ಹೊನ್ನಾವರ, ಅಂಕೋಲಾದಲ್ಲಿ ಎಲ್ಲೆಲ್ಲಿ ಲಸಿಕೆ ಲಭ್ಯ? ಎಲ್ಲೆಲ್ಲಿ ವ್ಯಾಕ್ಸಿನೇಷನ್ ನಡೆಯಲಿದೆ ನೋಡಿ?

ಹೊನ್ನಾವರ ತಾಲೂಕಿನಲ್ಲಿ ನಾಳೆ 840 ಕೋವಿಡ್ ಡೋಸ್ ಲಭ್ಯವಿದೆ. ಕೋವಿಶೀಲ್ಡ್- 720, ಕೋವ್ಯಾಕ್ಸಿನ್-120 ಲಭ್ಯವಿದೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಚೇರಿಯ ಕಟ್ಟಡದಲ್ಲಿ ಹಾಗೂ ತಾಲ್ಲೂಕಿನ ಕಡತೋಕಾ, ಸಾಲಕೋಡ,‌ ಖರ್ವಾ, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಿಸಲಾಗುವುದು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂಕೋಲಾದಲ್ಲಿ ನಾಳೆ 490 ಡೋಸ್ ಲಸಿಕೆ ಲಭ್ಯ

ಅಂಕೋಲಾ ಸೆ 14: ತಾಲೂಕಿನಲ್ಲಿ ಮಂಗಳವಾರ 2 ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿದೆ. ಈ ಮೂಲಕ 17 ಸಕ್ರಿಯ ಪ್ರಕರಣಗಳಿವೆ. ಕ್ರಿಮ್ಸ್ ಕಾರವಾರದಲ್ಲಿ 2ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 15 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ.

ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3661 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ತಾಲೂಕಿನಲ್ಲಿ ಒಟ್ಟೂ 72 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ. ಹಿಪ್ರಾ ಶಾಲೆ ಬಡಗೇರಿ (200) , ಹಿಪ್ರಾ ಶಾಲೆ ಬೊಬ್ರವಾಡಾ (200), ತಾಲೂಕಾ ಆಸ್ಪತ್ರೆ (90) ಸೇರಿ ತಾಲೂಕಿನಲ್ಲಿ ಒಟ್ಟೂ 490 ಡೋಸ್ ಕೊವಿಡ್ ಲಸಿಕೆಗಳು ಸೆ.15ರ ಮಂಗಳವಾರ ಲಭ್ಯವಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ವಿಲಾಸ ನಾಯಕ ಅಂಕೋಲಾ

Exit mobile version