ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದ ಬೃಹತ್ ಹೆಬ್ಬಾವು!

ಕಾರವಾರ: ತಡರಾತ್ರಿ ಭಾರಿ ಗಾತ್ರದ ಹೆಬ್ಬಾವೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತ್ಯಕ್ಷವಾದ ಘಟನೆ ಕಾರವಾರ ಬೈತಖೋಲ್ ಬಳಿ ನಡೆದಿದೆ.
ಬೈತಖೋಲ್ ಬಳಿ ಕಾಡಿನಿಂದ ಬಂದ ಹೆಬ್ಬಾವು ನಿಧಾನವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಾಟಲು ಮುಂದಾಗಿದ್ದು ಈ ವೇಳೆ ಗಮನಿಸಿದ ವಾಹನ ಸವಾರರು ವಾಹನಗಳನ್ನು ನಿಲ್ಲಿಸಿದ್ದಾರೆ. ಕೊನೆಗೆ ಸ್ಥಳೀಯರೆಲ್ಲರೂ ವಿಷಯ ತಿಳಿದು ನೋಡಲು ಮುಗ್ಗಿಬಿದ್ದಿದ್ದರು.

ಇಷ್ಟಾದರೂ ಹೆಬ್ಬಾವು ಯಾರಿಗೂ ಹೆದರದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಧಾನವಾಗಿ ದಾಟಿದೆ. ಇನ್ನು ವಾಹನ ಚಾಲಕರು ಕೂಡ ಹೆಬ್ಬಾವು ದಾಟುವವರೆಗೂ ವಾಹನಗಳನ್ನು ನಿಲ್ಲಿಸಿ ದಾಟಲು ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನು ಕೆಲವರು ಈ ದೃಶ್ಯಗಳನ್ನು ಮೊಬೈಲ್ ಗಳಲ್ಲಿ ಸೆರೆಹಿಡಿಯುವಲ್ಲಿ ತಲ್ಲಿಣರಾಗಿದ್ದರು. ಬಳಿಕ ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version