ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಲಭ್ಯವಿರುವ ಕೋವಿಡ್ ಲಸಿಕೆಯ ವಿವರ: ಎಲ್ಲೆಲ್ಲಿ ಎಷ್ಟು ಡೋಸ್ ವಾಕ್ಸಿನ್ ಇದೆ‌ ನೋಡಿ?

ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 2,100 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಮಾಹಿತಿ ನೀಡಲಾಗಿದೆ.

ದಾಂಡೇಲಿ 300, ಕಾರವಾರದಲ್ಲಿ 300 ಡೋಸ್, ಕುಮಟಾ 700, ಶಿರಸಿ 400, ಜಿಲ್ಲಾಸ್ಪತ್ರೆಯಲ್ಲಿ 200, ನೇವಿಯಲ್ಲಿ 200 ಡೋಸ್ ಕೋವ್ಯಾಕ್ಸಿನ್ ಡೋಸ್ ಲಭ್ಯವಿದೆ.

ಕುಮಟಾದಲ್ಲಿ ಎಲ್ಲಿ?

ಕುಮಟಾದಲ್ಲಿ ನಾಳೆ ಒಟ್ಟು 700 dose ಕೋವಾಕ್ಸಿನ್ ಲಭ್ಯವಿದೆ. ಡಾ ಎ.ವಿ ಬಾಳಿಗಾ ಕಾಲೇಜಿನ ವಾಣಿಜ್ಯ ವಿಭಾಗದ ಉಳಿದ ವಿದ್ಯಾರ್ಥಿಗಳು, ಕಲಾ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ, ಡಿಪ್ಲೊಮಾ ವಿದ್ಯಾರ್ಥಿಗಳು ಮತ್ತು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೇವಲ ಎರಡನೇ ಡೋಸ್ ನೀಡಲಾಗುವುದು.

ಅಲ್ಲದೆ, ಬಾಳಿಗಾ ಕಲಾ ಹಾಗು ವಿಜ್ಞಾನ ಕಾಲೇಜು ಕುಮಟಾದಲ್ಲಿ ಲಸಿಕಾಕರಣ ನಡೆಯಲಿದೆ. ಕೋವಿಶಿಲ್ಡ ಲಸಿಕೆ ನಾಳೆ ಲಭ್ಯವಿರುವದಿಲ್ಲ.

ಹೊನ್ನಾವರದಲ್ಲಿ ಎಲ್ಲಿ?

ಹೊನ್ನಾವರ ತಾಲೂಕಿನಲ್ಲಿ ನಾಳೆ PHC ಹಳದೀಪುರದಲ್ಲಿ 50 ಡೋಸ್ ಕೋವ್ಯಾಕ್ಸೀನ್ ಲಸಿಕೆ ಲಭ್ಯವಿದೆ. (ಎರಡನೇ ಡೋಸ್) ಹಾಗೂ ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ 30 ಕೋವ್ಯಾಕ್ಸಿನ್ ( ಎರಡನೇ ಡೋಸ್) ಲಭ್ಯವಿದೆ.

ಅಂಕೋಲಾದಲ್ಲಿ 5 ಹೊಸ ಕೊವಿಡ್ ಕೇಸ್ | ಇಂದು 338 ಲಸಿಕೆ ನೀಡಿಕೆ

ಅಂಕೋಲಾ ಅ 5: ತಾಲೂಕಿನಲ್ಲಿ 5 ಹೊಸ ಕೊವಿಡ್ ಕೇಸುಗಳು ದಾಖಲಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 89ಕ್ಕೆ ಏರಿಕೆ ಆಗಿದೆ. ತಾಲೂಕಾಸ್ಪತ್ರೆಯಲ್ಲಿ (8), ಕಾರವಾರ (ಕ್ರಿಮ್ಸ್ ನಲ್ಲಿ 5) ಸೇರಿ ಒಟ್ಟೂ 13 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಮುಕ್ತರಾದ ನಾಲ್ಕು ಜನರನ್ನು ಬಿಡುಗಡೆಗೊಳಿಸಲಾಗಿದೆ.ಸೋಂಕು ಲಕ್ಷಣಗಳುಳ್ಳ ಇತರೆ 76 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ತಾಲೂಕಿನ ಅವರ್ಸಾದಲ್ಲಿ (174), ನದಿಭಾಗದಲ್ಲಿ ( 164) ಕೊವಿಡ್ ಲಸಿಕೆ ನೀಡಲಾಗಿದೆ.

ವಿಸ್ಮಯ ಕಾರವಾರ, ಹೊನ್ನಾವರ ಮತ್ತು ವಿಲಾಸ ನಾಯಕ ಅಂಕೋಲಾ

Exit mobile version