ಹಳಿಯಾಳ: ಕಾಲೇಜಿಗೆ ಹೋಗಿ ಟಿ.ಸಿ ತರುತ್ತೇನೆಂದು ತೆರಳಿದ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಕಾಲೇಜಿಗೆ ಹೋದವಳು ಇತ್ತ ಮನೆಗೆ ಬಾರದೆ, ಸಂಬoಧಿಕರ ಮನೆಗೆ ತೆರಳಿಲ್ಲ. ಹೀಗಾಗಿ ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾಲೂಕಿನ ಬೆಳವಟಗಿ ಗ್ರಾಮದ ವಿದ್ಯಾರ್ಥಿನಿ ಪ್ರಿಯಾಂಕ್ ಶಿವಾನಂದ ಭಡಂಗಿ(18) ನಾಪತ್ತೆಯಾಗಿರುವ ಯುವತಿಯಾಗಿದ್ದು, ಈಕೆ ಹಬ್ಬದ ಸಮಯದಂದು ತನ್ನ ಸ್ವಗ್ರಹದಿಂದ ಪಕ್ಕದ ಮುರ್ಕವಾಡ ಗ್ರಾಮದಲ್ಲಿರುವ ಕಾಲೇಜಿನಿಂದ ಟಿ.ಸಿ ತರುತ್ತೇನೆಂದು ತರಲಿದ್ದಾಳೆ. ಆದರೆ ಮರಳಿ ಬಂದಿಲ್ಲ.
ಕಾಣೆಯಾದ ಯುವತಿಯು 4 ಅಡಿ, 4 ಇಂಚು ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಕನ್ನಡ, ಮರಾಠಿ ಮಾತನಾಡುತ್ತಾಳೆ. ಈ ಯುವತಿಯ ಕುರಿತು ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581