ಹೊನ್ನಾವರ: ಚಿನ್ನ, ಬೆಳ್ಳಿಗಾಗಿ ಕನ್ನ ಹಾಕುವ ಸುದ್ದಿ ಇತ್ತಿಚೆಗೆ ಎಲ್ಲೆಡೆ ಕೇಳಿಬರುತ್ತಿದೆ. ಆದರೆ, ಇವರು ಮಾತ್ರ ತಮಗೆ ಸಿಕ್ಕಿರುವ ಒಂದು ಕೆ.ಜಿ ಬೆಳ್ಳಿ ಕಿರೀಟವನ್ನು ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಹೌದು, ರಸ್ತೆಯಲ್ಲಿ ಸಿಕ್ಕಿರುವ 1 ಕೆಜಿ.ಬೆಳ್ಳಿ ಕಿರೀಟವನ್ನು ಮಾಲೀಕರಿಗೆ ಒಪ್ಪಿಸಿ ಮಾನವಿಯತೆ ಮೆರೆದ ಲೋಕೇಶ್ ನಾಯ್ಕ.
ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ದಾಸ ಮಹಾಲೆಯವರು ಕಳೆದ 20 ವರ್ಷಗಳಿಂದ ತಮ್ಮ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಕಿರೀಟ ತೊಡಿಸಿ ಪುಜಿಸುತ್ತಾ ಬಂದಿದ್ದಾರೆ. ಬೆಳಗಿನ ಜಾವ ಗಣಪತಿ ಮೂರ್ತಿ ತರಲು ತೆರಳುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೆಳ್ಳಿ ಕಿರೀಟವನ್ನು ಕಳೆದುಕೊಂಡಿದ್ದರು.
ರಸ್ತೆಯಲ್ಲಿ ತೆರಳುತ್ತಿರುವ ವೇಳೆ, ಹುಡಗೋಡ ನಿವಾಸಿ ಲೋಕೇಶ ಗಣಪತಿ ನಾಯ್ಕ ಎನ್ನುವವರಿಗೆ ದಾರಿಯಲ್ಲಿ ಈ ಬೆಳ್ಳಿ ಕಿರೀಟ ಸಿಕ್ಕಿತ್ತು. ಅದನ್ನು ಇಂದು ಸಾರ್ವಜನಿಕವಾಗಿ ನಾಗರತ್ನ ಮತ್ತು ಲೋಕೇಶ ನಾಯ್ಕ ದಂಪತಿಗಳು ದಾಸ ಮಹಾಲೆಯರಿಗೆ ಒಪ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581