೆ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆಗಿದ್ದು, ಜನ ಕಂಗಾಲಾಗಿದ್ದಾರಗಂಗಾವಳಿ ನದಿ ನೀರಿನ ಮಟ್ಟದ ಏರಿಕೆಯಿಂದ ಅಂಕೋಲಾ ಕುಮಟಾ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಶಿರೂರು ಬಳಿ ಹೆದ್ದಾರಿಗೆ ನೀರು ನುಗ್ಗಿ ರಸ್ತೆ ಸಂಚಾರ ಅಪಾಯ ಎನ್ನುವಂತಾಗಿದ್ದು ತಾತ್ಕಾಲಿಕವಾಗಿ ರಸ್ತೆ ಬಂದಾಗಿದೆ
ನೆರೆ ಭೀತಿಯಿಂದ ಹಲವರ ಮನೆ ಆಸ್ತಿಪಾಸ್ತಿಗಳು,ಸಂಪೂರ್ಣ ಮುಳುಗಡೆಯಾಗಿದ್ದು.ಪದೇಪದೇ ಸಂಭವಿಸುತ್ತಿರುವ ನೆರೆ,ಕರೋನಾ ಘಾತಗಳಿಂದ ಜನರು ಹೈರಾಣಾಗು ವಂತಾಗಿದೆ. ಬೆಳಂಬರ ಸಮುದ್ರತೀರದಲ್ಲಿ ಕಟ್ಟಿಗೆಗಳ ರಾಶಿರಾಶಿ ತೇಲಿಬರುತ್ತಿದೆ.ಮಂಜುಗುಣಿಯಲ್ಲಿ ಪಂಚಾಯತ್ ವತಿಯಿಂದ ನೆರೆ ರಕ್ಷಣಾ ಕಾರ್ಯಕ್ಕೆ ಮೀಸಲಿರಿಸಿದ್ದಚಿಕ್ಕ ಬೋಟೊಂದು ಕೊಚ್ಚಿಹೋಗಿದೆ ಎನ್ನಲಾಗಿದೆ.
ನದಿ ತೀರದ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ,ಮೊಬೈಲ್ ನೆಟ್ವರ್ಕ್ ಸಮಸ್ಯೆ ಇನ್ನಿತರ ಕಾರಣಗಳಿಂದ ರಕ್ಷಣಾ ತಂಡದ ಸಂಪರ್ಕ-ಸಂವಹನಕ್ಕೂ ತೀವ್ರ ಹಿನ್ನಡೆಯಾಗುತ್ತಿದೆ. ಶಾಸಕಿ ರೂಪಾಲಿ ನೈಕ್ ವಿವಿಧ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ,ಪರಿಸ್ಥಿತಿ ಅವಲೋಕಿಸುವದರೊಂದಿಗೆ ಜಿಲ್ಲಾಡಳಿತ ಮತ್ತು ಸರ್ಕಾರದ ನಿಕಟ ಸಂಪರ್ಕದಲ್ಲಿದ್ದು,ಜನರ ಪ್ರಾಣ ರಕ್ಷಣೆಗೆ ಒತ್ತು ನೀಡುತ್ತಿದ್ದಾರೆ. ಶಿರಗುಂಜಿಯ ಸಗಡೆ ಬೈಲ್ ನಲ್ಲಿ ನೀರಿನಲ್ಲಿ ಸಿಲುಕಿದ 13 ಕ್ಕೂ ಹೆಚ್ಚು ಜನರನ್ನು,ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಹಕಾರದೊಂದಿಗೆ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ .
ಕುಮಟಾದಲ್ಲೂ ಮಳೆ ಅಬ್ಬರ ಜೋರಾಗಿದ್ದು, ಹಲವು ಮನೆಗಳು ಜಲಾವೃಗೊಂಡಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ್ ಅಂಕೋಲಾ
ಇಂದಿನ ಪ್ರಮುಖ ಸುದ್ದಿಗಳ ಲಿಂಕ್ ಈ ಕೆಳಗೆ ಇದೆ.
- ಯಶಸ್ವಿಯಾಗಿ ನಡೆದ ಯುನಿಫೆಸ್ಟ್ : 35 ಕಾಲೇಜುಗಳ 500 ವಿದ್ಯಾರ್ಥಿಗಳು ಭಾಗಿ
- ರಸ್ತೆ ಮಧ್ಯೆ ನಿಂತುಕೊಂಡು ಖಾರದ-ಪುಡಿ ಎರಚಿ ದರೋಡೆ ಮಾಡಿದ್ದ ಕಳ್ಳರು ಕೆಲವೇ ಗಂಟೆಗಳಲ್ಲಿ ಅರೆಸ್ಟ್!
- ಕುಮಟಾ ತಾಲ್ಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು