ಮೊದಲ ಮುನ್ನೆಚ್ಚರಿಕೆ ಪತ್ರ ರವಾನೆ : ಶರಾವತಿ ನದಿತೀರದ ಜನರಲ್ಲಿ ಆತಂಕ ಶುರು

ಹೊನ್ನಾವರ: ಶರಾವತಿ ನದಿ ತಿರದ ಎಡ ಮತ್ತು ಬಲದಂಡೆಯ ನಿವಾಸಿಗಳಿಗೆ ಪ್ರವಾಹದ ಮೋದಲ ಮುನ್ನೆಚ್ಚರಿಕೆಯ ಸೂಚನೆ ರವಾನಿಸಲಾಗಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರು ವ್ಯಾಪಕವಾಗಿ ಹರಿದು ಬರುತಿರುವುದರಿಂದ ಜಲಾಶಯದ ಹಿತದೃಷ್ಟಿಯಿಂದ ಯಾವ ಸಮಯದಲ್ಲಿ ಬೇಕಾದರು ನೀರನ್ನು ಹೊರಬಿಡಲಾಗುವುದು ಎಂದು ಮೊದಲ ಮುನ್ನೆಚರಿಕೆಯ ಸೂಚನಾ ಪತ್ರ ನೀಡಲಾಗಿದೆ.

ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819. ಇಂದಿನ ಮಟ್ಟ 1801 ಕ್ಕೆ ತಲುಪಿದ್ದು, 1.18. 000 ಕ್ಯೂ ಸೆಕ್ ನೀರು ಹರಿದು ಬರುತಿದೆ. ಇದೆ ರೀತಿ ಮಳೆ ಮುಂದುವರಿದರೆ ಯಾವುದೆ ಸಮಯದಲ್ಲಿ ಬೇಕಾದರು ನೀರು ಬಿಡಲಾಗುದು ಎಂದು ಸೂಚನೆ ನೀಡಲಾಗಿದೆ. ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟಲ್ಲಿ ಗೇರುಸೋಪ್ಪಾ ಜಲಾಶಯದ ಹಿತದೃಷ್ಟಿಯಿಂದ ಲಿಂಗನಮಕ್ಕಿ ಜಲಾಶಯದಿಂದ ಹೊರಬಿಟ್ಟ ನೀರಿನ ಪ್ರಮಾಣದಷ್ಟು ನೀರನ್ನು ಹೊರಬಿಡಲಾವುದು ಎಂದು ಮೊದಲ ಮುನ್ನೆಚ್ಚರಿಕೆ ಪತ್ರದಲ್ಲಿ ಮಾಹಿತಿ ನೀಡಲಾಗಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಇಂದಿನ ಪ್ರಮುಖ ಸುದ್ದಿಗಳ ಲಿಂಕ್ ಈ ಕೆಳಗೆ ಇದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Exit mobile version