ಉತ್ತರಕನ್ನಡದ ಕೆಲ ಜಿಲ್ಲೆಗಳಲ್ಲಿ ನಾಳೆ ಲಭ್ಯವಿರುವ ವಾಕ್ಸಿನ್ ವಿವರ: ಎಲ್ಲೆಲ್ಲಿ ಎಷ್ಟು ವಾಕ್ಸಿನ್ ಲಭ್ಯವಿದೆ ನೋಡಿ

ಕಾರವಾರ: ಉತ್ತರಕನ್ನಡದ ಕುಮಟಾ, ಹೊನ್ನಾವರ, ಭಟ್ಕಳ ಮತ್ತು ಶಿರಸಿ ತಾಲೂಕಿನಲ್ಲಿ ನಾಳೆ ಎಷ್ಟು ವಾಕ್ಸಿನ್ ಲಭ್ಯವಿದೆ‌. ಎಲ್ಲೆಲ್ಲಿ ಲಭ್ಯವಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಕುಮಟಾದಲ್ಲಿ ಎಲ್ಲೆಲ್ಲಿ?

ಕುಮಟಾ ಸರ್ಕಾರಿ ಆಸ್ಪತ್ರೆ 150, ಗೋಕರ್ಣ ಪ್ರಾಥಮಿಕ ಕೇಂದ್ರ 100, ಹಿರೇಗುತ್ತಿ 100, ಮಾಸೂರು ಹೈಸ್ಕೂಲ್ 150, ಗುಡೆಅಂಗಡಿ 200, ಯಲವಳ್ಳಿ 100, ಸಂತೇಗುಳಿ 100, ವಾಲ್ಕೇ ಸಭಾಭವನ ಹೊನ್ನಾವರ್ 130, ಹೆಗ್ಗಲೆ 100, ಡೋಸ್ ( ಕೋವಿಶಿಲ್ಡ್ ) ಲಸಿಕೆ ಲಭ್ಯವಿದೆ: ಸೂಚನೆ: ಎರಡನೇ ಡೋಸ್ ಮಾತ್ರ. ಅಲ್ಲದೆ, ಪುರಭವನ, ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ 200 ಡೋಸ್ ( ಕೋವಾಕ್ಸಿನ್ ) ಲಭ್ಯವಿದೆ. ಸೂಚನೆ: ಎರಡನೇ ಡೋಸ್ ಮಾತ್ರ.

ಹೊನ್ನಾವರದಲ್ಲಿ ಎಲ್ಲೆಲ್ಲಿ?

ತಾಲೂಕಾ ಆಸ್ಪತ್ರೆಯಲ್ಲಿ 200 ಡೋಸ್, ಹಳದೀಪುರ ಪ್ರಾಥಮಿಕ ಕೇಂದ್ರ 200, ಮಂಕಿ, 200, ಬಳ್ಕೂರು 200, ಶಂಶಿ 200 ಮತ್ತು ಗೋರುಸೊಪ್ಪಾದಲ್ಲಿ 100 ಡೋಸ್ ಲಸಿಕೆ ಲಭ್ಯವಿದೆ.

ಶಿರಸಿಯಲ್ಲಿ ಎಲ್ಲೆಲ್ಲಿ?

ಡಾ. ಬಿ ಆರ್ ಅಂಬೇಡ್ಕರ್ ಭವನ್ 300, ದಾಸನಕೊಪ್ಪ 200,ಬಿಸಲಕೊಪ್ಪ 200, ಹುಲೇಕಲ್ 200, ಹೆಗಡೆಕಟ್ಟಾ 200 , ವಾರ್ಡ್ ನಂ 16, 100 ಡೋಸ್, ವಾರ್ಡ್ ನಂಬರ್ 17, 100 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.

ಭಟ್ಕಳ ತಾಲೂಕಿನಲ್ಲಿ ಎಲ್ಲೆಲ್ಲಿ?

ಭಟ್ಕಳ ತಾಲೂಕಾಸ್ಪತ್ರೆಯಲ್ಲಿ 300 , ಶಿರಾಲಿ ಸಮುದಾಯ  ಆರೋಗ್ಯ ಕೇಂದ್ರ 300 , ಮುರುಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ 60 , ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರ 40 , ಬೆಳಕೆ ಪ್ರಾಥಮಿಕ ಆರೋಗ್ಯ ಕೇಂದ್ರ  100 , ಕೋಣಾರ ಪ್ರಾಥಮಿಕ ಆರೋಗ್ಯ ಕೇಂದ್ರ  100 , ಅನಿವಾಸಿ ಭಾರತೀಯರಿಗೆ 300 ಸೇರಿ ಒಟ್ಟು ತಾಲ್ಲೂಕಿನಾದ್ಯಂತ ನಾಳೆ 1200 ಕೋವಿಡ್ ಲಸಿಕೆ ಲಭ್ಯವಿದೆ.

ನಾಳೆ 400 ಡೋಸ್ ಲಸಿಕೆ ವಿತರಣೆಗೆ ಕ್ರಮ

ಅಂಕೋಲಾ ಜುಲೈ 29: ತಾಲೂಕಿನಲ್ಲಿ ಗುರುವಾರ 5 ಹೊಸ ಕೊವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುವುದರೊಂದಿಗೆ, ಒಟ್ಟೂ 68ಸಕ್ರಿಯ ಪ್ರಕರಣಗಳಿವೆ. ಸೋಂಕು ಮುಕ್ತರಾದ 4 ಜನರನ್ನು ಬಿಡುಗಡೆಗೊಳಿಸಲಾಗಿದೆ.

ವಿವಿಧ ಆಸ್ಪತ್ರೆಗಳಲ್ಲಿ 4ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣವುಳ್ಳ 64ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಈ ವರೆಗೆ ತಾಲೂಕಿನಲ್ಲಿ ಒಟ್ಟು 64 ಜನ ರು ಕರೊನಾದಿಂದ ಮೃತರಾಗಿದ್ದಾರೆ. ಆರಂಭದಿಂದ ಇಲ್ಲಿಯವರೆಗೆ 3363 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ನಾಳೆ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ (300), ಶಿರೂರ (100) ಸೇರಿ ಒಟ್ಟೂ 400 ಡೋಸ್ ಲಸಿಕೆಗಳನ್ನು ನೀಡಲು ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ (2 ನೇ ಡೋಸ್ ನವರಿಗೆ ಮಾತ್ರ, )

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್ ಮತ್ತು ವಿಲಾಸ್ ನಾಯಕ ಅಂಕೋಲಾ

ಪ್ರಮುಖ‌ ಸುದ್ದಿಗಳ ಲಿಂಕ್ ಇಲ್ಲಿದೆ

Exit mobile version