ಅಂಕೋಲಾ : ನಾಡಿನ ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಶಿರಸಿಯ ಶ್ರೀ ಮಾರಿಕಾಂಬಾ ದೇವಿಗೆ ದೇಶ-ವಿದೇಶಗಳಲ್ಲಿ ಕೋಟ್ಯಂತರ ಭಕ್ತರಿದ್ದಾರೆ.
ಶ್ರೀ ದೇವಿಯ ಸ್ಮರಣೆ ಮತ್ತು ದರ್ಶನಭಾಗ್ಯದಿಂದಲೇ ತಮ್ಮ ಸಂಕಷ್ಟಗಳು ದೂರವಾಗುವವೆಂಬ ನಂಬಿಕೆ ಹಲವು ಭಕ್ತರದ್ದು, ಅವರಲ್ಲಿಯೇ ಕೆಲವು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ,ತಾಯಿಯ ಸೇವಾ ಕೈಂಕರ್ಯ,ಹರಕೆ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.
ಅಂಕೋಲಾ ತಾಲೂಕಿನ ಮಂಜುಗುಣಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಪೂಜಗೇರಿ ಎಂಬ ಪುಟ್ಟ ಗ್ರಾಮದ ಹಲವರು,ಸ್ಥಳೀಯವಾಗಿ ಮತ್ತು ಅಕ್ಕಪಕ್ಕದ ಬೇರೆಬೇರೆ ಊರುಗಳಿಂದ ಕಷ್ಟಪಟ್ಟು ಹೂವಿನ ಮೊಗ್ಗುಗಳನ್ನು ಆಯ್ದು ತಂದು,ಸುಂದರವಾಗಿ ಪೋಣಿಸಿ,ಅಂಕೋಲಾ ಕಾರವಾರ ಮತ್ತಿತರೆಡೆ ಹೂವಿನ ವ್ಯಾಪಾರ ಮಾಡಿ,ತಮ್ಮ ಜೀವನೋಪಾಯ ನಡೆಸುತ್ತಿದ್ದಾರೆ.
ಅಂತಹ ಹೂವು ಬೆಳೆಗಾರರು ಹಾಗೂ ಮಾರಾಟಗಾರರಲ್ಲಿ ಬಹುತೇಕರು ಪ್ರತಿವರ್ಷ ಶಿರಸಿಯ ಮಾರಿಕಾಂಬಾ ಸನ್ನಿಧಿಗೆ ಬಂದು,ದೇವಿಗೆ ಸಂಪೂರ್ಣವಾಗಿ ಹೂವಿನ ಅಲಂಕಾರ ಮಾಡಿ ತಮ್ಮ ಭಕ್ತಿಯನ್ನು ಮೆರೆಯುತ್ತಾರೆ. ಅಂಕೋಲಾದ ಹೂವುಗಳಲ್ಲಿ ಜಾಜಿ ಹೂವಿಗೆ ವಿಶೇಷ ಬೇಡಿಕೆ ಇದ್ದು ಜಾಜಿ ಹೂವುಗಳ ಸುಗಂಧವೂ ವಿಶಿಷ್ಟವಾದುದು.ಜಾಜಿ ಹೂವಿನ ಅಲಂಕಾರದಿಂದ ಸರ್ವ ಶೋಭಾಯಮಾನವಾಗಿ ಕಂಗೊಳಿಸುವ,ತಾಯಿ ಮಾರಿಕಾಂಬೆಯನ್ನು ಕಣ್ತುಂಬಿಸಿಕೊಳ್ಳುವುದೇ ಭಕ್ತರ ಪಾಲಿಗೆ ಒಂದು ಸೌಭಾಗ್ಯ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ