Follow Us On

WhatsApp Group
Important
Trending

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೆಲ ಅಧಿಕಾರಿಗಳಿಗೆ ಕಾಡುತ್ತಿದೆಯೇ ವಾಹನ ದೋಷ ? ದಾರಿ ಮಧ್ಯೆ ಕೈ-ಕೊಡುತ್ತಿರುವ ವಾಹನ: ಏನಂದುಕೊಳ್ಳುತ್ತಿದ್ದಾರೆ ಜನ ನೋಡಿ?

ಅಂಕೋಲಾ ಅ 8: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್,ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಈ ನಡುವೆ ನಾನಾ ಕಾರಣಗಳಿಂದ ಜಿಲ್ಲೆಯ ಹಲವೆಡೆ ಸ್ಥಳ ಪರಿಶೀಲನೆ, ಸಭೆ ನಡೆಸಲು ಅಧಿಕಾರಿ ತಂಡದೊಂದಿಗೆ ತೆರಳುತ್ತಿರುತ್ತಾರೆ. ಆದರೆ ಇವರು ತೆರಳುತ್ತಿರುವ ವೇಳೆ ಇತ್ತೀಚಿನ ಕೆಲ ದಿನಗಳಲ್ಲಿಯೇ ದಾರಿಮಧ್ಯೆಯೇ ಕೆಟ್ಟು ನಿಲ್ಲುವ ವಾಹನಗಳು,ಚಿಕ್ಕಪುಟ್ಟ ಅಪಘಾತಗಳು ಸಂಭವಿಸುತ್ತಿದ್ದು, ಸಚಿವರು ಮತ್ತು ಕೆಲ ಅಧಿಕಾರಿಗಳಿಗೆ ವಾಹನ ದೋಷ ಬೆನ್ನು ಹತ್ತಿದೆಯೇ ಎಂದು ಅಲ್ಲಲ್ಲಿ ಕೆಲವರು ಮಾತಾಡಿಕೊಳ್ಳುವಂತಾಗಿದೆ.

ಇತ್ತೀಚೆಗೆ ಸಚಿವ ಹೆಬ್ಬಾರ್ ಅಂಕೋಲಾ ತಾಲೂಕಿನ ಹಾರವಾಡ ಕಡಲ್ಕೊರೆತ ಪ್ರದೇಶ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಸಚಿವರ ಜೊತೆ ಅಧಿಕಾರಿಗಳ ದಂಡೇ ತೆರಳಿತ್ತು. ಸಚಿವರು ತರಂಗಮೇಟ ವೀಕ್ಷಣೆ ಮುಗಿಸಿ ಗಾಬಿತವಾಡ ಪ್ರದೇಶಕ್ಕೆ ಭೇಟಿ ಕೊಟ್ಟು ವಾಪಸ್ ಆಗಬೇಕೆನ್ನುವಷ್ಟರಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಅಂಕೋಲಾ ತಹಶೀಲ್ದಾರರವರ ಜೀಪಿನ ಚಕ್ರಗಳು ರಸ್ತೆಯಂಚಿಗೆ ಹೊರಳಿ, ಸಡಿಲ ಮಣ್ಣಿನಲ್ಲಿ ಸಿಲುಕುವಂತಾಗಿತ್ತು.

ಅದೇ ಸಮಯದಲ್ಲಿ ಅಂಕೋಲಾ ಸಿಪಿಐ ಜೀಪ್ ಸಹ ಚಾಲನೆಗೊಳ್ಳದಿರುವುದನ್ನು ಗಮನಿಸಿದ ಸಚಿವರೇ, ವಾಹನ ಕೆಟ್ಟರೆ ನೀವು ಏನು ಮಾಡುವುದು ಎಂದು ಹೇಳಿ,ಪೊಲೀಸ್ ವಾಹನವನ್ನು ಮುಂದೆ ತಳ್ಳುವಂತೆ ಸೂಚಿಸಿದ್ದರು.

ಇತ್ತೀಚಿಗೆ ಸಚಿವರು ನೆರೆ ಪೀಡಿತ ಪ್ರದೇಶವಾದ ಬೆಳೆಸೆ ಚಂದು ಮಠ ಕಾಳಜಿ ಕೇಂದ್ರಕ್ಕೆ ಆಗಮಿಸಿದ್ದ ವೇಳೆ,ಸ್ವತ: ಅವರ ವಾಹನವೇ ( ಈ ಮೊದಲಿನ ಸ್ಕಾರ್ಪಿಯೋ ) ಯಾಂತ್ರಿಕ ದೋಷದಿಂದ ಚಾಲನೆಗೊಳ್ಳದಂತಾಗಿ, ಕೆಟ್ಟ ಆ ವಾಹನವನ್ನು ಅಲ್ಲೇ ಬಿಟ್ಟು ಸಚಿವರು ಮುಂದಿನ ಕಾರ್ಯಕ್ರಮಕ್ಕೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಾಹನದಲ್ಲಿ ತೆರಳುವಂತಾಗಿತ್ತು.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ವೇಳೆ ಶಾಸಕ ಹೆಬ್ಬಾರ ಅವರ ಕಾರು,ಮುಖ್ಯಮಂತ್ರಿಗಳ ಬೆಂಗಾವಲು ವಾಹನದ ಹಿಂಬಂದಿಗೆ ಡಿಕ್ಕಿ ಹೊಡೆದ ಪರಿಣಾಮ, ಹೆಬ್ಬಾರ ಕಾರಿನ ಮುಂಭಾಗ ಸ್ವಲ್ಪ ಜಖಂ ಗೊಂಡಿತ್ತು.

ಮಂತ್ರಿಮಂಡಲ ಪುನರಚನೆ ಬಳಿಕ ಮತ್ತೆ ಸಚಿವರಾದ ಹೆಬ್ಬಾರ್ ಮೊದಲಿನ ಉತ್ತಾಹದಲ್ಲಿಯೇ ಜಿಲ್ಲೆಯ ಜನತೆಯ ಕಷ್ಟಗಳಿಗೆ ಸ್ಪಂದಿಸಲು ಕಾರ್ಯೋನ್ಮುಖರಾಗಿ, ನೆರೆ ಪರಿಹಾರ ಮತ್ತಿತರ ಪ್ರಗತಿ ಪರಿಶೀಲನೆಗೆ ಕಾರವಾರದಲ್ಲಿ ಜಿಲ್ಲಾಮಟ್ಟದ ಸಭೆ ಕರೆದಿದ್ದರು.

ಅದೇ ಸಭೆಗೆ ಆಗಮಿಸುತ್ತಿದ್ದ, ಸಿದ್ದಾಪುರ ಶಿರಸಿ ಮುಂಗೋಡ ಭಾಗಗಳ ಅಧಿಕಾರಿಗಳಿದ್ದ ಲೋಕೋಪಯೋಗಿ ಇಲಾಖೆಯ ಇನೋವಾ ಕಾರ ಅಂಕೋಲಾ ಬಾಳೇಗುಳಿಯ ಗೌರಿಕೆರೆ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನ ತಗ್ಗಿನ ಪ್ರದೇಶದಲ್ಲಿ ಪಲ್ಟಿಯಾಗಿ,ಓರ್ವ ಅಧಿಕಾರಿ ಸಾವನ್ನಪ್ಪಿ,ಮೂವರು ಗಂಭೀರ ಗಾಯಗೊಂಡು ಮಣಿಪಾಲ್ ಆಸ್ಪತ್ರೆ ಸೇರುವಂತಾಗಿತ್ತು .

ಈ ಎಲ್ಲಾ ಘಟನಾವಳಿಗಳ ಹಿಂದೆ ಜೋರಾದ ಮಳೆ,ವಾಹನದ ಯಾಂತ್ರಿಕ ದೋಷ ಮತ್ತಿತರ ಪೂರಕ ಕಾರಣಗಳಿರಬಹುದಾದರೂ, ಕೆಲವೇ ತಿಂಗಳಲ್ಲಿ 3-4 ಬಾರಿ ಸಂಭವಿಸಿದ ಈ ಘಟನೆಗಳೆಲ್ಲ ಕಾಕತಾಳಿಯ ಎನಿಸಿದರೂ, ದಾರಿ ಮಧ್ಯೆ ಆಗಾಗ ಕೈ ಕೊಡುತ್ತಿರುವ ವಾಹನಗಳಿಂದ ಸಚಿವರು ಮತ್ತು ಅಧಿಕಾರಿಗಳಿಗೆ ಮುಜುಗರ ಮೂಡಿಸುತ್ತಿರುವಂತಿದೆ.

ಒಟ್ಟಿನಲ್ಲಿ ಈ ಎಲ್ಲಾ ಘಟನಾವಳಿಗಳನ್ನು ಅವಲೋಕಿಸುವ ಕೆಲವರು,ಸಚಿವರು ಮತ್ತು ಅಧಿಕಾರಿಗಳು ಯಾವುದೋ ಕಾರಣಗಳಿಂದ ವಾಹನ ದೋಷಕ್ಕೆ ಒಳಗಾಗುತ್ತಿದ್ದಾರೆಯೇ ಎಂದು ಮಾತನಾಡಿಕೊಳ್ಳುತ್ತಿರುವಂತೆ ಕೇಳಿಬಂದಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.


ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button