ಉತ್ತರಕನ್ನಡದ ಇಂದಿನ ಕರೊನಾ ವಿವರ: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 49 ಕರೊನಾ ಕೇಸ್ ದಾಖಲಾಗಿದೆ. ಕಾರವಾರ 4, ಕುಮಟಾ 10, ಅಂಕೋಲಾ 8, ಭಟ್ಕಳ 2, ಹೊನ್ನಾವರ 8, ಶಿರಸಿ 9, ಸಿದ್ದಾಪುರ 1, ಯಲ್ಲಾಪುರ 5, ಮುಂಡಗೋಡ 1, ಹಳಿಯಾಳ 1 ಸೇರಿ ಒಟ್ಟು ಜಿಲ್ಲೆಯಲ್ಲಿ ಇಂದು 39 ಕೋವಿಡ್ ಕೇಸ್ ದಾಖಲಾಗಿದೆ. ಜಿಲ್ಲೆಯಲ್ಲಿಂದು ಯಾವುದೇ ಸಾವು ದಾಖಲಾಗಿಲ್ಲ.

ಇನ್ನೊಂದೆಡೆ, ಜಿಲ್ಲೆಯ ವಿವಿಧ ಆಸ್ಪತ್ರೆಯಿಂದ 40 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕುಮಟಾ 11, ಕಾರವಾರ 5, ಅಂಕೋಲಾ 6, ಹೊನ್ನಾವರ 4, ಭಟ್ಕಳ 1, ಶಿರಸಿ 6, ಹಳಿಯಾಳ 3, ಜೋಯ್ಡಾದ ಮೂವರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಅಂಕೋಲಾ ಜುಲೈ 28:  ತಾಲೂಕಿನಲ್ಲಿ ಬುಧವಾರ  8 ಹೊಸ ಕೊವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ, ಒಟ್ಟೂ 67 ಸಕ್ರಿಯ ಪ್ರಕರಣಗಳಿವೆ. ಸೋಂಕು ಮುಕ್ತರಾದ  5 ಜನರನ್ನು ಬಿಡುಗಡೆಗೊಳಿಸಲಾಗಿದೆ . ವಿವಿಧ ಆಸ್ಪತ್ರೆಗಳಲ್ಲಿ 2ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣವುಳ್ಳ 65ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಈ ವರೆಗೆ ತಾಲೂಕಿನಲ್ಲಿ ಒಟ್ಟು 64 ಜನ  ರು ಕರೊನಾದಿಂದ ಮೃತರಾಗಿದ್ದಾರೆ. ಆರಂಭದಿಂದ ಇಲ್ಲಿಯವರೆಗೆ 3359 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.   

ಇಂದು ಪಟ್ಟಣದಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ (176), ಲಸಿಕೆಗಳನ್ನು ನೀಡಲಾಗಿದ್ದು, 20 ಲಸಿಕೆಗಳು ಬಾಕಿ ಉಳಿಕೆಯಾಗಿದೆ.  ಮುಂದಿನ ಹಂತದಲ್ಲಿ  ತಾಲೂಕಿಗೆ ವಿತರಣೆಯಾಗಬೇಕಿದ್ದ  ಲಸಿಕೆ ಲಭ್ಯತೆ ಪ್ರಮಾಣದ ಕುರಿತು ಬುಧವಾರ ಸಂಜೆ 5 ಗಂಟೆವರೆಗೂ ನಿಖರ ಮಾಹಿತಿ ಲಭ್ಯವಿಲ್ಲದೇ, ರಾತ್ರಿ ವೇಳೆ ಲಸಿಕೆ ಹಂಚಿಕೆ ಕುರಿತು ಸ್ಪಷ್ಟತೆ ದೊರೆಯಲಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.      

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version