ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆದವರಿಗೆ ಸರಿಯಾಗೇ ಬುದ್ದಿ ಕಲಿಸಿದ ಅಧಿಕಾರಿಗಳು: 25 ಸಾವಿರ ರೂಪಾಯಿ ದಂಡ

ಹೊನ್ನಾವರ: ಮಂಕಿ ಪಟ್ಟಣ ಪಂಚಾಯತಿ ಮತ್ತು ಹೊನ್ನಾವರ ತಾಲೂಕಿನ ವ್ಯಾಪ್ತಿಯಲ್ಲಿ ಹಲವಾರು ದಿನಗಳಿಂದ ಘನತ್ಯಾಜ್ಯ ವಸ್ತುಗಳನ್ನು ಎಲ್ಲಿಂದಲೋ ತಂದು ಸಾರ್ವಜನಿಕ ರಸ್ತೆ ಹಾಗೂ ಅರಣ್ಯ ಪ್ರದೇಶ, ರಾಷ್ಟ್ರೀಯ ಹೆದ್ದಾರಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಎಸೆಯಲಾಗುತ್ತಿತ್ತು. ಈ ಸಂಬoಧ ಪಟ್ಟಣ ಪಂಚಾಯತ ಮಂಕಿ ಕಛೇರಿ ಮತ್ತು ತಹಶೀಲ್ದಾರ ಕಛೇರಿಗೆ ಹಲವಾರು ದೂರುಗಳು ಬಂದಿದ್ದವು.

ಆಗಸ್ಟ್ 16ರಂದು ದೂರು ಆಧರಿಸಿ ಪಟ್ಟಣ ಪಂಚಾಯತ ಮಂಕಿ ಮುಖ್ಯಾಧಿಕಾರಿ ಆಜೇಯ್ ಭಂಡಾರಕರ್ ಸ್ಥಳ ಪರಿಶೀಲನೆ ನಡೆಸಿದ್ದು, ಘನ ತ್ಯಾಜ್ಯ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿ ಹರಡಿರುವುದು ಹಾಗೂ ಸಾರ್ವಜನಿಕವಾಗಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಎಸೆದಿರುವುದು ಕಂಡುಬoದಿತ್ತು. ಈ ಕುರಿತು ತ್ವರಿತ ಮಾಹಿತಿಯನ್ನು ಸ್ಥಳೀಯ ವಲಯ ಅರಣ್ಯಾಧಿಕಾರಿ ವರದರಂಗನಾಥ ಹಾಗೂ ಪೋಲಿಸ್ ಉಪನಿರೀಕ್ಷಕರಾದ ಅಶೋಕ ಮಾಳಭಗಿ ದೂರವಾಣಿ ಮುಖಾಂತರ ಸಂಪರ್ಕಿಸಿ ತೀವ್ರ ನಿಗಾ ಇಡುವಂತೆ ಕೋರಲಾಗಿತ್ತು,

ಅಕ್ಕಪಕ್ಕದ ಸಿಸಿಟಿವಿ ಕ್ಯಾಮರಾ ಸಹ ಪರಿಶೀಲಿಸಲಾಗುತ್ತಿತ್ತು. ಆರಣ್ಯ ಇಲಾಖೆ ಹಾಗೂ ಮಂಕಿ ಪಟ್ಟಣ ಪಂಚಾಯತ ಜಂಟಿ ಕಾರ್ಯಚರಣೆ ನಡೆಸಿ ಕಸ ಎಸೆಯುತ್ತಿದ್ದ ವ್ಯಕ್ತಿಯನ್ನು ಕಂಡುಹಿಡಿಯಲಾಗಿದೆ. ಈ ಸಂಬoಧ ಆಬುಬಖರ್ ಅಬ್ಬಾಸ್ ರವರ ವಾಹನ ವಶಕ್ಕೆ ಪಡೆದು, 25 ಸಾವಿರ ದಂಡ ವಿಧಿಸಿ, ಮುಂದಿನ ದಿನಗಳಲ್ಲಿ ಇದೇ ಪ್ರಕರಣ ಮರುಕಳಿಸಿದ್ದಲ್ಲಿ ಕಾನೂನು ರೀತಿಯಲ್ಲಿ ಕ್ರಮ ವಹಿಸುವಂತೆ ನಿರ್ಣಯಿಸಿ ಮಾಲಿಕರಿಂದ ಸೂಕ್ತ ಮುಚ್ಚಳಿಕೆ ಪತ್ರ ಪಡೆದು, ಎಲ್ಲಾ ಘನ ತ್ಯಾಜ್ಯಗಳನ್ನು ವ್ಯವಸ್ಥಿವಾಗಿ ವಿಲೇವಾರಿ ಗೊಳಿಸುವ ಷರತ್ತಿಗೊಳಪಟ್ಟು ವಾಹನವನ್ನು ದಂಡದೊoದಿಗೆ ಹಿಂದಿರುಗಿಸಲಾಗಿದೆ.

ಈ ಘನತ್ಯಾಜ್ಯ ವಸ್ತುಗಳು ನೆರೆಯ ಭಟ್ಕಳ ತಾಲೂಕಿನ ಹಬ್ಬಳೆ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಟ್ಟಿರುವುದೆಂದು ತನಿಖೆಯಲ್ಲಿ ತಿಳಿದುಬಂದಿದೆ. ರಸ್ತೆ ಪಕ್ಕ ತಾಜ್ಯ ಎಸೆಯುವವರ ಮೇಲೆ ಕ್ರಮ ಕೈಗೊಳ್ಳುವ ಮೂಲಕ ಈ ಕೃತ್ಯ ಎಸೆಗವುವರಿಗೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Exit mobile version