Important

ಉತ್ತರಕನ್ನಡದ ಇಂದಿನ ಕೋವಿಡ್ ವಿವರ; ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ

ಹೊನ್ನಾವರ ಮತ್ತು ಸಿದ್ದಾಪುರದಲ್ಲಿ ನಾಳೆ ಎಲ್ಲೆಲ್ಲಿ ಎಷ್ಟು ಲಸಿಕೆ ಲಭ್ಯವಿದೆ ಎಂಬ ಮಾಹಿತಿ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 59 ಕೋವಿಡ್ ಕೇಸ್ ದಾಖಲಾಗಿದೆ. ಇದೇ ವೇಳೆ 47ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕುಮಟಾ 10, ಹೊನ್ನಾವರ 12, ಕಾರವಾರದಲ್ಲಿ 3, ಅಂಕೋಲಾ 7,ಭಟ್ಕಳ 6, ಶಿರಸಿ 13 ಹಾಗೂ ಯಲ್ಲಾಪುರದಲ್ಲಿ 8 ಮಂದಿಗೆ ಕರೋನಾ ಸೋಂಕು ದೃಢಪಟ್ಟಿದೆ.

ಹೊನ್ನಾವರದಲ್ಲಿ ವಾಕ್ಸಿನೇಷನ್ ಎಲ್ಲೆಲ್ಲಿ?

ಹೊನ್ನಾವರ: ತಾಲೂಕಾ ಆಸ್ಪತ್ರೆಯ ವತಿಯಿಂದ ಮಾರಥೋಮಾ ಶಾಲೆಯಲ್ಲಿ 300 ಡೋಸ್, ಪಸ್ಟ್ ಡೋಸ್ 100, ಸೆಕೆಂಡ್ ಡೋಸ್ 100, ಗರ್ಭಿಣಿ- ಬಾಳಂತಿಯರಿಗೆ 100 ಡೋಸ್ ನೀಡಲಾಗುವುದು.

ಹೊನ್ನಾವರ ಪಟ್ಟಣ ಪಂಚಾಯತ ಸಭಾಭವನದಲ್ಲಿ 300 ಡೋಸ್, ಪಸ್ಟ್ ಡೋಸ್ 150, ಸೆಕೆಂಡ್ ಡೋಸ್ 150 ಲಭ್ಯವಿದೆ. ಹೊಸಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300, ಪಸ್ಟ್ ಡೋಸ್ 150 ಲ, ಸೆಕೆಂಡ್ ಡೋಸ್ 150 ಲಭ್ಯವಿದೆ. @ವಿಸ್ಮಯ ನ್ಯೂಸ್

ಇಡಗುಂಜಿ ದೇವಸ್ಥಾನದ ಹತ್ತಿರ 400 ಡೋಸ್, ಪಸ್ಟ್ ಡೋಸ್ 150 , ಸೆಕೆಂಡ್ ಡೋಸ್ 150 ಎಂದು ಹಂಚಿಕೆ ಮಾಡಲಾಗಿದೆ. (ನಾಳೆ ಈ ಎಲ್ಲಾ ಕಡೆಗಳಲ್ಲಿ ವಿತರಿಸುವುದು ಕೋವಿಶೀಲ್ಡ್ ಆಗಿರುತ್ತದೆ)

ಸಿದ್ದಾಪುರದಲ್ಲಿ ವಾಕ್ಸಿನೇಷನ್ ಎಲ್ಲೆಲ್ಲಿ?

ಸಿದ್ದಾಪುರ: ತಾಲೂಕಿನಲ್ಲಿ ಶನಿವಾರದಂದು ವಿವಿಧೆಡೆ ಕೋವಿಶೀಲ್ಡ್ ಲಸಿಕಾ ಶಿಬಿರ ನಡೆಯಲಿದೆ.
ಪ್ರಾಥಮಿಕ ಆರೋಗ್ಯಕೇಂದ್ರ ಕೋಲಸಿರ್ಸಿ ವತಿಯಿಂದ ನಿಡಗೋಡು ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಶಿಬಿರ ಆಯೋಜಿಸಲಾಗಿದೆ. ಬಿದ್ರಕಾನ್ ಗ್ರಾ.ಪಂ. ಸಭಾಭವನದಲ್ಲಿ ಕೋವಿಶೀಲ್ಡ್ 100 ಡೋಸ್,ಮತ್ತು ಕಾನಗೋಡು ಗ್ರಾ.ಪಂ ಸಭಾಭವನದಲ್ಲಿ ಕೋವಿಶೀಲ್ಡ್ 150 ಡೋಸ್ ಲಸಿಕೆ ಲಭ್ಯವಿದೆ. ಮಾವಿನಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಶೀಲ್ಡ್ 100 ಡೋಸ್ , ಹೇರೂರು ಗ್ರಾ.ಪಂ ಸಭಾಭವನದಲ್ಲಿ ಕೋವಿಶೀಲ್ಡ್ 100 ಡೋಸ್ ಲಸಿಕೆ ಲಭ್ಯವಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button