Join Our

WhatsApp Group
Info
Trending

ಉಚಿತ ನೇತ್ರ ತಪಾಸಣಾ ಶಿಬಿರ: 15 ರೋಗಿಗಳಿಗೆ ಮೋತಿಬಿಂದು ಶಸ್ತ್ರಚಿಕಿತ್ಸೆ

ಕುಮಟಾ :ತಿಂಗಳಿನ ನಾಲ್ಕನೇಯ ಗುರುವಾರದಂದು ಹೊನ್ನಾವರ ಮತ್ತು ಭಟ್ಕಳ ತಾಲೂಕಾ ಸಾರ್ವಜನಿಕ ಸರಕಾರೀ ಆಸ್ಪತ್ರೆಯಲ್ಲಿ ಜರುಗಿದ “ಉಚಿತ ನೇತ್ರ ತಪಾಸಣಾ ಶಿಬಿರ”ದಲ್ಲಿನ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಂತೂ 15 ರೋಗಿಗಳಿಗೆ ಮರುದಿನ ಶುಕ್ರವಾರದಂದು ಕುಮಟಾದ ‘ಲಾಯನ್ಸ್ ರೇವಣಕರ ಚೆರಿಟೆಬಲ್ ಕಣ್ಣಿನ ಆಸ್ಪತ್ರೆ’ಯಲ್ಲಿ ವೈದ್ಯಾಧಿಕಾರಿ ನೇತ್ರತಜ್ಙ ಡಾ.ಮಲ್ಲಿಕಾರ್ಜುನ ರವರು ಯಶಸ್ವಿಯಾಗಿ “ಮೋತಿಬಿಂದು ಶಸ್ತ್ರಚಿಕಿತ್ಸೆ” ನಡೆಸಿದರು.

ಶನಿವಾರ ಬೆಳಿಗ್ಗೆ ಈ ಫಲಾನುಭವಿಗಳನ್ನು ಆಸ್ಪತ್ರೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ‘ಲಾಯನ್ಸ್ ಹ್ಯುಮನಿಟೇರಿಯನ್ ಸರ್ವೀಸ್ ಟ್ರಸ್ಟ್’ ನ ಹಿರಿಯ ಟ್ರಸ್ಟಿ ಡಾ.ಸಿ.ಎಸ್.ವೇರ್ಣೇಕರ,ರಘುನಾಥ ದಿವಾಕರ ಹಾಗೂ ಡಾ.ಮಲ್ಲಿಕಾರ್ಜುನ, ಆಡಳಿತಾಧಿಕಾರಿ ಜಯದೇವ ಬಳಗಂಡಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕುಮಟಾದಲ್ಲಿನ ಆಸ್ಪತ್ರೆಯಲ್ಲಿ ನಡೆದ ಈ ಶಸ್ತ್ರಚಿಕಿತ್ಸೆ,ಔಷಧೋಪಚಾರ, ಊಟ,ಉಪಹಾರ,ವಸತಿ,ಓಡಾಟ ವ್ಯವಸ್ಥೆಗಳು ಎಂದಿನಂತೆ ಸಂಪೂರ್ಣ ಉಚಿತವಾಗಿತ್ತು.

ವಿಸ್ಮಯ ನ್ಯೂಸ್, ಕುಮಟಾ

Check Also
Close
Back to top button