Follow Us On

WhatsApp Group
Info
Trending

ಸಾರ್ವಜನಿಕ ಶಿಕ್ಷಣ ಇಲಾಖೆಯ ಪೋಷಣಾ ಅಭಿಯಾನ: ಮಕ್ಕಳಿಗೆ ಪೌಷ್ಠಿಕ ಆಹಾರದ ಸೇವನೆ ಕುರಿತು ಅರಿವು

ಸಿದ್ದಾಪುರ: ಮಕ್ಕಳಿಗೆ ಪೌಷ್ಠಿಕ ಆಹಾರದ ಸೇವನೆ ಕುರಿತು ಅರಿವು ಮೂಡಿಸುವ ಸಂಬಂಧ ತಾಲ್ಲೂಕಿನ ದೊಡ್ಮನೆ ಪಂಚಾಯಿತಿ ವ್ಯಾಪ್ತಿಯ ಬಿಳೇಗೋಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಎಲ್ಲರ ಗಮನ ಸೆಳೆಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಪೋಷಣಾ ಅಭಿಯಾನದ ಅಂಗವಾಗಿ ಶಾಲೆಯಲ್ಲಿ ಆಯೋಜಿಸಿದ್ದ ಆಹಾರ ಮೇಳಕ್ಕೆ ಮನೆಗಳಲ್ಲಿ ಬೆಳೆದ ತರಕಾರಿಗಳನ್ನು ತಂದಿದ್ದ ವಿದ್ಯಾರ್ಥಿಗಳು ಅದನ್ನು ಪ್ರದರ್ಶಿಸಿ ಅವುಗಳಲ್ಲಿರುವ  ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು.

ಅಲ್ಲದೆ ಯಾವ ಯಾವ ತರಕಾರಿಗಳನ್ನು ಹಾಗೂ ದವದ ಧಾನ್ಯಗಳನ್ನು ಸೇವೆಸುವುದರಿಂದ ಆರೋಗ್ಯಕ್ಕೆ ಎಷ್ಟು ಉಪಯೋಗಕಾರಿ ಎಂಬುದರ ಬಗ್ಗೆ ಶಿಕ್ಷಕರು ಅಕ್ಕಿ ಹಾಗೂ ದಾನ್ಯಗಳಿಂದ ತಯಾರಿಸಿದ ತಕ್ಕಡಿಯ ಮಾದರಿ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.ಅಲ್ಲದೆ ಇದೇ ಸಂದರ್ಭದಲ್ಲಿ ಮಕ್ಕಳು ಮನೆಯಿಂದ ತಯಾರಿಸಿಕೊಂಡು  ಬಂದಂತಹ ಪೋಷಕಾಂಶಯುಕ್ತ ರಾಗಿ ಮುದ್ದೆ, ಪಾಯಸ, ಕೆಸುವಿನ ಕರಕಲಿ, ರೊಟ್ಟಿ, ಉಸುಳಿ, ಪೂರಿ, ಪಲಾವ್, ಹಲ್ವ, ಉಪ್ಪಿಟ್ಟು ಸೇರಿದಂತೆ ಇತ್ಯಾದಿ ಸ್ಥಳೀಯ ಆಹಾರವನ್ನು ಪ್ರದರ್ಶಿಸಿ ಬಳಿಕ ಎಲ್ಲರೊಂದಿಗೆ ಸೇರಿ ಸೇವಿಸಿದರು.

ಈ ವೇಳೆ ನಿವೃತ್ತ ಶಿಕ್ಷಕ ಮಂಜುನಾಥ ಭಟ್ ಉಪನ್ಯಾಸ ನೀಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ಹೆಗಡೆ, ಸದಸ್ಯರಾದ ತ್ರಿವೇಣಿ ಭಟ್ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮೋಹಿನಿ ದೇಶಭಂಡಾರಿ ಸ್ವಾಗತಿಸಿದರು. ಸಹ ಶಿಕ್ಷಕಿ ವನಿತಾ ನಾಯ್ಕ ವಂದಿಸಿದರು.

ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ?
ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571

Back to top button