Follow Us On

WhatsApp Group
Important
Trending

ರಾಜಕೀಯ ಗೊಂದಲದ ನಡುವೆಯೇ ನಾಳೆ ಉತ್ತರಕನ್ನಡಕ್ಕೆ ಬರ್ತಾರಾ ಸಿಎಂ‌ ಯಡಿಯೂರಪ್ಪ? ಈ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?

ಕಾರವಾರ: ಮುಖ್ಯಮಂತ್ರಿ ಬದಲಾವಣೆ ವಿಚಾರದ ನಡುವೆಯೂ ಪ್ರವಾಹದಿಂದಾಗಿ ಭಾರಿ ಹಾನಿಗೊಳಗಾದ ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಪ್ರವಾಹದಿಂದಾಗಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲಾ, ಕುಮಟಾ ಭಾಗದಲ್ಲಿ ನೂರಾರು ಗ್ರಾಮಗಳು ಮುಳುಗಡೆಯಾಗಿದ್ದವು. 7 ಜನ ಮೃತಪಟ್ಟು ಸಾವಿರಾರು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ ಹಲವು ಹೆದ್ದಾರಿ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಬಗ್ಗೆ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಬಳಿ ಪರಿಸ್ಥಿತಿ ಬಗ್ಗೆ ತಿಳಿಸಿ ಒಮ್ಮೆ ಭೇಟಿ ನೀಡುವಂತೆ ಮತ್ತು ಹೆಚ್ಚಿನ ಪರಿಹಾರಕ್ಕಾಗಿ ವಿನಂತಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಬೆಳಗಾವಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ‌ ಬಳಿ ಸಾಧ್ಯವಾದರೇ ಕಾರವಾರಕ್ಕೆ ಸೋಮವಾರ ತೆರಳುವ ಬಗ್ಗೆ ತಿರ್ಮಾನಿಸುವುದಾಗಿ ತಿಳಿಸಿದ್ದಾರೆ.

ಆದರೆ ಇಂದು ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ದಿಢೀರ್ ಆಗಿ ಸುದ್ದಿಗೋಷ್ಠಿಯಲ್ಲಿ ‘ಸಾಧ್ಯವಾದರೆ ಕಾರವಾರಕ್ಕೆ ಜುಲೈ 26ರಂದು ಮಧ್ಯಾಹ್ನ ಭೇಟಿ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.

ಇನ್ನು ಈ ಹಿಂದೆ ಯಡಿಯೂರಪ್ಪ ಉತ್ತರಕನ್ನಡ ಪ್ರವಾಸಕ್ಕೆ ಹಲವು ಬಾರಿ ದಿನ ನಿಗದಿಯಾಗಿದ್ದರೂ ಕಾರಣಾಂತರಗಳಿಂದ ರದ್ದುಪಡಿಸಿ, ಮುಂದೂಡಲಾಗುತ್ತಿತ್ತು. ತೀರಾ ಇತ್ತೀಚೆಗೆ ಜುಲೈ 16ರಂದು ಕೂಡ ಅವರು ಕಾರವಾರಕ್ಕೆ ಭೇಟಿ ನೀಡಿ, ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಅವರು ಚಾಲನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ ಎಂಬ ಬಗ್ಗೆ ಸ್ಥಳೀಯ ಬಿಜೆಪಿಗರು ತಿಳಿಸಿದ್ದರು‌.

ಅಧಿಕಾರಿಗಳು ಮುಖ್ಯಮಂತ್ರಿ ಸ್ವಾಗತಕ್ಕಾಗಿ ಬಹುತೇಕ ಸಿದ್ಧತೆ ಪೂರ್ಣಗೊಳಿಸಿಕೊಂಡಿದ್ದರು.
ಆದರೆ ಪ್ರಧಾನಿಯೊಂದಿಗೆ ಅಂದೇ ಸಭೆ ನಿಗದಿಯಾದ ಕಾರಣ ಸಿಎಂ ಪ್ರವಾಸ ನಿಗದಿಯಾಗಿದ್ದ ದಿನಕ್ಕೂ ಎರಡೇ ದಿನ ಮುಂಚೆ ಕಾರ್ಯಕ್ರಮ ಮುಂದೂಡಿ ಸಿಎಂ ಕಚೇರಿಯಿಂದ ಮಾಹಿತಿ ನೀಡಲಾಗಿತ್ತು. ಆದರೆ ಜುಲೈ 23ಕ್ಕೆ ಯಡಿಯೂರಪ್ಪ ಬರಲಿದ್ದಾರೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದರು.

ಅಂತಿಮವಾಗಿ ಅಂದು ಕೂಡ ಬರದೇ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸುದ್ದಿಯಲ್ಲಿರುವ ಕಾರಣ ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ ಇಂದು ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ದಿಢೀರ್ ಆಗಿ ಸುದ್ದಿಗೋಷ್ಠಿಯಲ್ಲಿ ‘ಸಾಧ್ಯವಾದರೆ ಕಾರವಾರಕ್ಕೆ ಜುಲೈ 26ರಂದು ಮಧ್ಯಾಹ್ನ ಭೇಟಿ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ‌ ನ್ಯೂಸ್

Back to top button