ಆಟೋ ರಿಕ್ಷಾ ಚಾಲಕ ಮಾಲಕ‌ ಸಂಘದಿಂದ ಲಸಿಕಾಕರಣದ ಆರೋಗ್ಯ ಸಿಬ್ಬಂದಿಗಳಿಗೆ ಅಭಿನಂದನೆ

ಭಟ್ಕಳ: ತಾಲ್ಲೂಕಿನ ಆಸರಕೇರಿ ಸಭಾಭವನದಲ್ಲಿ ಆಯೋಜಿಸಿದ್ದ ಕೋವಿಡ್ ಲಸಿಕಾಕರಣದಲ್ಲಿ 500 ಲಸಿಕೆಯನ್ನು ಆಟೋ ಚಾಲಕರಿಗೆ ಹಾಗೂ 500 ಲಸಿಕೆ ಸಾರ್ವಜನಿಕರಿಗೆ ನೀಡಿರುವುದಕ್ಕಾಗಿ ಆಟೋ ರಿಕ್ಷಾ ಚಾಲಕ‌ ಮಾಲಕ‌ ಸಂಘದಿಂದ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಲಾಯಿತು. 

ಅಭಿನಂದನೆ ಸಲ್ಲಿಸಿದ ಆಟೋ ರಿಕ್ಷಾ ಚಾಲಕ‌ ಮಾಲಕ‌ ಸಂಘದ ಜಿಲ್ಲಾಧ್ಯಕ್ಷ ಕ್ರಷ್ಣ ನಾಯ್ಕ ಆಸರಕೇರಿ ಮಾತನಾಡಿ’ ತಾಲೂಕಿನಲ್ಲಿ ಕೋವಿಡ್ ಲಸಿಕಾ ವಿತರಣೆಯಲ್ಲಿ ತಾಲೂಕಾ ಆರೋಗ್ಯ ಇಲಾಖೆ,ಅಧಿಕಾರಿಗಳು ಹಾಗು ಸಿಬ್ಬಂದಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿದ್ದು ಮೊದಲ ಹಾಗೂ ಎರಡನೇ ಲಸಿಕೆ ಜನರಿಗೆ ಸಮರ್ಪಕವಾಗಿ ಸಿಗುತ್ತಿರುವುದು ಸಂತಸದ ವಿಚಾರವಾಗಿದೆ.

ಕಳೆದ ಒಂದು ವಾರದಿಂದ ತಾಲೂಕಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಲಭಿಸುತ್ತಿರುವುದರಿಂದ ಜನರಿಗೆ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಆಟೋ ಚಾಲಕರಿಗೆ  ಮೊದಲ ಹಂತದಲ್ಲಿ ವಿಶೇಷ ಆದ್ಯತೆ ಮೇರೆಗೆ ಕಳೆದ 84 ದಿನದ ಹಿಂದೆ  500 ಮೊದಲ ಹಂತದ ಕೋವಿಡ್ ಲಸಿಕೆ ನೋಡಿದ್ದರು ಅವರಿಗಾಗಿ ಇಂದು 500 ಎರಡನೇ ಹಂತದ ಕೋವಿಡ್ ಲಸಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಮೂರ್ತಿರಾಜ ಭಟ್ ,ತಾಲೂಕಾಸ್ಪತ್ರೇಯ ಆಡಳಿತ ವೈದ್ಯಾಧಿಕಾರಿ  ಡಾ. ಸವಿತಾ ಕಾಮತ್,  ಸ್ಟಾಪ್ ನರ್ಸ್ ರೇಖಾ ಹಾಗೂ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಇದೆ ವೇಳೆ  ಇನ್ನುಳಿದ 500 ಕೋವಿಡ್ ಲಸಕೆಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು, ಪದಾಧಿಕಾರಿಗಳು, ವಿ.ಟಿ ರೋಡ್ ಘಟಕ ಸದಸ್ಯರು  ಸಾರ್ವಜನಿಕರು ಹಾಗೂ ಯುವಕರು ಸಹಕರಿಸಿದರು. 

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Exit mobile version