ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಶನಿವಾರ ಒಟ್ಟು 13, 900 ಡೋಸ್ ಲಭ್ಯವಿದೆ. ಇದರಲ್ಲಿ 12 ಸಾವಿರ ಕೋವಿಶೀಲ್ಡ್ ವ್ಯಾಕ್ಸಿನ್ ಡೋಸ್ ಮತ್ತು 1,900 ಕೋವಾಕ್ಸಿನ್ ಡೋಸ್ ಲಭ್ಯವಿದೆ.
ಅಂಕೋಲಾದಲ್ಲಿ 800, ಭಟ್ಕಳದಲ್ಲಿ 1,400, ಹೊನ್ನಾವರ 1,300 ಹಳಿಯಾಳ 700, ಜೋಯ್ಡಾ 300, ಕಾರವಾರ 1,300 , ಮುಂಡಗೋಡ 800, ಕುಮಟಾ 1,400, ಶಿರಸಿ 1,500, ಸಿದ್ದಾಪುರ 800, ಯಲ್ಲಾಪುರ 800, ದಾಂಡೇಲಿ 600 ಮತ್ತು ಜಿಲ್ಲಾಸ್ಪತ್ರೆಯಲ್ಲಿ 300 ಕೋವಿಶೀಲ್ಡ್ ಡೋಸ್ ಲಭ್ಯವಿದೆ. ಅಲ್ಲದೆ, ಕಾರವಾರದಲ್ಲಿ 500, ಶಿರಸಿಯಲ್ಲಿ ಸಾವಿರ , ದಾಂಡೇಲಿಯಲ್ಲಿ 100 ಹಾಗು ಜಿಲ್ಲಾಸ್ಪತ್ರೆಯಲ್ಲಿ 300 ಕೋವಾಕ್ಸಿನ್ ಲಭ್ಯವಿದೆ.
ಕುಮಟಾದಲ್ಲಿ ಎಲ್ಲೆಲ್ಲಿ?
ಕುಮಟಾದಲ್ಲಿ ಒಟ್ಟು ನಾಳೆ 1,400 ಕೋವಿಶೀಲ್ಡ್ ಲಭ್ಯವಿದೆ. ಆದ್ಯತೆ ಮೇರೆಗೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೊದಲೇ ಡೋಸ್ ಹಾಗು ಉಳಿದವರಿಗೆ ಎರಡನೇ ಡೋಸ್ ನೀಡಲಾಗುವುದು ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಮಾಹಿತಿ ನೀಡಿದೆ. ©Copyright reserved by Vismaya tv
ಅಂಕೋಲಾದಲ್ಲಿ ಎಲ್ಲೆಲ್ಲಿ?
ಅಂಕೋಲಾ : ತಾಲೂಕಿನಲ್ಲಿ ಆಗಸ್ಟ್ 7 ರ ಶನಿವಾರ ಒಟ್ಟೂ 800 ಡೋಸ್ ಲಸಿಕೆ ಲಭ್ಯವಿದೆ. ಗಾಬಿತಕೇಣಿ ,ಅಗಸೂರು,ಬೆಳಸೆ,ಉಳುವರೆಗಳಲ್ಲಿ ತಲಾ 150 ಡೋಸ್ ಪೂರೈಸಲಾಗುತ್ತಿದ್ದು ಅವುಗಳಲ್ಲಿ ಮೊದಲ ಡೋಸ್ ( 80 ), ಎರಡನೇ ಡೋಸ್ (70) ಕಾಯ್ದಿರಿಸಲಾಗುತ್ತಿದೆ.
ಪಟ್ಟಣ ವ್ಯಾಪ್ತಿಯ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ 200 ಡೋಸ್ ಲಭ್ಯವಿದ್ದು,ಮೊದಲ ಡೋಸ್ (100),ಎರಡನೇ ಡೋಸ್ (100)ಕಾಯ್ದಿರಿಸಲಾಗಿದೆ.©Copyright reserved by Vismaya tv . ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾತಿನಿಧ್ಯವಿದ್ದು ಅರ್ಹ ಫಲಾನುಭವಿಗಳು ಲಸಿಕೆ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಸ್ಮಯ ನ್ಯೂಸ್ ಕಾರವಾರ ಮತ್ತು ವಿಲಾಸ್ ನಾಯಕ ಅಂಕೋಲಾ
ಇಂದಿನ ಪ್ರಮುಖ ಸುದ್ದಿಗಳ ಲಿಂಕ್ ಇಲ್ಲಿದೆ
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು
- ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸುತ್ತಿದ್ದ ನಯವಂಚಕ : ಕೊನೆಗೂ ಖಾಕಿ ಬಲೆಗೆ ಬಿದ್ದ ಚಾಲಾಕಿ ?
- ಮುರ್ಡೇಶ್ವರದಲ್ಲಿ ಮೂರುದಿನಗಳ ವಿಶ್ವ ಮೀನುಗಾರಿಕೆ ದಿನಾಚರಣೆಗೆ ಸಿದ್ಧತೆ
- ಕುಮಟಾ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಅದ್ಧೂರಿ ಯಕ್ಷಗಾನ ಶುಭಲಕ್ಷಣ: ಹಳೆಬೇರು, ಹೊಸ ಚಿಗುರಿನ ಸಮ್ಮಿಲನ, ಅನುಭವಿ ಮೇಳದೊಂದಿಗೆ ಅಪೂರ್ವ ಕಲಾವಿದರ ಮಿಲನ