ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಲಭ್ಯವಿರುವ ಲಸಿಕೆಗಳ ವಿವರ: ಎಲ್ಲೆಲ್ಲಿ ಎಷ್ಟು ಡೋಸ್ ಲಸಿಕೆ ಲಭ್ಯ ವಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ 3600 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ‌. ಹೊನ್ನಾವರದಲ್ಲಿ 600, ಕುಮಟಾದಲ್ಲಿ 700, ಕಾರವಾರದಲ್ಲಿ 700, ದಾಂಡೇಲಿಯಲ್ಲಿ 600, ಶಿರಸಿಯಲ್ಲಿ 700 ವಾಕ್ಸಿನ್‌ ಲಭ್ಯವಿದೆ. 2ನೇ ಡೋಸ್ ಬಾಕಿಯಿರುವ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಲಾಗಿದೆ.

ಹೊನ್ನಾವರದಲ್ಲಿ ಎಲ್ಲೆಲ್ಲಿ?

ಬೋಟನಲ್ಲಿ ಕೆಲಸ ಮಾಡುವವರಿಗೆ 1000 ಕೋವಿಶೀಲ್ಡ್ ಲಸಿಕೆಯಿದೆ. ಮೀನುಗಾರಿಕೆ ಸಹಾಯಕ ನಿರ್ದೇಶಕರು ಸೂಚಿಸಿದ ಮೀನುಗಾರರಿಗೆ ಮಾತ್ರ ನಾಳೆ ಮಲ್ಲುಕುರ್ವಾ ಶಾಲೆಯಲ್ಲಿ 1000 ಕೋವಿಶೀಲ್ಡ್ ಲಸಿಕೆ ನೀಡಲಾಗುವುದು.

ಅಲ್ಲದೆ, ಕೋವ್ಯಾಕ್ಸಿನ್ ಎರಡನೆಯ ಡೋಸ್
ತಾಲೂಕಾ ಆಸ್ಪತ್ರೆಯಲ್ಲಿ 200, ಮಂಕಿ ಆರೋಗ್ಯ ಕೇಂದ್ರದಲ್ಲಿ 300, ಹಳದೀಪುರ ಆರೋಗ್ಯ ಕೆಂದ್ರದಲ್ಲಿ 100 ಲಭ್ಯವಿದೆ.

ಕುಮಟಾದಲ್ಲಿ ಎಲ್ಲಿ?

ಹೊರ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಕ್ಕೆ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ 18 ವರ್ಷ ಮೆಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ. ಹೆಚ್ ಪಿಎಸ್ ಕಾಗಾಲ, ಧಾರೇಶ್ವರ ಸಭಾಭವನ,ಮಿರ್ಜಾನ್ ಗ್ರಾಮ‌ಪಂಚಾಯತ್, ಶಶಿಹಿತ್ತಲು, ಹೆಗಡೆಯ ಶಾಂತಿಕಾಂಬಾ ಶಾಲೆ, ತದಡಿ ಮತ್ತು ಗಂಗಾವಳಿಯ ಮೀನುಗಾರಿಕಾ ಸಹಕಾರಿ‌ಸಂಘದಲ್ಲಿ ವಾಕ್ಸಿನ್ ನೀಡಲಾಗುತ್ತದೆ.

ಅಂಕೋಲಾದಲ್ಲಿ ಎಲ್ಲೆಲ್ಲಿ?

ಅಂಕೋಲಾ: ಪಟ್ಟಣಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ (192), ಶಿರೂರ (14) ಸೇರಿ ಒಟ್ಟೂ 206 ಡೋಸ್ ಲಸಿಕೆಗಳನ್ನು ನೀಡಿದ್ದು,980 ಲಸಿಕೆಗಳು ಉಳಿಕೆ ಯಾಗಿದೆ . ಇದರ ಹೊರತಾಗಿ ಜುಲೈ 31 ರ ಶನಿವಾರ ಮೀನುಗಾರರಿಗೆ ಸೇರಿದ ವಿಶೇಷ ಕೋಟಾದಡಿ ಮೀನುಗಾರಿಕಾ ಪ್ರದೇಶಗಳಲ್ಲಿ ವ್ಯಾಕ್ಸಿನ್ ಕ್ಯಾಂಪ್ ನಡೆಸಲಾಗುತ್ತಿದೆ.

ಮೀನುಗಾರಿಕೆಗೆ ಹೊರ ರಾಜ್ಯಕ್ಕೆ ತೆರಳುವವರು ಸೇರಿದಂತೆ ಅರ್ಹ ಮೀನುಗಾರರು ಮಾತ್ರ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕ ಆರೋಗ್ಯ ಅಧಿಕಾರಿಗಳು ಹಾಗೂ ಸಹಾಯಕ ಮೀನುಗಾರಿಕಾ ನಿರ್ದೇಶಕರ ಕಾರ್ಯಾಲಯದ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿರಸಿಯಲ್ಲಿ ಎಲ್ಲೆಲ್ಲಿ?

ಶಿರಸಿ ತಾಲೂಕಿನಲ್ಲಿ ನಾಳೆ 700 ಕೋವ್ಯಾಕ್ಸಿನ್ ವಾಕ್ಸಿನ್‌ ಲಭ್ಯವಿದೆ. ಯಲ್ಲಾಪುರ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನೀಡಲಾಗುತ್ತಿದೆ ಎಂಬ ಮಾಹಿತಿ ಬಂದಿದೆ.

ವಿಸ್ಮಯ ನ್ಯೂಸ್ ಕಾರವಾರ

ಇಂದಿನ ಪ್ರಮುಖ‌ ಸುದ್ದಿಗಳ ಲಿಂಕ್ ಇಲ್ಲಿದೆ.

Exit mobile version