ಅಂಕೋಲಾ ಹುಬ್ಬಳ್ಳಿ ಮಾರ್ಗದಲ್ಲಿ ಕಿಲೋಮೀಟರ್ ಗಟ್ಟಲೆ ಲಾರಿಗಳ ಕ್ಯೂ: ಚಾಲಕರಿಗೆ, ಕ್ಲೀನರ್ ಗಳಿಗೆ ಊಟಕ್ಕೂ ಕಾಡುತ್ತಿದೆ ಸಮಸ್ಯೆ

ಅಂಕೋಲಾ: ಅರ್‌ಬೈಲ್ ಘಟ್ಟದಲ್ಲಿ ಹೆದ್ದಾರಿ ಕುಸಿತದ ಹಿನ್ನಲೆಯಲ್ಲಿ ಲಾರಿಗಳ ಓಡಾಟಕ್ಕೆ ತೊಂದರೆ ಉಂಟಾಗಿದ್ದು, ಮುಂದಕ್ಕೆ ತೆರಳು ಸಾಧ್ಯವಾಗದೇ ಕಿಲೋಮೀಟರ್ ಗಟ್ಟಲೆ ಲಾರಿಗಳು ಕ್ಯೂ ನಿಂತಿವೆ. ಮಂಗಳೂರು, ಕೇರಳದಿಂದ ಸರಕನ್ನು ತುಂಬಿಕೊoಡು ಮಹಾರಾಷ್ಟ್ರ,, ಗುಜರಾತ್, ಆಂದ್ರಪ್ರದೇಶ ಮುಂತಾದ ಭಾಗಗಳಿಗೆ ತೆರಳುವ ಲಾರಿಗಳು ಇದೀಗ ರಸ್ತೆ ಮಧ್ಯದಲ್ಲೇ ನಿಲ್ಲುವಂತಾಗಿದೆ. ಮಂಗಳೂರಿನಿoದ ಅನಿಲ ತುಂಬಿಕೊoಡು ಬಂದ ನೂರಾರು ಟ್ಯಾಂಕರ್‌ಗಳು , ಇದೇ ರಸ್ತೆಯಲ್ಲೇ ಬೀಡುಬಿಟ್ಟಿವೆ.

ಇನ್ನು ರಸ್ತೆ ಮಧ್ಯೆಯೇ ಲಾರಿ ನಿಂತಿರುವುದರಿoದ ಲಾರಿಗಳ ಚಾಲಕರು, ಕ್ಲೀನರ್ ಗಳು ಕೆಲವೆಡೆ ಊಟಕ್ಕೆ ಪರದಾಡುವಂತಾಗಿದೆ. ಕೆಲವರು ಕೀಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗಿ ಊಟ, ತಿಂಡಿ ಮಾಡಿ ಬರುತ್ತಿದ್ದಾರೆ. ಕೆಲವರಿಗೆ ಉಪವಾಸ ಇರುವ ಸ್ಥಿತಿಯೂ ಬಂದೊದಗಿದೆ.

ಇದೀಗ ಲಘು ವಾಹನಗಳ ಸಂಚಾರ ಏನೋ ಆರಂಭವಾಗಿದೆ. ಆದರೆ, ಇನ್ನೂ ಬೃಹತ್ ವಾಹನಗಳ ಸಂಚಾರಕ್ಕೆ ಅನುಮತಿ ದೊರೆತಿಲ್ಲ. ಇನ್ನು ಎರಡ್ಮೂರು ದಿನ ಕಾಯಬೇಕಾಗಬಹುದು ಎನ್ನಲಾಗುತ್ತಿದೆ. ಅಧಿಕಾರಿಗಳು ವಾಹನ ಸಂಚಾರಕ್ಕೆ ಬೇಕಾದ ವ್ಯವಸ್ಥೆ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version