ಅಂಕೋಲಾ ಸೆ.10: ಗೌರಿ ಗಣೇಶನ ಹಬ್ಬದ ಸಂದರ್ಭದಲ್ಲಿ ಮತ್ತೆ ಕರಾಮತ್ತು ತೋರಲು ಮುಂದಾಗಿರುವ ವಂಚಕರು, ಸೈಬರ್ ತಂತ್ರಗಾರಿಕೆ ಮೂಲಕ ಕರಾಮತ್ತು ನಡೆಸುತ್ತಿದ್ದಂತಿದ್ದು, ವಂಚಕ ಜಾಲದ ವಿರುದ್ಧ ಸಾರ್ವಜನಿಕರು ಮತ್ತಷ್ಟು ಜಾಗರೂಕರಾಗಿರಲೇ ಬೇಕಿದೆ. ವಿವಿಧ ಬ್ಯಾಂಕುಗಳ ಕೆಲ ಗ್ರಾಹಕರುಗಳಿಗೆ ಕಳೆದ ಎರಡು – ಮೂರು ದಿನಗಳಿಂದ, ಅಧಿಕಾರಿಗಳ ಹೆಸರು ಹೇಳಿ ಅಪರಿಚಿತರು ಕರೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಅಂದರ ಹಿಂದಿರುವ ವಂಚಕರು, ಗ್ರಾಹಕರನ್ನು ಯಾಮಾರಿಸುವ ಪ್ರಯತ್ನ ನಡೆಯುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ.
ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಹಲವು ಗ್ರಾಹಕರ ಬ್ಯಾಂಕ್ ಖಾತೆಗಳಲ್ಲಿ ಹಣ ವಹಿವಾಟು ಹೆಚ್ಚಿರುತ್ತದೆ. ಇದನ್ನೇ ಬಂಡವಾಳವಾಗಿಸಿಕೊಳ್ಳಲು ಹೊರಟಿರುವ ವಂಚಕರು, ತಾವು ಕುಳಿತಲ್ಲಿಂದಲೇ ಗ್ರಾಹಕರ ಖಾತೆಯಲ್ಲಿರುವ ಹಣ ಲಪಟಾಯಿಸುವ ತಂತ್ರಗಾರಿಕೆ ರೂಪಿಸಿ, ಹಬ್ಬದ ಸಂದರ್ಭದಲ್ಲಿಯೇ ಗ್ರಾಹಕರ ಖಾತೆಗೆ ಕನ್ನ ಹಾಕಿ ಶಾಕ್ ನೀಡಲು ಹವಣಿಸುತ್ತಿರುವ ಕುರಿತು ಅಲ್ಲಲ್ಲಿ ಕೇಳಿ ಬರುತ್ತಿದೆ.ಮುಗ್ಧ ಗ್ರಾಹಕರಿಗೆ ಕರೆ ಮಾಡಿ,ಬ್ಯಾಂಕುಗಳ ಪ್ರಧಾನ ಕಛೇರಿಯಿಂದ ಕರೆ ಮಾಡುತ್ತಿದ್ದೇವೆ ಎಂದು ನಂಬಿಸಿ, ಗ್ರಾಹಕರ ಎ.ಟಿ.ಎಂ ಕಾರ್ಡ್ ಮತ್ತಿತರ ದಾಖಲಾತಿ ವಿಚಾರಣೆ ಹಾಗೂ ನವೀಕರಣದ ಹೆಸರಲ್ಲಿ ಮೋಸದ ಬಲೆಗೆ ಕೆಡಹುವ ಹತ್ತಾರು ರೀತಿಯ ಪ್ರಯತ್ನಗಳನ್ನು ಈ ಹಿಂದಿನಿಂದಲೂ ನಡೆಸುತ್ತಿರುವುದು ದೇಶದಾದ್ಯಂತ ಹಲವೆಡೆ ಕೇಳಿ ಬರುತ್ತಿದೆ.
ವಂಚಕರು ಗ್ರಾಹಕರ ಜೊತೆ ಫೋನ್ ಸಂಭಾಷಣೆ ನಡೆಸುತ್ತಲೇ, ಗ್ರಾಹಕರ ನಿಗದಿತ ಮೊಬೈಲ್ ಗೆ ಬಂದಿರುವ ಓ.ಟಿ.ಪಿ ಮಾಹಿತಿ ಪಡೆದು ಕೊಳ್ಳಲು ಹೊಂಚು ಹಾಕುತ್ತಾರೆ. ಒಂದೊಮ್ಮೆ ಗ್ರಾಹಕ ಕರೆ ಮಾಡಿದವರ ಮಾತು ನಂಬಿ, ತನಗೆ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗೆ ತಾನು ಮಾಹಿತಿ ನೀಡುತ್ತಿದ್ದೇನೆ ಎಂದು ಓ.ಟಿ.ಪಿ ನೀಡಿದ್ದೇ ಆದರೆ ಆತನ ಖಾತೆಯಲ್ಲಿರುವ ಹಣ ಮಂಗಮಾಯ ಅಗುವುದರಲ್ಲಿ ಸಂಶಯವೇ ಇಲ್ಲ.
ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ಸೈಬರ್ ವಂಚನೆ ಜಾಲದ ವಿರುದ್ಧ ಜಾಗರೂಕತೆ ಮೂಡಿಸುತ್ತಿರುವ ಪೊಲೀಸ್ ಇಲಾಖೆ ಹಾಗೂ ಹಲವು ಬ್ಯಾಂಕುಗಳ ಮೂಲಕ ಸಾರ್ವಜನಿಕರಲ್ಲಿ ತಿಳುವಳಿಕೆ ಹೆಚ್ಚುತ್ತಿದೆ. ಗ್ರಾಹಕರ ಜಾಗರೂಕತರಾಗಿ ವಂಚಕರ ಬಲೆಗೆ ಬೀಳುವುದು ಕಡಿಮೆಯಾಗಿದ್ದರೂ ಕೆಲವು ಅಮಾಯಕರು ಮೋಸ ಹೋಗುತ್ತಲೇ ಇದ್ದಾರೆ.ಗೌರಿ ಹಬ್ಬದ ದಿನ ತಾಲೂಕಿನ ಕೆಲವರಿಗೆ ವಂಚಕರು ಕರೆ ಮಾಡಿ ಯಾಮಾರಿಸಲು ಪ್ರಯತ್ನ ಪಟ್ಟು ವಿಫಲರಾಗಿರುವುದಾಗಿ ತಿಳಿದು ಬಂದಿದೆ.
ಈ ಹಿಂದೆ ಹಿಂದಿ ಭಾಷೆ ಮಾತನಾಡುವವರ ಮೂಲಕ ಈ ರೀತಿಯ ಕರೆಗಳು ಬರುತ್ತಿದ್ದವಾದರೂ, ಇತ್ತೀಚೆಗೆ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಯಲ್ಲಿಯೇ ಕರೆ ಮಾಡುವ ವಂಚಕರು, ತಮ್ಮ ಮೇಲೆ ಅನುಮಾನ ಬಾರದಂತೆ ಟೋಪಿದಂಧೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು, ವಂಚಕರೇ ನಾನಾ ಭಾಷಾ ಪ್ರಾವೀಣ್ಯತೆ ಹೊಂದಿದ್ದಾರೆಯೇ ಅಥವಾ ವಂಚಕರ ಜಾಲದಲ್ಲಿ ಹಿಂದಿವಾಲಾಗಳ ಹೊರತಾಗಿ ಇತರೆ ಭಾಷಿಕರು, ಇತರೆ ರಾಜ್ಯದ ಜನತೆಯೂ ಕೈ ಜೋಡಿಸಲಾರಂಭಿಸಿದ್ದಾರೆಯೇ ಎನ್ನುವ ಸಂಶಯ ಕಾಡಲಾರಂಭಿಸಿದೆ. ?
ಇಂತಹ ಪ್ರಕರಣಗಳು ಸೈಬರ್ ಕ್ಟ್ರೆಂ ಅಡಿ ದಾಖಲಾಗಬೇಕೆಂದು , ಸಂಬಂಧಿಸಿದ ಸಿ ಇ ಎನ್ ಠಾಣೆ ಹೊರತಾಗಿ , ಇತರೆ ಠಾಣಾ ವ್ಯಾಪ್ತಿಯಲ್ಲಿ ಮೋಸ ಹೋದ ಗ್ರಾಹಕರಿಗೆ ಇಲಾಖೆ ವತಿಯಿಂದ ಸಿಗದ ಹೆಚ್ಚಿನ ಸ್ಪಂದನೆ, ಅದೇ ರೀತಿ ಮರ್ಯಾದೆ ಮತ್ತಿತರ ಕಾರಣಗಳಿಂದ ತಮಗೆ ಮೋಸವಾದರೂ, ಈ ಕುರಿತು ದೂರು ನೀಡಲು ಹಿಂಜರಿಯುವ ಸಾರ್ವಜನಿಕರ ನಿಲುವಿನಿಂದ ವಂಚಕರ ಅಡ್ಡ ಕಸುಬಿಗೆ ಲಂಗು – ಲಗಾಮು ಬೀಳುವುದು ಕಷ್ಠ ಎನ್ನುವಂತಾಗಿದೆ.
ಒಟ್ಟಿನಲ್ಲಿ ಸಾರ್ವಜನಿಕರೇ , ಸ್ವಯಂ ಪ್ರೇರಿತರಾಗಿ ಅಪರಿಚಿತರೊಂದಿಗೆ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದೇ ಸುರಕ್ಷತೆಗೆ ಒತ್ತು ನೀಡಬೇಕಿದೆ. ಒಂದೊಮ್ಮೆ ಏನಾದರೂ ಸಂಶಯವಿದ್ದಲ್ಲಿ ಫೋನ್ ಕರೆ ಅಥವಾ ಇತರೆ ರೀತಿಯ ವ್ಯವಹಾರಿಕ ಸಂಬಂಧ ಬೆಳೆಸದೇ, ತಾವೇ ಖುದ್ದು ಸಂಬಂ ಧಿಸಿದ ತಮ್ಮ ಬ್ಯಾಂಕ್ ಕಛೇರಿಗೆ ತೆರಳಿ, ಇಲ್ಲವೇ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡಿ ಜಾಗರೂಕ ನಡೆಯ ಮೂಲಕ ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581