ಶಿರಸಿ- ಕೇವಲ ಉದ್ಯೋಗ ಖಾತ್ರಿಗೆ ಮಾತ್ರ ಸೀಮಿತವಾಗಿದ್ದ ಸಾಮಾಜಿಕ ಪರಿಶೋಧನೆ ಕೆಲವೇ ವರ್ಷಗಳಲ್ಲಿ ಅನೇಕ ಯೋಜನೆಗಳಿಗೆ ವಿಸ್ತಾರವಾಗಿದೆ. ಸಾಮಾಜಿಕ ಪರಿಶೋಧನೆಗೆ ಇಂದು ಸಾಕಷ್ಟು ಮಹತ್ವ ಮತ್ತು ಪ್ರಾಮುಖ್ಯತೆ ದೊರೆತಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ನಡೆಸಲ್ಪಡುವ ಗ್ರಾಮೀಣ ಭಾಗದ ಎಲ್ಲಾ ಯೋಜನೆಗಳಿಗೂ ಕಡ್ಡಾಯವಾಗಿ ಸಾಮಾಜಿಕ ಪರಿಶೋಧನೆ ನಡೆಸುವ ಮಹತ್ವದ ನಿರ್ಧಾರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯದ ರಾಜ್ಯ ಸಂಯೋಜಕ ಕೇಶವಮೂರ್ತಿ ತಿಳಿಸಿದರು.
ಅವರು ಸೋಮವಾರ ಶಿರಸಿ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಗಳ ಸಾಮಾಜಿಕ ಪರಿಶೋಧನೆ ಪ್ರಗತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಪರಿಶೋಧನೆ ಇನ್ನಷ್ಟು ಭಲಗೊಂಡಲ್ಲಿ ಯೋಜನೆಗಳಲ್ಲಿ ಇನ್ನೂ ಹೆಚ್ವಿನ ಪಾರದರ್ಶಕತೆ ಕಾಣಲು ಸಾಧ್ಯ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಸಂಯೋಜಕ ಗಣಪತಿ ಹೆಗಡೆ ಈ ಸಂದರ್ಭದಲ್ಲಿ ತಮ್ಮ ಜಿಲ್ಲೆಯ ೧೨ ತಾಲೂಕಿನ ಪ್ರಗತಿ ಬಗ್ಗೆ ತಿಳಿಸಿದರು.
ಹಾಗೂ ಹಾವೇರಿ ಜಿಲ್ಲಾ ಸಂಯೋಜಕ ಮಂಜುನಾಥ ಪಾಟಿಲ್ ಹಾವೇರಿ ಜಿಲ್ಲೆಯಲ್ಲಿ ನರೇಗಾ ಹಾಗೂ ಹಣಕಾಸು ಯೋಜನೆಗಳಲ್ಲಿ ಸಾಕಷ್ಟು ಕಾಮಗಾರಿ ನಡೆಯುತ್ತಿದ್ದು ಕೆಲವು ತಾಲೂಕುಗಳಲ್ಲಿ ಹೆಚ್ಚುವರಿ ಸಂಯೋಜಕರ ಸೇವೆ ಪಡೆದುಕೊಳ್ಳುತ್ತಿದ್ದೇವೆ ಎಂದು ಜಿಲ್ಲೆ ಪ್ರಗತಿ ಬಗ್ಗೆ ತಿಳಿಸಿದರು.
ಇದಕ್ಕೆ ಪೂರಕವಾಗಿ ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಯಿಂದ ಆಗಮಿಸಿದ ತಾಲೂಕು ಸಂಯೋಜಕರು ತಮ್ಮ ತಾಲೂಕಿನ ಪ್ರಗತಿ ಬಗ್ಗೆ ಸವಿಸ್ತಾರ ಮಾಹಿತಿ ತಿಳಿಸಿದರು.
ಮುಂದಿನ ದಿನಗಳಲ್ಲಿ ೨೦೨೧-೨೨ ರ ಸಾಮಾಜಿಕ ಪರಿಶೋಧನೆ ಬಗ್ಗೆ ಅದರ ಯಶಸ್ಸಿನ ಬಗ್ಗೆ ಕೈಗೊಳ್ಳುವ ಸಾಧಕ ಭಾದಕಗಳ ಬಗ್ಗೆ ರಾಜ್ಯಸಂಯೋಜಕರೊಂದಿಗೆ ಚರ್ಚೆ ನಡೆಯಿತು. ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಸುಮಾರು ಇಪ್ಪತ್ತು ಸಂಯೋಜಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಸಂಯೋಜಕ ಗಣಪತಿ ಹೆಗಡೆ ಈ ಸಂದರ್ಭದಲ್ಲಿ ತಮ್ಮ ಜಿಲ್ಲೆಯ ೧೨ ತಾಲೂಕಿನ ಪ್ರಗತಿ ಬಗ್ಗೆ ತಿಳಿಸಿದರು. ಹಾಗೂ ಹಾವೇರಿ ಜಿಲ್ಲಾ ಸಂಯೋಜಕ ಮಂಜುನಾಥ ಪಾಟಿಲ್ ಹಾವೇರಿ ಜಿಲ್ಲೆಯಲ್ಲಿ ನರೇಗಾ ಹಾಗೂ ಹಣಕಾಸು ಯೋಜನೆಗಳಲ್ಲಿ ಸಾಕಷ್ಟು ಕಾಮಗಾರಿ ನಡೆಯುತ್ತಿದ್ದು ಕೆಲವು ತಾಲೂಕುಗಳಲ್ಲಿ ಹೆಚ್ಚುವರಿ ಸಂಯೋಜಕರ ಸೇವೆ ಪಡೆದುಕೊಳ್ಳುತ್ತಿದ್ದೇವೆ ಎಂದು ಜಿಲ್ಲೆ ಪ್ರಗತಿ ಬಗ್ಗೆ ತಿಳಿಸಿದರು.
ಇದಕ್ಕೆ ಪೂರಕವಾಗಿ ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಯಿಂದ ಆಗಮಿಸಿದ ತಾಲೂಕು ಸಂಯೋಜಕರು ತಮ್ಮ ತಾಲೂಕಿನ ಪ್ರಗತಿ ಬಗ್ಗೆ ಸವಿಸ್ತಾರ ಮಾಹಿತಿ ತಿಳಿಸಿದರು.ಮುಂದಿನ ದಿನಗಳಲ್ಲಿ ೨೦೨೧-೨೨ ರ ಸಾಮಾಜಿಕ ಪರಿಶೋಧನೆ ಬಗ್ಗೆ ಅದರ ಯಶಸ್ಸಿನ ಬಗ್ಗೆ ಕೈಗೊಳ್ಳುವ ಸಾಧಕ ಭಾದಕಗಳ ಬಗ್ಗೆ ರಾಜ್ಯಸಂಯೋಜಕರೊಂದಿಗೆ ಚರ್ಚೆ ನಡೆಯಿತು. ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಸುಮಾರು ಇಪ್ಪತ್ತು ಸಂಯೋಜಕರು ಸಭೆಯಲ್ಲಿ ಉಪಸ್ಥಿತರಿದ್ದರು. ಮೊದಲಿಗೆ ಉ.ಕ.ಜಿಲ್ಲಾ ಸಂಯೋಜಕ ಗಣಪತಿ ಹೆಗಡೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.ಭಟ್ಕಳ ತಾಲೂಕು ಸಂಯೋಜಕ ಉಮೇಶ ಮುಂಡಳ್ಳಿ ವಂದಿಸಿದರು.