ಪ್ರಸಿದ್ಧ ಶ್ರೀ ಧಾರಾನಾಥ ದೇವಸ್ಥಾನದಲ್ಲಿ ಶ್ರಾವಣದಲ್ಲಿ ಭಕ್ತಾದಿಗಳಿಗೆ ದರ್ಶನಕ್ಕ ಮಾತ್ತ ಅವಕಾಶ: ಭಕ್ತಾದಿಗಳು ಸಹಕರಿಸುವಂತೆ ಆಡಳಿತ ಮಂಡಳಿ ಪ್ರಕಟಣೆ

ಧಾರೇಶ್ವರ: ಕೋವಿಡ್ 19 ರ 4ನೇ ಅಲೆಯನ್ನು ತಡೆಯುವ ಮುಂಜಾಗ್ರತಾ ಕ್ರಮವಾಗಿ ಸರಕಾರದ ಆದೇಶದಂತೆ ಪ್ರಸಿದ್ಧ ಧಾರೇಶ್ವರದ ಧಾರಾನಾಥ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ.

ಶ್ರೀ ದೇವರಲ್ಲಿ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಉಳಿದ ಸೇವೆಗೆ ಅವಕಾಶವಿರುವುದಿಲ್ಲ. ಪ್ರತಿವರ್ಷ ಶ್ರಾವಣದಲ್ಲಿ ಭಕ್ತಾದಿಗಳಿಗೆ ಸ್ವತಃ ಗರ್ಭಗುಡಿಗೆ ತೆರಳಿ ದೇವರಲ್ಲಿ ಅಭಿಷೇಕ ಪೂಜಾದಿಗಳನ್ನು ನಡೆಸಲು ಅವಕಾಶವಿರುತ್ತಿತ್ತು.

ಆದರೆ ಸರ್ಕಾರದ ಮುಂದಿನ ಆದೇಶದ ವರೆಗೂ ದರ್ಶನದ ಹೊರತಾಗಿ ಉಳಿದೆಲ್ಲ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಈ ಸಂಭಂಧ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದು, ಭಕ್ತಾದಿಗಳು ಸಹಕರಿಸುವಂತೆ ಕೋರಿದೆ.

ವಿಸ್ಮಯ ನ್ಯೂಸ್ ,‌ಕುಮಟಾ

Exit mobile version