ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಲಭ್ಯವಿರುವ ಲಸಿಕೆಯ ವಿವರ: ಎಲ್ಲೆಲ್ಲಿ‌ಎಷ್ಟು ಲಸಿಕೆ‌ ಲಭ್ಯವಿದೆ ನೋಡಿ?

ಕಾರವಾರ: ದಾಂಡೇಲಿಯಲ್ಲಿ 370 ಕೋವಾಕ್ಸಿನ್, ಶಿರಸಿಯಲ್ಲಿ 650 ಇದರಲ್ಲಿ 60 ಕೋವಿಶೀಲ್ಡ್ , 590 ಕೋವಾಕ್ಸಿನ್ ಲಭ್ಯವಿದೆ. ಹಳಿಯಾಳ 30 ಕೋವಿಶೀಲ್ಡ್, ಶಿರಸಿಯಲ್ಲಿ 220 ಕೋವಿಶೀಲ್ಡ್, ಜೋಯ್ಡಾ 180 ಕೋವಿಶೀಲ್ಡ್ ಲಭ್ಯವಿದೆ. ಸಾರ್ವಜನಿಕರು ತಮ್ಮ ತಮ್ಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ, ಲಸಿಕೆ ಲಭ್ಯತೆಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
copyright reserved by ವಿಸ್ಮಯ ಟಿ.ವಿ

ಕುಮಟಾ ತಾಲೂಕಿನಲ್ಲಿ ಎಲ್ಲೆಲ್ಲಿ?

ಕುಮಟಾ ತಾಲೂಕಿನಲ್ಲಿ ನಾಳೆ ಒಟ್ಟು 500 ಕೋವಾಕ್ಸಿನ್ ಲಸಿಕೆ ಲಭ್ಯವಿದೆ. ಪುರಸಭವನದ ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಹತ್ತಿರ 500 ಡೋಸ್ ನೀಡಲಾಗುವುದು. ಬೆಳಿಗ್ಗೆ 9.15 ರಿಂದ ಟೋಕನ್ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಲಸಿಕೆ ಪಡೆಯುವವರು ಸರತಿ ಸಾಲಿನಲ್ಲಿ ನಿಂತು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಲ್ಲಾಪುರದಲ್ಲಿ ಎಲ್ಲೆಲ್ಲಿ?

ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ 80 ಡೋಸ್ ವ್ಯಾಕ್ಸಿನ್ ಲಭ್ಯವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಹೊನ್ನಾವರ ಮತ್ತು ಅಂಕೋಲಾದಲ್ಲಿ ನಾಳೆ ವಾಕ್ಸಿನ್ ಇಲ್ಲ

ನಾಳೆ (ದಿ 12 ಗುರುವಾರ) ಅಂಕೋಲಾ ತಾಲೂಕಿನ ಯಾವುದೇ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಇರುವುದಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Exit mobile version