Follow Us On

WhatsApp Group
Important
Trending

ಉತ್ತರಕನ್ನಡದಲ್ಲಿ ನಾಳೆಯಿಂದ ಫಸ್ಟ್ ಡೋಸ್ ಲಸಿಕೆ ಲಭ್ಯ | 1st ಡೋಸ್ ಮತ್ತು 2nd ಡೋಸ್ (50 :50) ಎಲ್ಲೆಲ್ಲಿ, ಎಷ್ಟೆಷ್ಟು ?

ಲಭ್ಯತೆಯ ಆಧಾರದ ಮೇಲೆ ಮೊದಲನೇ ಡೋಸ್

ಕಾರವಾರ: ಬಹುದಿನಗಳಿಂದ ಕೋವಿಡ್ ಪ್ರಥಮ ಹಂತದ ಲಸಿಕೆಗಾಗಿ ಕಾದಿರುವ ತಾಲೂಕಿನ ಜನತೆಗೆ ಆರೋಗ್ಯ ಇಲಾಖೆ ಶುಭಸುದ್ದಿ ನೀಡಿದೆ.

02-08-2021 ರಂದು ಜಿಲ್ಲೆಗೆ ಪೂರೈಕೆಯಾಗುವ ಕೋವಿಡ್ ಲಸಿಕೆಯಲ್ಲಿ 50 % 2ನೇ ಡೋಸ್ ಗೆ ಮೀಸಲಿಟ್ಟು ಲಸಿಕೆ ಲಭ್ಯತೆಯ ಆಧಾರದ ಮೆಲೆ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ 1 ನೇ ಡೋಸ್ ಲಸಿಕಾಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ಲಭ್ಯವಿರುವ ಲಸಿಕೆಯ ಪ್ರಮಾಣವನ್ನು ಲಸಿಕಾಕರಣ ನಡೆಸುವ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು. ಆದುದರಿಂದ ಸಾರ್ವಜನಿಕರು ಕೋವಿಡ್ ಗೆ ಸಂಬಂಧಿಸಿದ ಮುಂಜ್ರಾಗತಾ ಕ್ರಮಗಳನ್ನು ಪಾಲಿಸಿ ಈ ಲಸಿಕಾಕರಣ ಕಾರ್ಯಕ್ರಮದಲ್ಲಿ ಲಸಿಕೆಯನ್ನು ಪಡೆಯಲು ಕೋರಲಾಗಿದೆ.

ಕುಮಟಾದಲ್ಲಿ ಎಲ್ಲೆಲ್ಲಿ?

ಕುಮಟಾದಲ್ಲಿ ನಾಳೆ ಒಟ್ಟು ,3,300 ಲಸಿಕೆ ಲಭ್ಯವಿದೆ. ಇದರಲ್ಲಿ ಕೋವಿಶೀಲ್ಡ್ 2,600 ಲಭ್ಯವಿದ್ದು, ಈ ಕೆಳಕಂಡ ಸ್ಥಳದಲ್ಲಿ ಮೊದಲನೇ ಮತ್ತು ಎರಡನೇ ಡೋಸ್ ನೀಡಲಾಗುವುದು. ಪುರಭವನದ ಕಿತ್ತೂರು ರಾಣಿ ಚೆನ್ನಮ್ಮ‌ಪಾರ್ಕ್ ನಲ್ಲಿ ಕೋವಾಕ್ಸಿನ್ 700 ಡೋಸ್ ( ಎರಡನೇ ಡೋಸ್ ಮಾತ್ರ ) ಲಭ್ಯವಿದೆ.

ಅಂಕೋಲಾದಲ್ಲಿ ಎಲ್ಲೆಲ್ಲಿ?

ಅಂಕೋಲಾ ಅ 1: ಆಗಸ್ಟ್ 2ರ ಸೋಮವಾರದಿಂದ 1st ಡೋಸ್ ಲಸಿಕೆ ನೀಡಿಕೆಗೂ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ.ಬೆಳಂಬರ (250), ಅಲಗೇರಿ (100),ಭಾವಿಕೇರಿ(80), ರಾಮನಗುಳಿ(200),ಹಿಲ್ಲೂರು(150), ಸಗಡಗೇರಿ(100), ಹಾಗೂ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ(150) ಲಸಿಕೆಗಳನ್ನು ಫಸ್ಟ್ ಡೋಸ್ ಗಳಿಗಾಗಿ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.

ಸರಿಸುಮಾರು ಅಷ್ಟೇ ಸಂಖ್ಯೆಯ (50:50) ಎರಡನೇ ಡೋಸಗಳನ್ನು ಸಹ ಆಯಾ ವ್ಯಾಕ್ಸಿನ್ ಕೇಂದ್ರಗಳಲ್ಲಿ ನೀಡಲು ಸಿದ್ಧತೆ ನಡೆಸಿದ್ದು ಒಟ್ಟಾರೆಯಾಗಿ ನಾಳೆ ಆಗಸ್ಟ್ 2 ರಂದು ತಾಲೂಕಿನಲ್ಲಿ 2050 ಲಸಿಕೆ ಲಭ್ಯವಿದೆ.
ಲಸಿಕೆ ಲಭ್ಯತೆ ಆಧಾರದ ಮೇಲೆ, ಅಗಸ್ಟ್ 2ರ ಸೋಮವಾರದ ನಂತರವೂ ಫಸ್ಟ್ ಡೋಸ್ ಮತ್ತು 2ನೇ ಹಂತದ ಲಸಿಕೆ ವಿತರಣೆ ಕ್ಯಾಂಪ್ ಮುಂದುವರೆಯುವುದರಿಂದ,ಸಾರ್ವಜನಿಕರು ಒಮ್ಮೇಲೆ ಗುಂಪು ಸೇರುವುದು,ಒತ್ತಡಕ್ಕೊಳಗಾಗುವದನ್ನು ತಪ್ಪಿಸಿ,ಇಲಾಖೆ ಜೊತೆ ಸಹಕರಿಸುವಂತೆ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ ಮತ್ತು ವಿಲಾಸ ನಾಯಕ ಅಂಕೋಲಾ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button