Follow Us On

WhatsApp Group
Info
Trending

ಸಾಮಾಜಿಕ ಪರಿಶೋಧನೆಯಲ್ಲಿಯೂ ಮಹಿಳೆಯರು ಹೆಚ್ಚು ಹೆಚ್ವು ತೊಡಗಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ: ಸಾಮಾಜಿಕ ಪರಿಶೋಧನೆ ತರಬೇತಿ

ಭಟ್ಕಳ- ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಹೆಚ್ಚು ಹೆಚ್ಚು ತೊಡಗಿಸಿ ಕೊಳ್ಳುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಅಂತೆಯೇ ಇಂದು ಸಾಮಾಜಿಕ ಪರಿಶೋಧನೆಯಲ್ಲಿಯೂ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳೆಯರಿಗೆ ಹೆಚ್ಚಿನ ಅವಕಾಶವನ್ನು ಸರ್ಕಾರ ನೀಡುತ್ತಿರುವುದು ಕೂಡ ಈ ದಿಶೆಯಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ್ ಚಿಕ್ಕಮನೆಯವರು ನುಡಿದರು.

ಅವರು ಇಂದು ಗ್ರಾಮೀಣ ಅಭಿವೃದ್ಧಿ ಇಲಾಖೆ, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ ಸಹಯೋಗದಲ್ಲಿ ಭಟ್ಕಳ ತಾಲೂಕು ಪಂಚಾಯತ್ ಸಭಾಭವನದಲ್ಲಿ ಮಹಿಳಾ ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಆಯೋಜಿಸಲಾದ ಎರಡು ದಿನಗಳ ಸಾಮಾಜಿಕ ಪರಿಶೋಧನೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಇಂತ ತರಬೇತಿ ಕಾರ್ಯಕ್ರಮ ದಲ್ಲಿ ಭಾಗಹಿಸುವಂತ ಮಹಿಳೆಯರು ಪಂಚೆಂದ್ರಿಯಗಳನ್ನು ಜಾಗೃತಗೊಳಿಸುಕೊಂಡು ವಿಷಯ ಮನನ ಮಾಡಿಕೊಂಡಾಗ ಮಾತ್ರ ತರಬೇತಿ ಅತ್ಯಂತ ಯಶಸ್ಸು ಕಾಣಲು ಸಾಧ್ಯ ಎಂದರು.

ತಾಲೂಕು ಸಾಮಾಜಿಕ ಪರಿಶೋಧನಾ ಸಮನ್ವಯಾಧಿಕಾರಿ ಉಮೇಶ ಮುಂಡಳ್ಳಿ ಇವರು ಮಾತನಾಡಿ ಮಹಿಳೆಯರು ಜಾಗೃತಗೊಂಡಲ್ಲಿ ಪೂರ್ಣ ಸಮಾಜವೇ ಜಾಗೃತಿಗೊಂಡತೆ, ಅಂತೆಯೇ ಈ ತರಬೇತಿ ಯಿಂದ ಸಾಮಾಜಿಕ ಪರಿಶೋಧನೆ ಬಗ್ಗೆ ಇವರು ತಿಳಿದುಕೊಳ್ಳುವುದರ ಜೊತೆಜೊತೆಗೆ ಗ್ರಾಮ ಮಟ್ಟದಲ್ಲಿ ಸರಕಾರದ ಹಲವು ಯೋಜನೆಗಳ ಬಗ್ಗೆ ಗ್ರಾಮೀಣ ಜನರಲ್ಲಿ ತಿಳಿವಳಿಕೆ ಮೂಡಿಸುವಲ್ಲಿಯೂ ಸಹಕಾರಿಯಾಗಬಲ್ಲರು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ವಸತಿ ಯೋಜನೆಯ ನೊಡಲ್ ಅಧಿಕಾರಿ ದಿಗಂಬರ ಭಂಡಾರಿ ಅವರು ವಸತಿ ಯೋಜನೆಯ ಮಹತ್ವ,ಉದ್ದೇಶ ,ಫಲನಾಭವಿಗಳ ಅರ್ಹತೆ ಮಾನದಡ್ಡಗಳ ಬಗ್ಗೆ ಸವಿಸ್ತಾರ ಮಾಹಿತಿ ಶಿಭಿರಾರ್ಥಿಗಳಿಗೆ ತಿಳಿಸಿದರು. ಸಂಜೀವಿನಿ ಯೋಜನೆಯ ತಾಲೂಕು ಸಂಯೋಜಕರಾದ ಗೋಪಾಲ ನಾಯ್ಕ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಇಡಿ ದಿನ ನರೇಗಾ,೧೫ನೇ ಹಣಕಾಸು ಯೋಜನೆ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ ಬಗ್ಗೆ ಸಂಪೂರ್ಣ ತರಬೇತಿ ಶಿಬಿರಾರ್ಥಿಗಳಿಗೆ ನೀಡಲಾಯಿತು.

ಭಟ್ಕಳ ತಾಲೂಕಿನ ಹದಿನಾರು ಗ್ರಾಮಪಂಚಾಯತಿ ಯಿಂದ ಆಯ್ಕೆಗೊಂಡ ಎಲ್ಲಾ ಗ್ರಾಮಸಂಪನ್ಮೂಲಗಳು ಹಾಜರಿದ್ದರು. ಪ್ರಾರಂಭದಲ್ಲಿ ಗ್ರಾಮ ಸಂಪನ್ಮೂಲ ವ್ಯಕ್ತಿ ಸ್ವಾತಿ ನಾಯ್ಕ ಪ್ರಾರ್ಥಸಿದರು.ಆಶಾ ನಾಯ್ಕ ಸ್ವಾಗತಿಸಿ,ಪ್ರಿಯಾಂಕ ನಾಯ್ಕ ವಂದಿಸಿದರು.

Back to top button