Info
Trending

36 ವರ್ಷಗಳ ಸುದೀರ್ಘ, ಸ್ಮರಣೀಯ ಸೇವೆ: ಜುಲೈ 31 ರಂದು ಶ್ರೀಧರ ಹೆಗಡೆ ನಿವೃತ್ತಿ: ಅಭಿನಂದನೆ

ಆಧುನಿಕ ಜೇನುತುಪ್ಪ ಸಂಸ್ಕರಣಾ ಘಟಕ ಸ್ಥಾಪನೆಯ ಹೆಗ್ಗಳಿಕೆ

ಸ್ವಾತಂತ್ರ್ಯಪೂರ್ವ 1941ರಲ್ಲಿ ಸ್ಥಾಪನೆಯಾಗಿ ನಿರಂತರ 80 ವರ್ಷಗಳಿಂದ ಜೇನುಕೃಷಿಕರಿಗೆ ಸೇವೆ ಸಲ್ಲಿಸುತ್ತಿರುವ ಹೊನ್ನಾವರ ಜೇನು ಸಾಕುವವರ ಸಹಕಾರಿ ಸಂಘದಲ್ಲಿ 36ವರ್ಷ ನಿರಂತರ ಸೇವೆ ಸಲ್ಲಿಸಿದ ಶ್ರೀಧರ ಲಕ್ಷ್ಮೀನಾರಾಯಣ ಹೆಗಡೆ ದಿನಾಂಕ 31ರಂದು ನಿವೃತ್ತರಾಗುತ್ತಿದ್ದಾರೆ.
ಗಾಂಧೀಜಿ ಪ್ರೇರಣೆಯಂತೆ ಅಹಿಂಸಾತ್ಮಕ ಜೇನುಸಂಗ್ರಹಿಸುವ ಪೆಟ್ಟಿಗೆ ಜೇನುಕೃಷಿ ಮಾಡುವವರ ಅನುಕೂಲಕ್ಕಾಗಿ ಎಸ್.ಕೆ. ಕಲ್ಲಾಪುರ ಧಾರವಾಡ ಎಂಬ ಹಿರಿಯ ನ್ಯಾಯವಾದಿಗಳಿಂದ ಆರಂಭವಾಗಿದ್ದ ಸಂಘ ಅಡಿಕೆ, ತೆಂಗು ಬೆಳೆಗಳ ದರ ಕುಸಿದಾಗ ರೈತರಿಗೆ ಆಧಾರಸ್ತಂಭವಾಗಿ ಜೇನುಕೃಷಿ ಸಹಾಯಮಾಡಿತ್ತು.

ಹೊನ್ನಾವರ ಜೇನುತುಪ್ಪ ಅಂದಿನಿoದ ಇಂದಿನವರೆಗೆ ಪ್ರಸಿದ್ಧ ಬ್ರಾಂಡ್ ಆಗಿ ದೇಶದಲ್ಲಿ ಗುರುತಿಸಲ್ಪಟ್ಟಿದೆ. ಈ ಸಂಸ್ಥೆಯಲ್ಲಿ ದಿನಗೂಲಿ ನೌಕರನಾಗಿ ಸೇರಿ ಮುಖ್ಯಕಾರ್ಯನಿರ್ವಾಹಕನಾಗಿ ನಿವೃತ್ತಿ ಹೊಂದುತ್ತಿರುವ ಶ್ರೀಧರ ಹೆಗಡೆ ಸಂಸ್ಥೆಯನ್ನು ಕಷ್ಟಕಾಲದಲ್ಲಿ ಉಳಿಸಿಕೊಂಡು ಬಂದಿದ್ದಾರೆ. ಜೇನಿಗೆ ಥಾಯ್‌ಸ್ಯಾಕ್‌ಬ್ರೂಡ್ ಎಂಬ ವಿದೇಶಿ ಖಾಯಿಲೆ ತಗುಲಿ ಸರ್ವನಾಶದ ಅಂಚಿನಲ್ಲಿದ್ದಾಗ ರಾಷ್ಟ್ರಮಟ್ಟದಟಾಸ್ಕ್ ಪೋರ್ಸ್ ಸದಸ್ಯನಾಗಿ ತನ್ನ ಅನುಭವವನ್ನು ತರಬೇತಿಯನ್ನು ಬಳಸಿಕೊಂಡು ಜೇನುರೋಗ ತಡೆಯುವಲ್ಲಿ ಶ್ರೀಧರ ಹೆಗಡೆ ಮಹತ್ವದ ಪಾತ್ರವಹಿಸಿದ್ದರು.

ಆಧುನಿಕ ಜೇನುತುಪ್ಪ ಸಂಸ್ಕರಣಾ ಘಟಕ ಸ್ಥಾಪನೆಯನ್ನು ಮಾಡಿದ್ದಲ್ಲದೇ ವಾರ್ಷಿಕ 8ಸಾವಿರ ಜೇನುತುಪ್ಪ ಖರೀದಿ, ಮಾರಾಟದಿಂದ ಸದ್ಯ 40,000 ಕೆಜಿ ತುಪ್ಪ ಖರೀದಿ, ಮಾರಾಟದವರೆಗೆ ಸಂಸ್ಥೆಯನ್ನು ಬೆಳಸಿದ್ದಲ್ಲದೇ ಖಾದಿ ಗ್ರಾಮೋದ್ಯೋಗ ಮಂಡಳಿ ಮತ್ತು ಆಯೋಗಗಳ ಸಹಕಾರದಿಂದ ಸ್ಫೂರ್ತಿ ಯೋಜನೆಯಿಂದ 99.17ಲಕ್ಷ ರೂಪಾಯಿ ಅನುದಾನ ಪಡೆದು ಜೇನುಕೃಷಿ ಮತ್ತು ಸಂಘವನ್ನು ಜಿಲ್ಲೆಯ ಏಕೈಕ ಸಹಕಾರಿ ಜೇನು ಸಂಘವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಇಂತಹ ಸ್ಮರಣೀಯ ಸೇವೆ ನೀಡಿದ ಶ್ರೀಧರ ಹೆಗಡೆಯನ್ನು ಶಾಸಕ ದಿನಕರ ಶೆಟ್ಟಿ, ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷ ವಿ.ಎನ್. ಭಟ್ ಅಳ್ಳಂಕಿ, ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ದಿನಾಂಕ 31ರಂದು ಸನ್ಮಾನಿಸಿ, ಬೀಳ್ಕೊಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button