ಅಂಕೋಲಾ ; ತಾಲೂಕಿನಲ್ಲಿ ಶನಿವಾರ 6 ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿದೆ.ಈ ಮೂಲಕ 26 ಸಕ್ರಿಯ ಪ್ರಕರಣಗಳಿವೆ. ಕ್ರಿಮ್ಸ್ ಕಾರವಾರದಲ್ಲಿ ಓರ್ವ ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 25 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3676 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ಒಟ್ಟೂ 72 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.
ಸೆ.17ರ ಶುಕ್ರವಾರ ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಹಲವು ವ್ಯಾಕ್ಸಿನ್ ಕೇಂದ್ರಗಳನ್ನು ತೆರೆದು,ದಿನವೊಂದರಲ್ಲಿಯೇ ಈವರೆಗಿನ ಗರಿಷ್ಠ ದಾಖಲೆಯಾದ 7931 ಡೋಸ್ ನೀಡುವ ಮೂಲಕ, ಕೋವಿಡ್ ಲಸಿಕಾ ಮಹಾಮೇಳ ಯಶಸ್ವಿಯಾಗಿ ನಡೆದಿತ್ತು.
ಲಸಿಕಾಕರಣದ ಕುರಿತು ನಡೆಸಿದ ವ್ಯಾಪಕ ಪ್ರಚಾರ,ಫಲಾನುಭವಿಗಳ ಪಟ್ಟಿ ತಯಾರಿಕೆ,ಚುನಾವಣಾ ಮಾದರಿಯಲ್ಲಿ ತೆಗೆದುಕೊಂಡ ಹಲವು ಕ್ರಮಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದು ಕೊಳ್ಳಲು ಜನರನ್ನು ಪ್ರೇರೇಪಿಸಿದಂತಿತ್ತು.ಜಿಲ್ಲಾಧಿಕಾರಿ ಮುಲ್ಯೆ ಮುಗಿಲನ್ ಅವರ್ಸಾಕ್ಕೆ ಭೇಟಿ ನೀಡಿ ಲಸಿಕಾಕರಣ ವ್ಯವಸ್ಥೆ ಪರಿಶೀಲಿಸಿದರು.
ಕುಮಟಾ ಎಸಿ ರಾಹುಲ್ ರತ್ನ ಪಾಂಡೆ, ತಹಶೀಲ್ದಾರ್ ಉದಯ ಕುಂಬಾರ್ ಮತ್ತಿತರ ಸಂಬಂಧಿತ ಸಂಬಂಧಿತ ಅಧಿಕಾರ ಹಾಗೂ ಸಿಬ್ಬಂದಿಗಳಿದ್ದರು. ಬಾಕಿ ಉಳಿದ ಲಸಿಕೆಗಳಲ್ಲಿ ಸೇ 18 ರ ಶನಿವಾರ ಅವರ್ಸಾ (60), ತಾಲೂಕಾ ಆಸ್ಪತ್ರೆ (80) , ಡಾ. ಕಮಲಾ ಮತ್ತು ಆರ್. ಎನ್. ನಾಯಕ ಆಸ್ಪತ್ರೆ (35), ಅರ್ಯ ಮೆಡಿಕಲ್ ( 33 ) ಡೋಸ್ ನೀಡಲಾಗಿದೆ. ನಾಳೆ ದಿ. 19 ರ ರವಿವಾರ ತಾಲೂಕಾ ಆಸ್ಪತ್ರೆಯಲ್ಲಿ 330 ಡೋಸ್ ಲಸಿಕೆ ಲಭ್ಯವಿದೆ, ಅರ್ಹ ಫಲಾನುಭವಿಗಳು ಲಸಿಕೆ ಪ್ರಯೋಜನ ಪಡೆದುಕೊಳ್ಳಬೇಕೆಂದು ತಾಲೂಕಾ ಆರೋಗ್ಯಾಧಿಕಾರಿ ಡಾ. ನಿತೀನ್ ಹೊಸ್ಮೇಲಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ