ಕಾರವಾರ: ಕೋವಿಡ್ ಬಿಗಿ ತಪಾಸಣೆ ಕೆಲವರಿಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಹೌದು, ಜಿಲ್ಲೆಯಲ್ಲಿ ಕೋವಿಡ್ ಮೂರನೇಯ ಅಲೆಯ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಾಜಾಳಿ ಗಡಿಯಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ, ಗೋವಾದಿಂದ ರಾಜ್ಯಕ್ಕೆ ಬರಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ.
ಹೀಗಾಗಿ ಕಾರವಾರಕ್ಕೆ ಮದುವೆ ನಿಶ್ಚಿತಾರ್ಥಕ್ಕೆ ಬಂದ ಕುಟುಂಬವೊಂದು ಗೋವಾ ಕಾರವಾರ ಗಡಿಯಲ್ಲಿ ಪರದಾಟ ನಡೆಸಿರುವ ಘಟನೆ ನಡೆದಿದೆ. ಗೋವಾದ ಯುವಕನಿಗೆ ಕಾರವಾರದ ಯುವತಿಯೊಂದಿಗೆ ಇಂದು ನಿಶ್ಚಿತಾರ್ಥ ನಡೆಯಬೇಕಿತ್ತು. ಆದ್ರೆ ಗೋವಾದಿಂದ ಬಂದಿರುವ ವರನ ಕಡೆಯವರ ಬಳಿ ಕರೊನಾ ನೆಗೆಟಿವ್ ವರದಿ ಇಲ್ಲದಿರುವುದರಿಂದ ಕಾರವಾರ ಪ್ರವೇಶ ತಡೆಯಲಾಯಿತು.
ಇದರಿಂದ ವರನ ಕಡೆಯವರು ಮಾಜಾಳಿ ಗಡಿಯಲ್ಲಿ ಸುಮಾರು ಎರಡು ತಾಸುಗಳ ಕಾಲ ಕಾದು ಕಾದು ಸುಸ್ತಾದರು. ಅಂತಿಮವಾಗಿ ಕೇವಲ ಎಂಟು ಜನರಿಗೆ ಮಾತ್ರ ನಿಶ್ಚಿತಾರ್ಥಕ್ಕೆ ತೆರಳಲು ಅವಕಾಶ ನೀಡಿ ಉಳಿದವರನ್ನು ವಾಪಸ್ ಕಳುಹಿಸಲಾಗಿದೆ.
ವಿಸ್ಮಯ ನ್ಯೂಸ್ ಕಾರವಾರ