Follow Us On

WhatsApp Group
Info
Trending

ರಾಷ್ಟಧ್ವಜದ ಅಪಮಾನ ತಡೆಯಲು ಹಿಂದೂ ಜನಜಾಗೃತಿ ಸಮಿತಿಯ ಮನವಿ

ಕಾರವಾರ: ಭಾರತದ ಸ್ವಾತಂತ್ರ‍್ಯದಿನದಂದು ಎಲ್ಲಾ ಕಡೆ ಧ್ವಜವಂದನೆಯ ಕರ‍್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಅದೇ ದಿನಾ ಮಧ್ಯಾಹ್ನದಿಂದಲೇ ಚರಂಡಿಗಳಲ್ಲಿ ಕಾಗದದ ಅಥವಾ ಪ್ಲಾಸ್ಟಿಕಿನ ರಾಷ್ಟ್ರಧ್ವಜಗಳು ಅದೇ ದಿನ ಛಿದ್ರವಿಛಿದ್ರವಾಗಿ ಬಿದ್ದಿರುತ್ತವೆ. ಅದಲ್ಲದೇ ಪ್ಲಾಸ್ಟಿಕಿನ ಉಪಯೋಗದಿಂದ ಅದು ತಕ್ಷಣ ನಾಶವಾಗದ ಕಾರಣ ಬಹಳ ದಿನಗಳ ತನಕ ರಾಷ್ಟ್ರಧ್ವಜದ ಅವಮಾನವನ್ನು ಕಾಣಬೇಕಾಗುತ್ತದೆ.

ಹಿಂದೂ ಜನಜಾಗೃತಿ ಸಮಿತಿ ಕಳೆದ ೧೭ ವರ್ಷಗಳಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವ ಅಭಿಯಾನ ಮಾಡುತ್ತಿದೆ. ಇದರ ಅಂತರರ್ಗತ ರಸ್ತೆಬದಿ ಬಿದ್ದಿರುವ ರಾಷ್ಟ್ರಧ್ವಜಗಳನ್ನು ಸಂಗ್ರಹಿಸುವುದು, ಪ್ಲಾಸ್ಟಿಕ್ ಧ್ವಜದ ಬಳಕೆ ಮಾಡದಂತೆ ಸಮಾಜ ಮತ್ತು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮಾಡುವುದು, ಸರಕಾರಕ್ಕೆ ಎಲ್ಲಾ ಕಡೆ ಮನವಿಪತ್ರ ನೀಡುವುದು, ಕರಪತ್ರ ವಿತರಿಸುವುದು ಮುಂತಾದ ರೀತಿಯಲ್ಲಿ ಅಭಿಯಾನ ಮಾಡುತ್ತಿದೆ.

ಕೇಂದ್ರೀಯ ಗೃಹಮಂತ್ರಾಲಯದ ಆದೇಶದಂತೆ ರಾಷ್ಟ್ರಧ್ವಜ ಮತ್ತು ಬಿಲ್ಲೆಗಳಿಗಾಗಿ ಪ್ಲಾಸ್ಟಿಕ್ ಉಪಯೋಗಿಸಬಾರದು ಎಂಬ ನಿಯಮವಿದೆ, ಈ ನಿರ್ಣಯವನ್ನು ಯೋಗ್ಯ ರೀತಿಯಲ್ಲಿ ಕಾರ್ಯರೂಪಕ್ಕೆ ತರುವ ಅವಶ್ಯಕತೆಯಿದೆ. ಭಾರತೀಯ ಸಂವಿಧಾನದಲ್ಲಿನ ಕಲಮ್ ೫೧(ಅ) ಇದಕ್ಕನುಸಾರ ರಾಷ್ಟ್ರಧ್ವಜದ ಗೌರವ ಕಾಪಾಡುವುದು ನಾಗರಿಕರ ಹಾಗೂ ಸರಕಾರದ ಮೂಲಭೂತ ಕರ್ತವ್ಯಗಳಾಗಿವೆ. ರಾಷ್ಟ್ರಧ್ವಜದ ಅವಮಾನ, ರಾಷ್ಟ್ರೀಯ ಗೌರವದ ಪ್ರತೀಕಗಳ ದುರುಪಯೋಗವನ್ನು ತಡೆಯುವ ಕಾಯ್ದೆ ೧೯೫೦, ಕಲಮ್ ೨ ಮತ್ತು ೫ ಕ್ಕನುಸಾರ ಹಾಗೂ ರಾಷ್ಟ್ರಗೌರವ ಅವಮಾನ ನಿರ್ಬಂಧ ಅದಿನಿಯಮ ೧೯೭೧ರ ಕಲಂ ೨ ಕ್ಕನುಸಾರ ಹಾಗೂ ಬೋಧಚಿಹ್ನೆ ಹಾಗೂ ಹೆಸರುಗಳನ್ನು (ಅಯೋಗ್ಯವಾಗಿ ಉಪಯೋಗಿಸಲು ನಿರ್ಬಂಧ) ಅದಿನಿಯಮ ೧೯೫೦ ಇತ್ಯಾದಿ ಈ ಮೂರು ಕಾಯಿದೆಗನುಸಾರ ಇದು ದಂಡನಾತ್ಮಕ ಅಪರಾಧವಾಗಿದೆ.

ಹಾಗಾಗಿ ರಾಷ್ಟ್ರಧ್ವಜದ ಅವಮಾನವಾಗ ಬಾರದೆಂದು ಸರಕಾರವು ತೆಗೆದುಕೊಂಡ ನಿರ್ಣಯವನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಪ್ಲಾಸ್ಟಿಕಿನ ರಾಷ್ಟ್ರಧ್ವಜ, ಬಿಲ್ಲೆ, ಹಾಗೂ ಇತರ ವಸ್ತುಗಳನ್ನು ಉತ್ಪಾದನೆ ಮಾಡುವ ಉತ್ಪಾದಕರು ಹಾಗೂ ವಿತರಕರು ಮತ್ತು ಮಾರಾಟಗಾರರು, ಇವರ ಮೇಲೆ ಪೊಲೀಸರ ಸಹಾಯದಿಂದ ದಾಳಿ ಮಾಡಿ ಅವರ ವಸ್ತುಗಳನ್ನು ಜಪ್ತಿ ಮಾಡಬೇಕು. ಕಾಯಿದೆಯ ಉಲ್ಲಂಘನೆ ಮಾಡಿದ್ದಕ್ಕಾಗಿ ಕಾನೂನು ಪ್ರಕಾರ ಕಾರ್ಯಾಚರಣೆ ಮಾಡ ಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಗಳಿಗೆ ಮತ್ತು ಕುಮಟಾ ದ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.

ಅಡ್ವೊಕೇಟ್ ನಿತಿನ್ ರಾಯ್ಕರ್ ಹಾಗೂ ಕುಮಟಾ ದಲ್ಲಿ ವಿಶ್ವ ಹಿಂದೂ ಪರಿಷತ್ ನ ಶ್ರೀ ಮಹಾಬಲೇಶ್ವರ ಶೇಟ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಸತೀಶ್ ಶೇಟ್ ಮತ್ತು ಶ್ರೀ ಸಂದೀಪ ಭಂಡಾರಿ ಉಪಸ್ಥಿತರಿದ್ದರು.

Back to top button