ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಯಾರು ಸಚಿವರಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸಚಿವರಾಗಿ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಸ್ವತ: ಹೆಬ್ಬಾರ್ ಸಂತಸ ಹಂಚಿಕೊoಡಿದ್ದಾರೆ.
ಶಿವರಾಮ ಹೆಬ್ಬಾರ್ ಏನು ಹೇಳಿದರು?
ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಷ್ಟೇ ದೂರವಾಣಿ ಮೂಲಕವಾಗಿ ಕರೆ ಮಾಡಿ ನನಗೆ ಸಚಿವ ಸಂಪುಟದಲ್ಲಿ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಆಹ್ವಾನಿಸಿದ್ದಾರೆ. ಇದನ್ನು ನಿಮ್ಮ ಮುಂದೆ ಹಂಚಿಕೊಳ್ಳುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ ಎಂದಿದ್ದಾರೆ.
ರೂಪಾಲಿ ನಾಯ್ಕ ಅವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ?
ಇದರೊಂದಿಗೆ ರೂಪಾಲಿ ನಾಯ್ಕ ಅವರಿಗೆ ಮಂತ್ರಿಸ್ಥಾನ ಸಿಗುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಒಬ್ಬರು ಮಂತ್ರಿಯಾಗಲಿರುವುದರಿAದ, ರೂಪಾಲಿ ನಾಯ್ಕ ಅವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ಇದೆ ಎಂದು ಹೇಳಾಗುತ್ತಿದೆ. ಆದರೆ, ಮಹಿಳಾ ಕೋಟಾದಲ್ಲಿ ಸಚಿವಸ್ಥಾನ ಸಿಗಲಿದೆ ಎಂದು ರೂಪಾಲಿ ನಾಯ್ಕ ಬೆಂಬಲಿಗರು, ಬಲವಾಗಿ ನಂಬಿದ್ದಾರೆ. ಈಗಾಗಲೇ ಒಬ್ಬ ಮಹಿಳಾ ಶಾಸಕಿಗೆ ಸಚಿವ ಸ್ಥಾನ ನೀಡಲಾಗಿದ್ದು, ಆ ಮಹಿಳಾ ಶಾಸಕಿ ಯಾರು ಎಂಬ ಮಾಹಿತಿ ಇನ್ನು ಹೊರಬಿದ್ದಿಲ್ಲ.
ವಿಸ್ಮಯ ನ್ಯೂಸ್, ಕಾರವಾರ
ಪ್ರಮುಖ ಸುದ್ದಿಗಳು
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
- ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
- ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
- ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ