20,800 ಲಸಿಕೆ ನಾಳೆ ಉತ್ತರಕನ್ನಡದಲ್ಲಿ ಲಭ್ಯ: ಎಲ್ಲೆಲ್ಲಿ ಎಷ್ಟು ವ್ಯಾಕ್ಸಿನ್ ಲಭ್ಯವಿದೆ ನೋಡಿ?

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ವೇಗಪಡೆದುಕೊಂಡಿದ್ದು, ನಾಳೆ ಒಟ್ಟು 20,800 ವ್ಯಾಕ್ಸಿನ್ ಲಭ್ಯವಿದೆ. ಇವುಗಳಲ್ಲಿ 18,100 ಕೋವಿಶೀಲ್ಡ್ ಮತ್ತು 2,700 ಕೋವ್ಯಾಕ್ಸಿನ್ ಎಂದು ತಿಳಿದುಬಂದಿದೆ.

ಅಂಕೋಲಾದಲ್ಲಿ 1,500 ಕೋವಿಶೀಲ್ಡ್, ಭಟ್ಕಳದಲ್ಲಿ 1,500 ಕೋವಿಶೀಲ್ಡ್, ಹಳಿಯಾಳದಲ್ಲಿ 1,200 ಕೋವಿಶೀಲ್ಡ್, ಹೊನ್ನಾವರದಲ್ಲಿ 2 ಸಾವಿರ ಕೋವಿಶೀಲ್ಡ್, ಜೋಯ್ಡಾ 800 ಕೋವಿಶೀಲ್ಡ್ ಲಭ್ಯವಿದೆ. ಅಲ್ಲದೆ, ಕಾರವಾರದಲ್ಲಿ 1,700 , ಮುಂಡಗೋಡಿನಲ್ಲಿ 1,200, ಕುಮಟಾ 2 ಸಾವಿರ, ಶಿರಸಿ 2,500, ಸಿದ್ದಾಪುರ 1,200, ಯಲ್ಲಾಪುರ 1,200 ದಾಂಡೇಲಿ 800, ಮತ್ತು ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ಲಭ್ಯವಿದೆ.©Copyright reserved by Vismaya tv

ಇದಲ್ಲದೆ, ಹೊನ್ನಾವರದಲ್ಲಿ 200, ಕಾರವಾರದಲ್ಲಿ 200, ಕುಮಟಾ 1 ಸಾವಿರ, ಸಿದ್ದಾಪುರ 1 ಸಾವಿರ, ದಾಂಡೇಲಿ 100, ಜಿಲ್ಲಾಸ್ಪತ್ರೆಯಲ್ಲಿ 200 ಕೋವ್ಯಾಕ್ಸಿನ್ ಲಭ್ಯವಿದೆ. ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ.

ಅಂಕೋಲಾದಲ್ಲಿ ಮತ್ತೆ 1500 ಡೋಸ್ ಲಸಿಕೆಗಳು ಲಭ್ಯ

ಅಂಕೋಲಾ ಅ 20: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಅಗಸ್ಟ್ 20 ರ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಕೊಡುಗೆ ಎಂಬಂತೆ ಒಟ್ಟೂ 2000 ಕೋವಿಡ್ ಲಸಿಕೆಗಳನ್ನು ನೀಡಿದ್ದ ಆರೋಗ್ಯ ಇಲಾಖೆ,ಆಗಸ್ಟ್ 21 ರ ಶನಿವಾರದ ವಿತರಣೆಗೆ ಸಂಬಂಧಿಸಿದಂತೆ ಮತ್ತೆ 1500 ಡೋಸ್ ಲಸಿಕೆ ವಿತರಣೆಗೆ ಕ್ರಮಕೈಗೊಂಡಿದೆ. ©Copyright reserved by Vismaya tv

ಲಕ್ಷೇಶ್ವರ, ಮೂಲೆಕೇಣಿ (ಕೇಣಿ), ಅಚವೆ ವ್ಯಾಪ್ತಿಯಲ್ಲಿ ತಲಾ 300ಡೋಸ್ ಲಸಿಕೆಗಳು ಲಭ್ಯವಿದ್ದು ಅವುಗಳಲ್ಲಿ ಪ್ರಥಮ ಡೋಸ್ (140),ದ್ವಿತೀಯ ಡೋಸ್ ( 140) ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ (20 ) ಡೋಸ್ ಕಾಯ್ದಿರಿಸಲಾಗಿದೆ. ‘ ಮಂದಿಗೆ, ಬಬ್ರುವಾಡಾ, ಕೊಡ್ಸಣಿ ವ್ಯಾಪ್ತಿಯಲ್ಲಿ ತಲಾ 200 ಡೋಸ ಲಸಿಕೆಗಳು ಲಭ್ಯವಿದ್ದು ಅವುಗಳಲ್ಲಿ 1ನೇ ಡೋಸ್ ಗೆ (90), ದ್ವಿತೀಯ ಡೋಸ್ ಗೆ (90) ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ( 20) ಡೋಸ್ ಲಸಿಕೆ ಕಾಯ್ದಿರಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Exit mobile version