ಮನೆಯ ಟೆರೇಸ್‌ನಲ್ಲಿದ್ದ ವ್ಯಕ್ತಿಗೆ ರಾಡ್ ನಿಂದ ಹೊಡೆದು ಕೊಲೆ: ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ

ಗೋಕರ್ಣ: ಮನೆಯ ಟೆರೇಸ್ ಮೇಲೆ ಇದ್ದ ವ್ಯಕ್ತಿಯನ್ನು ರಾಡ್ ನಿಂದ ಹೊಡೆದು ಸಾಯಿಸಿ, ಬಳಿಕ ಅಲ್ಲಿಂದ ಪರಾರಿಯಾಗಲು ಆರೋಪಿ ಯತ್ನಿಸಿದ ಘಟನೆ ತಾಲೂಕಿನ ತದಡಿಯಲ್ಲಿ ನಡೆದಿದೆ. ಹೌದು, ಬೆಳ್ಳಂಬೆಳಿಗ್ಗೆ ಟೆರೇಸ್ ಮೇಲೆ ಇದ್ದ ವ್ಯಕ್ತಿಗೆ ರಾಡ್ ನಿಂದ ಹೊಡೆದು ಸಾಯಿಸಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಆರೋಪಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಓಡಿ ಹೋಗಿ ಸಮುದ್ರದಲ್ಲಿ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಸ್ಥಳಿಯರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕೊಲೆಯಾದ ವ್ಯಕ್ತಿಯನ್ನು ವಿವೇಕಾನಂದ ಪುತ್ತು ಶ್ಯಾನಭಾಗ ತದಡಿಯ ನಿವಾಸಿ ಎಂದು ತಿಳಿದುಬಂದಿದೆ. ಕೊಲೆ ಮಾಡಿದ ಆರೋಪಿ ಓರಿಸ್ಸಾ ಮೂಲದವನಾಗಿದ್ದು, ತದಡಿ ಬಂದರಿನಲ್ಲಿ ಮೀನುಗಾರಿಕೆಗೆ ಬಂದಿದ್ದ ಎನ್ನಲಾಗಿದೆ. ಕೊಲೆಗೆ ಸರಿಯಾದ ಕಾರಣ ತಿಳಿದುಬಂದಿಲ್ಲ. ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಗೋಕರ್ಣ

ನಿಮ್ಮೂರಲ್ಲೂ ಸೂಪರ್ ಸ್ಟೋರ್ ಮಾಡಬೇಕೆ?
ಸ್ಟೋರ್ ಕಿಂಗ್, ಸ್ಮಾರ್ಟ್ ಸೂಪರ್ ಸ್ಟೋರ್: ನಿಮಗೆ ನೀವೆ ಮಾಲೀಕರಾಗಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ತಂತ್ರಜ್ಞಾನ ಚಾಲಿತ ಸೂಪರ್ ಮಾರ್ಕೆಟ್ ನಿರ್ಮಿಸಿ ಹಾಗು ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ. ಸಣ್ಣ ಮಟ್ಟದ ಬಂಡಾವಳ ಹೂಡಿಕೆ ಮಾಡಿ, ನಮ್ಮೊಂದಿಗೆ ಪಾಲುದಾರರಾಗಿ.. ನಿಮ್ಮೂರಲ್ಲೂ ಸೂಪರ್ ಮಾರ್ಕೆಟ್ ನಿರ್ಮಿಸಬೇಕೆಂದಿದ್ದರೆ, ಇದಕ್ಕಿಂತ ಒಳ್ಳೆಯ ಸುವರ್ಣಾವಕಾಶ ಇನ್ನೊಂದಿಲ್ಲ. ತಂತ್ರಜ್ಞಾನ, ಪ್ರಾಡೆಕ್ಟ್, ಲಾಜಿಸ್ಟಿಕ್ಟ್ ನಿಂದ ಹಿಡಿದು ಎಲ್ಲ ರೀತಿಯ ಬೆಂಬಲವನ್ನೂ ನಾವು ನಿಮಗೆ ನೀಡುತ್ತೇವೆ. ತಿಂಗಳಿಗೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸಿರಿ : 7338463571

Exit mobile version