ಕುಮಟಾ, ಅಂಕೋಲಾದಲ್ಲಿ ನಾಳೆ ಎಲ್ಲೆಲ್ಲಿ ವ್ಯಾಕ್ಸಿನೇಷನ್ : ಲಸಿಕೆ ಲಭ್ಯತೆಯ ವಿವರ

ಕುಮಟಾ: ಪಟ್ಟಣದ ಉರ್ದು ಶಾಲೆ ವನ್ನಳ್ಳಿ, ಪುರಭವನ ಹೆಗಡೆ ಸರ್ಕಲ್, ತಾಲೂಕು ಹಾಸ್ಪಿಟಲ್ ಕುಮಟಾ ಇಲ್ಲಿ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕಾ ಕಾರ್ಯಕ್ರಮ ಮುಂದುವರಿಯಲಿದೆ.

22/9/2021 ರಂದು ಬೆಳಿಗ್ಗೆ 9.30 ರಿಂದ ಮದ್ಯಾಹ್ನ 2 ಗಂಟೆವರೆಗೆ ಲಸಿಕೆ ಪಡೆದು ಕೊಳ್ಳುವಂತೆ ವಿನಂತಿಸಲಾಗಿದೆ. ಅಲ್ಲದೆ ಈ ಕೆಳಗಿನ‌ ಸ್ಥಳದಲ್ಲಿ ಲಸಿಕಾಕರಣ ನಡೆಯಲಿದೆ.

ಅಂಕೋಲಾದಲ್ಲಿ ನಾಳೆ 20 ಕೇಂದ್ರಗಳಲ್ಲಿ ಲಸಿಕೆ ಲಭ್ಯತೆ. ಅಂಕೋಲಾ ಸೆ 21: ತಾಲೂಕಿನಲ್ಲಿ ಮಂಗಳವಾರ 1 ಹೊಸ ಕೋವಿಡ್ ಪಾಸಿಟಿವ್ ಕೇಸ ದಾಖಲಾಗಿದೆ. ಸೋಂಕು ಮುಕ್ತರಾದ ಓರ್ವರನ್ನು ಬಿಡುಗಡೆಗೊಳಿಸಲಾಗಿದೆ. ಈ ಮೂಲಕ 17 ಸಕ್ರಿಯ ಪ್ರಕರಣಗಳಿವೆ.

ಕ್ರಿಮ್ಸ್ ಕಾರವಾರ ಮತ್ತು ಕುಮಟಾದ ಖಾಸಗಿ ಆಸ್ಪತ್ರೆದಲ್ಲಿ ತಲಾ ಓರ್ವ ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 15 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3678 ಸೋಂಕು ಪ್ರಕರಣಗಳು ಪತ್ರೆಯಾಗಿದ್ದು, ಒಟ್ಟೂ 72 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ.

ಸೆ 22 ರ ಬುಧವಾರ ತಾಲೂಕ ಆಸ್ಪತ್ರೆ,ಪ್ರಾಥಮಿಕ ಆರೋಗ್ಯ ಕೇಂದ್ರ ಹಟ್ಟಿಕೇರಿ,ಪೂರ್ಣಪ್ರಜ್ಞ ಶಾಲೆ,ಗ್ರಾಮ ಪಂಚಾಯತ್ ಭಾವಿಕೇರಿ,ಗದಿಗೆಮಠ ಸಭಾಭವನ ಅಂಬಾರಕೊಡ್ಲ,ಗ್ರಾಮಪಂಚಾಯತ ಅವರ್ಸಾ,ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳೆಸೆ, ಹಿಪ್ರಾಶಾಲೆ ಮೂಡ್ರಾಣಿ ಬೆಳಂಬರ, ಹಿಪ್ರಾ ಶಾಲೆ ಹಿಚ್ಕಡ,ಹಿ ಪ್ರಾ ಶಾಲೆ ಅಗ್ರಗೋಣ, ಕಿ ಪ್ರಾ ಶಾಲೆ ಸಗಡಗೇರಿ,ಗ್ರಾಮ ಪಂಚಾಯತ್ ಅಚವೆ, ದೇವಿಗದ್ದೆ ಅಂಗನವಾಡಿ,ಉಪ ಕೇಂದ್ರ ಆಂದ್ಲೆ,ಪ್ರಾಥಮಿಕ ಆರೋಗ್ಯ ಕೇಂದ್ರ ಹಿಲ್ಲೂರು,ಉಪ ಕೇಂದ್ರಗಳಾದ ಅಗಸೂರು,ಸುಂಕಸಾಳ, ಕೊಡ್ಸಣಿ, ಹಳವಳ್ಳಿ ,ಪ್ರಾಥಮಿಕ ಆರೋಗ್ಯ ಕೇಂದ್ರ ರಾಮನಗುಳಿ ಸೇರಿ ಒಟ್ಟು ಇಪ್ಪತ್ತು ಕೇಂದ್ರಗಳಲ್ಲಿ ಲಸಿಕಾ ಕರಣ ನಡೆಯಲಿದೆ.

ಸಾರ್ವಜನಿಕರು ಲಸಿಕೆ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಎಲ್ಲೆಲ್ಲಿ ಎಷ್ಟು ಲಸಿಕೆಗಳು ಲಭ್ಯವಿವೆ ಮತ್ತು ಯಾವ ವೇಳೆ ಲಭ್ಯವಿದೆ ಎಂಬ ಹೆಚ್ಚಿನ ಮಾಹಿತಿಗಾಗಿ,ಸ್ಥಳೀಯ ಆಶಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಹಾಗೂ ವೈದ್ಯರನ್ನು ಸಂಪರ್ಕಿಸಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version