ಕುಸಿಯುವ ಭೀತಿಯಲ್ಲೇ ಹಳೆಕಟ್ಟಡದಲ್ಲಿ ವಾಸುತ್ತಿದ್ದ ವೃದ್ಧೆ: ಗಂಡ, ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡು ಅಸಹಾಯಕಳಾಗಿದ್ದವಳಿಗೆ ಇವರು ಮಾಡಿದ ಸಹಾಯ ನೋಡಿ? ಈ ಯುವಕರನ್ನು ಅಭಿನಂದಿಸಿ
ಕಾರವಾರ: ಗಂಡ ಮತ್ತು ಎರಡು ಗಂಡು ಮಕ್ಕಳನ್ನು ಕಳೆದುಕೊಂಡಿದ್ದ ವೃದ್ಧೆ ಅಸಹಾಯಕಳಾಗಿದ್ದಳು. ಕುಟುಂಬ ಸದಸ್ಯರಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿದ್ದಳು. ಈ ವೃದ್ಧೆಯೋರ್ವಳ ನೆರವಿಗೆ ತಾಲ್ಲೂಕಿನ ಚೆಂಡಿಯಾದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಹಾಗೂ ಊರನಾಗರಿಕರು ಮುಂದಾಗಿದ್ದು, ನಿಜವಾಗಲು ಮಾದರಿಯ ಕಾರ್ಯವೇ ಸರಿ.
ಮನೆಯ ಒಂದು ಭಾಗ ಈಗಾಗಲೇ ಮಳೆಗೆ ಕುಸಿದು ಬಿದ್ದಿದೆ. ಇದ್ದ ಸ್ವಲ್ಪ ಭಾಗದ ಗೋಡೆ ಕೂಡ ಕುಸಿಯುವ ಹಂತದಲ್ಲಿತ್ತು. ವಿಷಯ ತಿಳಿದ ಸಮಿತಿಯವರು, ಈಗಾಗಲೇ ಮನೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದೆ. ತಾಲೂಕಿನ ಚೆಂಡಿಯಾ ಗ್ರಾಮದ ಸುಬ್ರಮಣ್ಯ ನಗರದ ಪಾರ್ವತಿ ಮಹಾಬಲೇಶ್ವರ ಮಹಾಲೆ ಮುರುಕು ಮನೆಯಲ್ಲಿ ವಾಸಮಾಡುತ್ತಿದ್ದರು.
ಹೌದು, ಈ ವಿಷಯ ತಿಳಿದ ಚೆಂಡಿಯಾದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಸದಸ್ಯರು ಸಹಾಯ ಮಾಡಲು ಮುಂದಾಗಿದ್ದರು. ಸಮಿತಿಯವರು ಬಡ ವೃದ್ಧಿಗೆ ಮನೆ ಕಟ್ಟಿಕೊಡುವುದು ತಿಳಿಯುತ್ತಿದ್ದಂತೆಪ್ರೇರಣೆಗೊoಡ ಊರಿನ ನಾಗರಿಕರು ಕೂಡ ಸಹಾಯಕ್ಕೆ ನಿಂತಿದ್ದಾರೆ. ಸುಮಾರು 2.50 ಲಕ್ಷ ವೆಚ್ಚದಲ್ಲಿ ಹಳೆ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581