ಆಟವಾಡುವ ವೇಳೆ ಲುಡೊ ಕಾಯಿ ನುಂಗಿದ ಬಾಲಕ: ಶ್ವಾಸನಾಳ ಮೂಲಕ ಶ್ವಾಸಕೋಶದ ಒಳಗೆ ಸಿಲುಕಿ ಎದೆನೋವು

ಕುಮಟಾ: ಮಕ್ಕಳು ಆಟವಾಡುವ ವೇಳೆ ಕೆಲವೊಮ್ಮೆ ಅವಾಂತರಗಳು ಸೃಷ್ಟಿಯಾಗುತ್ತವೆ. ಹೌದು, ಲೂಡೋ ಗೇಮ್ ಆಡುವಾಗ ಬಾಯಿಯಲ್ಲಿ ಇಟ್ಟುಕೊಂಡಿದ್ದ ಲೂಡೋ ಕಾಯಿಯನ್ನು ಬಾಲಕ ನುಂಗಿದ ಘಟನೆ ತಾಲೂಕಿನಲ್ಲಿ ನಡೆದಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿತ್ತ. ಲೋಡೋ ಕಾಯಿ ನುಂಗಿದ ಪರಿಣಾಮ ಲುಡೋ ಕಾಯಿ, ಶ್ವಾಸನಾಳದ ಒಳಗೆ ಹೋಗಿದ್ದು, ಇದರಿಂದಾಗಿ ಎದೆ ನೋವಿನಿಂದ ಕಾಣಿಸಿಕೊಂಡಿತ್ತು.

ಈ ವೇಳೆ ಇಲ್ಲಿನ ಸ್ಥಳೀಯ ಆಸ್ಪತ್ರೆಗೆ ಕರೆತರಲಾಗಿದ್ದು, ಎಕ್ಸ್ರೇ, ಸಿಟಿ ಸ್ಕ್ಯಾನ್ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೊನೆಗೆ ವೈದ್ಯರು ಚಿಕಿತ್ಸೆ ನಡೆಸಿ, ಲುಡೋ ಕಾಯಿ ಹೊರ ತೆಗೆದು ಬಾಲಕನ ಜೀವ ಉಳಿಸಿದ್ದಾರೆ. ಇದೀಗ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಲಭಿಸಿದೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version