ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಗುರುವಾರ ಒಟ್ಟು 5,650 ವಾಕ್ಸಿನ್ ಲಭ್ಯವಿದೆ. ಇವುಗಳಲ್ಲಿ 4,150 ಕೋವಿಶೀಲ್ಡ್ ಮತ್ತು 1500 ಕೋವಾಕ್ಸಿನ್ ಡೋಸ್ ಎಂದು ತಿಳಿದುಬಂದಿದೆ. ಅಂಕೋಲಾದಲ್ಲಿ 300, ಭಟ್ಕಳ 400, ಹಳಿಯಾಳ 250, ಹೊನ್ನಾವರ 400, ಜೋಯ್ಡಾ 250, ಕಾರವಾರ 400, ಮುಂಡಗೋಡ 300, ಕುಮಟಾ 400, ಶಿರಸಿ 400, ಸಿದ್ದಾಪುರ 300 ಡೋಸ್ ಸಿಗಲಿದೆ.
ಯಲ್ಲಾಪುರ 250, ದಾಂಡೇಲಿ 250 ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ 200 ಕೋವಿಶೀಲ್ಡ್ ವಾಕ್ಸಿನ್ ಲಭ್ಯವಿದೆ. ಅಲ್ಲದೆ, ಹೊನ್ನಾವರಲ್ಲಿ 200 ಕೋವಾಕ್ಸಿನ್, ಕಾರವಾರ 300, ಕುಮಟಾ 200, ಶಿರಸಿ 200, ದಾಂಡೇಲಿ 200, ಜಿಲ್ಲಾಸ್ಪತ್ರೆಯಲ್ಲಿ 200, ನೇವಿಯಲ್ಲಿ 200 ಕೋವಾಕ್ಸಿನ್ ಡೋಸ್ ಇದೆ.
ಅಂಕೋಲಾದಲ್ಲಿ ಎಲ್ಲೆಲ್ಲಿ?
ಅಂಕೋಲಾ: ಆಗಸ್ಟ್ 5ರಂದು ಗುರುವಾರ ತಾಲೂಕಿನಲ್ಲಿ ವಿತರಿಸಲು, ಒಟ್ಟು 300 ಡೋಸ್ ಲಸಿಕೆ ಲಭ್ಯವಿದೆ. ಅವುಗಳಲ್ಲಿ ಅವರ್ಸಾಕ್ಕೆ ಪ್ರಥಮ ಡೋಸ್ (80), ದ್ವಿತೀಯ ಡೋಸ್(70), ನದಿಭಾಗ ಪ್ರಥಮ ಡೋಸ್ (80), ದ್ವಿತೀಯ ಡೋಸ್ (70) ಹಂಚಿಕೆ ಮಾಡಲಾಗಿದೆ ಎಂದು ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುಮಟಾದಲ್ಲಿ ಎಲ್ಲೆಲ್ಲಿ?
ಕುಮಟಾ: ತಾಲೂಕಿನ ಸರ್ಕಾರಿ ಆಸ್ಪತ್ರೆ 100, ಕೋಡ್ಕಣಿ ಪ್ರಾಥಮಿಕ ಆರೋಗ್ಯಕೇಂದ್ರ 100, ಕಾಗಲ್ ಪ್ರಾಥಮಿಕ ಆರೋಗ್ಯ ಕೇಂದ್ರ 100, ಸಂತೇಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರ 50, ಹಿರಿಯ ಪ್ರಾಥಮಿಕ ಶಾಲೆ ಕೂಜಳ್ಳಿ 50 ಸೇರಿ ಒಟ್ಟು 400 ಕೋವಿಶೀಲ್ಡ್ ( ಸೆಕೆಂಡ್ ಡೋಸ್ ) ಲಭ್ಯವಿದೆ. ©Copyright reserved by Vismaya tv ಅಲ್ಲದೆ, ಡಾ. ಎ.ವಿ ಬಾಳಿಗಾ ಕಾಮರ್ಸ್ ಕಾಲೇಜಿನಲ್ಲಿ 200 ಕೋವಾಕ್ಸಿನ್ ಲಸಿಕೆ ಲಭ್ಯವಿದೆ. ( ಎರಡನೆ ಡೋಸ್ ಮಾತ್ರ ) ಉಳಿದ ತಾಲೂಕುಗಳ ವಿವರವನ್ನು ಮಾಹಿತಿ ಲಭ್ಯವಾದ ಬಳಿಕ ನೀಡಲಾಗುವುದು.
ವಿಸ್ಮಯ ನ್ಯೂಸ್ ಕಾರವಾರ ಮತ್ತು ವಿಲಾಸ ನಾಯಕ ಅಂಕೋಲಾ., ಶ್ರೀಧರ್ ನಾಯ್ಕ, ಹೊನ್ನಾವರ