ಅಂಕೋಲಾ : ಕೋವಿಡ್-19 ವಿರುದ್ಧ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆ ಯಂತೆ ಕೊರೊನಾ ತಡೆಗಟ್ಟಲು ವಿವಿಧ ರಾಜ್ಯದ ನಾನಾ ಇಲಾಖೆಗಳು ಶ್ರಮಿಸಿದ್ದು, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ವತಿಯಿಂದ ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಲ್ಹಾದ ಅವರಿಗೆ ವಿಶೇಷ ಪ್ರಶಂಸನಾ ಪತ್ರವನ್ನು ನೀಡಲಾಗಿದ್ದು, ಅವರನ್ನು ವಕೀಲರಾದ ಉಮೇಶ ನಾಯ್ಕ, ವಿನೋದ ಶ್ಯಾನಭಾಗ, ನಾಗಾನಂದ ಐ. ಬಂಟ್, ಲಕ್ಷ್ಮೀದಾಸ ನಾಯ್ಕ ಮತ್ತಿತರು ಸನ್ಮಾನಿಸಿ ಗೌರವಿಸಿದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗಧೀಶ ಹಿರೇಮನಿಯವರು ಪ್ರಲ್ಹಾದ ಅವರಿಗೆ ನೀಡಿದ ಪ್ರಶಂಸನಾ ಪತ್ರದಲ್ಲಿ, ಬಿಡುವಿಲ್ಲದೇ ಹಗಲು ರಾತ್ರಿ ಕೊರೊನಾ ಪೀಡೆಯನ್ನು ಸೋಲಿಸಬೇಕೆಂದು ಪಣತೊಟ್ಟು ನಿಂತ ತಾವು ತಮ್ಮ ಸಿಬ್ಬಂದಿ ವರ್ಗ ಮತ್ತು ಪೌರಕಾರ್ಮಿಕರು ಸೇರಿದಂತೆ ಎಲ್ಲರೂ ಜನ ಸಾಮಾನ್ಯರ ಸುರಕ್ಷತೆ ಮತ್ತು ನೆಮ್ಮದಿಗೆ ಕಾರಣರಾಗಿದ್ದೀರಿ ಎಂದು ಉಲ್ಲೇಖಿಸಿದ್ದಾರೆ.
ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ ಅವರು ತಮ್ಮ ಇಲಾಖೆಯ ಜೊತೆ ಜೊತೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಸಹಕರದಲ್ಲಿ ಜಿಲ್ಲಾಡಳಿತದ ನಿರ್ದೇಶನವನ್ನು ಅಚ್ಚುಕಟ್ಟಾಗಿ ಪಾಲಿಸು ತ್ತಿದ್ದು, ಚುನಾಯಿತ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಲವು ಮುಂಜಾಗೃತೆ ತೆಗೆದು ಕೊಳ್ಳುತ್ತಿದ್ದಾರೆ. ಪಟ್ಟಣದ ಸ್ವಚ್ಛತೆಗೂ ವಿಶೇಷ ಒತ್ತು ನೀಡಿ ಕೊರೊನಾ ತೊಲಗಿಸಲು ಪ್ರತಿಯೊಬ್ಬರ ಸಹ ಕಾರ ಬಯಸುತ್ತಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ