ಕಾರವಾರ: ಉತ್ತರಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ನಾಳೆ ಕೋವಿಶೀಲ್ಡ್ ಮಾತ್ರ ಲಭ್ಯವಿದ್ದು, ಕೋವ್ಯಾಕ್ಸಿನ್ ಸಂಗ್ರಹವಿಲ್ಲ.
ಹೊನ್ನಾವರ ತಾಲೂಕಿನಲ್ಲಿ ಎಲ್ಲೆಲ್ಲಿ ವಾಕ್ಸಿನೇಷನ್ ?
ಹೊನ್ನಾವರ: ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವದೆ. ಹೊನ್ನಾವರ ತಾಲೂಕಾ ಆಸ್ಪತ್ರೆ, ಕರ್ಕಿ ಪಂಚಾಯತ್ ನಲ್ಲಿ ಲಸಿಕೆ ಇದೆ. ಹಳದೀಪುರ ಮತ್ತು ಸಾಲ್ಕೋಡ, ಕಡತೋಕ ( ಚಂದಾವರ, ಹೊದಕೆ ಶೀರೂರು) ಹೊಸಾಡ (ಜಲವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ) ಖರ್ವಾದ 4 ಉಪಕೇಂದ್ರಗಳು, , ಸಂಶಿ, ಬಳಕೂರು, ಗೇರುಸೊಪ್ಪಾ, ಮಂಕಿ ಪ್ರದೇಶಗಳಲ್ಲಿ ವ್ಯಾಕ್ಸಿನ್ ಲಭ್ಯವಿದೆ.
ಭಟ್ಕಳದಲ್ಲಿ ತಾಲೂಕಿನಲ್ಲಿ ಎಲ್ಲೆಲ್ಲಿ?
ಭಟ್ಕಳ: ನಾಳೆ ಭಟ್ಕಳ ತಾಲೂಕಿನ 3 ಕಡೆಗಳಲ್ಲಿ 1900 ಕೋವಿಡ್ ಲಸಿಕೆಗಳು ಲಭ್ಯವಿದೆ. ಕಾಪಿರೈಟ್ ವಿಸ್ಮಯ ಟಿ.ವಿ ತಾಲೂಕಿನ ನಿಶ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ಆಸರಕೇರಿ ಸಭಾಭವನದಲ್ಲಿ 900 ಮತ್ತು ಚೌಥನಿಯ ಕುದರೆ ಬೀರಪ್ಪ ದೇವಸ್ಥಾನದಲ್ಲಿ 500 ಹಾಗೂ ಹನುಮಾನ ನಗರದ ಗಣೇಶ ಸಭಾಭವನದಲ್ಲಿ 500 ಕೋವಿಡ್ ಲಸಿಕೆಗಳು ಲಭ್ಯವಿದ್ದು, ಭಟ್ಕಳದ ಜನತೆ ಇದರ ಸದುಪಯೋಗ ಪಡೆದುಕೊಳ್ಳ ಬಹುದಾಗಿದೆ.
ಶಿರಸಿ ತಾಲೂಕಿನಲ್ಲಿ ಎಲ್ಲೆಲ್ಲಿ?
ಶಿರಸಿ: ತಾಲೂಕಿನಲ್ಲಿ ಸೋಮವಾರದಂದು 3,250 ಡೋಸ್ ಕೋವೀಶೀಲ್ಡ್ ಲಸಿಕೆ ಲಭ್ಯವಿದೆ.ಸುಗಾವಿ 300 ಡೋಸ್, ಬನವಾಸಿ 300 ಡೋಸ್, ಹೆಗಡೆಕಟ್ಟಾ 300 ಡೋಸ್, ಸಾಲ್ಕಣಿ 300 ಡೋಸ್, ಹುಲೇಕಲ್ 300 ಡೋಸ್, ದಾಸನಕೊಪ್ಪದಲ್ಲಿ 300 ಡೋಸ್, ಬಿಸ್ಲಕೊಪ್ಪ 300 ಡೋಸ್, ರೇವಣ ಕಟ್ಟಾ 150 ಡೋಸ್ ಇದೆ.
ಅಲ್ಲದೆ, ಮೆಣಸಿ 150 ಡೋಸ್, ಕಕ್ಕಳ್ಳಿ 100 ಡೋಸ್, ಪತ್ರಿಕಾ ಭವನದಲ್ಲಿ 50 ಡೋಸ್, ಜೆ ಎಂ ಎಫ್ ಸಿ ಯಲ್ಲಿ 200 ಡೋಸ್, ಗಣೇಶನಗರದಲ್ಲಿ 250 ಡೋಸ್, ವಿವೇಕಾನಂದ ನಗರ ಹಾಗೂ ಕೆ ಎಚ್ ಬಿ ಕಾಲನಿಯಲ್ಲಿ 250 ಡೋಸ್ ಇದ್ದು, ಮೊದಲ ಹಾಗೂ ಎರಡನೇ ಡೋಸ್ ಆದ್ಯತೆ ಮೇರೆಗೆ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಯನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು. ಸಾರ್ವಜನಿಕರು ಗೊಂದಲ ಮಾಡಿಕೊಳ್ಳದೆ, ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳುವಂತೆ ಕೋರಲಾಗಿದೆ.
ಇಂದಿನ ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ
- ಅಕ್ರಮವಾಗಿ ಯೂರಿಯಾ ಸಾಗಿಸುತ್ತಿದ್ದ ಲಾರಿ ವಶಕ್ಕೆ
- ಭೀಕರ ಅಪಘಾತ: ಮೂವರಿಗೆ ಗಂಭೀರ ಗಾಯ
- ಪುರಾಣ ಪ್ರಸಿದ್ಧ ಕರಿಕಾನಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಸಂಭ್ರಮ : ದೇವಸ್ಥಾನಕ್ಕೆ ಹರಿದುಬಂದ ಭಕ್ತ ಸಾಗರ
- Arecanut Price: ಅಡಿಕೆ ಧಾರಣೆ : 07 ಅಕ್ಟೋಬರ್ 2024: ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಅಕ್ಟೋಬರ್ 10 ವರೆಗೆ ರಾಜ್ಯದ ಕರಾವಳಿ ಭಾಗದಲ್ಲಿ ಮಳೆ: ಹವಾಮಾನ ಇಲಾಖೆ
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್