ಕಾರವಾರ: ಜನವಸತಿ ಪ್ರದೇಶವಿರುವ ರಸ್ತೆ ಪಕ್ಕದ ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ನಗರದ ಕೋಗಿಲಬನ ಗ್ರಾಮದಲ್ಲಿ ನಡೆದಿದೆ. ಬೆಳ್ಳಂಬೆಳಿಗ್ಗೆ ಗ್ರಾಮದ ಜನರು ಚರಂಡಿಯ ಮೂಲಕ ಬಂದ ಮೊಸಳೆಯನ್ನು ಕಂಡು ಆತಂಕಗೊoಡಿದ್ದರು. ತಕ್ಷಣ ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ಕೂಡ ನೀಡಿದ್ದಾರೆ.
ದಾಂಡೇಲಿಯ ಮೊಸಳೆ ಪಾರ್ಕ್ನಿಂದ ಅದು ಗ್ರಾಮಕ್ಕೆ ಬಂದಿದೆ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಕೂಡ ಇದೇ ರೀತಿ ಊರಿನ ರಸ್ತೆಯಲ್ಲಿ ರಾಜಾರೋಷವಾಗಿ ತಿರುಗಾಡಿ ಮೊಸಳೆಯೊಂದು ಆತಂಕ ಸೃಷ್ಟಿಸಿತ್ತು. ಇದೀಗ ಪದೇ ಪದೇ ಮೊಸಳೆ ಪಾರ್ಕ್ ಬಿಟ್ಟು ಗ್ರಾಮಕ್ಕೆ ನುಗ್ಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೆ, ಇದನ್ನು ನೋಡುವುದಕ್ಕಾಗಿ ಜನ ಮುಗ್ಗಿಬಿದ್ದಿದ್ದರು.
ವಿಸ್ಮಯ ನ್ಯೂಸ್, ಕಾರವಾರ